ಎಸೆಸ್ಸೆಲ್ಸಿ/ಪಿಯುಸಿ ಡಿಸ್ಟಿಂಕ್ಷನ್ ವಿಜೇತ ಸರಕಾರಿ ನೌಕರರ ಮಕ್ಕಳಿಗೆ ತಾ|ಸರಕಾರಿ ನೌಕರರ ಸಂಘದಿಂದ ಅಭಿನಂದನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ತಾಲೂಕಿನ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸರಕಾರಿ ನೌಕರರ ಮಕ್ಕಳು ಎಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದವರಿಗೆ ರಾಜ್ಯ ಸರಕಾರಿ ನೌಕರರ ಸಂಘ ಇದರ ತಾಲೂಕು ಶಾಖೆಯ ವತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಸುವ ಕಾರ್ಯಕ್ರಮ ನ.24 ರಂದು ಮಿನಿ ವಿಧಾನಸೌಧದ ಬಳಿಯಲ್ಲಿನ ಸರಕಾರಿ ನೌಕರರ ಸಂಘದ ಸಮುದಾಯ ಭವನದಲ್ಲಿ ಸಂಜೆ ಏರ್ಪಡಿಸಲಾಗಿತ್ತು.


ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿನೀತ್ ಐ.ಜೆ, ರೋಹನ್ ಐ, ಎಂ.ಎಸ್ ಶ್ರೇಯಾ ರೈ, ಬೆನ್ಹರ್ ಜೆರೋಮ್ ವೇಗಸ್, ಗಣೇಶ್ ಪ್ರಸಾದ್ ಎಂ, ಜೆನಿಶ್ ಮಾರ್ಟಿಸ್, ಸಿಂಧೂರ ರೈ, ಹಿಮಾನಿ ಮುತ್ಲಾಜೆ, ವೈಷ್ಣವಿ ಯು.ಎನ್, ಆಶಿತ್ ಡಿ, ಶ್ರಾವ್ಯ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಕ್ಷಾತ್ ಎಚ್.ಎಂ, ಧೀಮಂತ್ ಶೆಟ್ಟಿ ಜಿ.ಪಿ, ಅಮನ್ ಕೆ.ಪಿ, ದೀಕ್ಷಾ ಕೆ.ಎಸ್, ಕ್ರಿಸ್ಟನ್ ಸೋಹನ್ ಡಿ’ಸೋಜರವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಎಸ್.ಷಡಕ್ಷರಿರವರ ಮಾರ್ಗದರ್ಶನದಲ್ಲಿ ಜಿಲ್ಲಾಧ್ಯಕ್ಷರ ಮುಖಾಂತರ ಡಿಸ್ಟಿಂಕ್ಷನ್ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡುವ ಕಾರ್ಯಕ್ರಮವಿತ್ತು. ಆದರೆ ಕೋವಿಡ್‌ನಿಂದಾಗಿ ತಾಲೂಕು ಶಾಖೆಯಲ್ಲಿ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ತಾಲೂಕು ಸರಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಮಾಜಿ ಅಧ್ಯಕ್ಷ ಕೃಷ್ಣಪ್ಪ ಕೆ, ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ್ ಬಿ, ಉಪಾಧ್ಯಕ್ಷ ರಾಮಚಂದ್ರ ಭಟ್, ಕಾರ್ಯಕಾರಿ ಸಮಿತಿ ಸದಸ್ಯರಾದ ಕೃಷ್ಣಪ್ರಸಾದ್ ಭಂಡಾರಿ, ಕೃಷ್ಣ ಡಿ, ಹೊನ್ನಪ್ಪ ಗೌಡ, ರವಿಚಂದ್ರ, ಮಹಮದ್ ಅಶ್ರಫ್, ತಾಲೂಕು ಸರಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷ ಸೀತಾರಾಮ್‌ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪೋಷಕಿ ರೆನಿಟ ಸುಶ್ಮಾ ಡಿ’ಸೋಜರವರು ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯದರ್ಶಿ ಅಬ್ರಹಾಂ ಎಸ್.ಎ ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಸದಸ್ಯ ವಿನೋದ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಸಮಸ್ಯೆಗಳಿದ್ದಲ್ಲಿ ತಿಳಿಸಿ, ಸ್ಪಂದಿಸುತ್ತೇವೆ..
28 ಸರಕಾರಿ ಇಲಾಖೆಯಲ್ಲಿನ ಸರಕಾರಿ ನೌಕರರ ಯಾರ ಮಕ್ಕಳಿಗೆ ಎಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಜಾಸ್ತಿ ಪಡೆದಿದ್ದಾರೆಯೋ ಅವರಿಗೆ ಮೊದಲಾಗಿ ತಿಳಿಸಿದ್ದೇವು. ಸ್ಮರಣಿಕೆ ವಿತರಣೆ ಕಾರ್ಯಕ್ರಮ ಜಿಲ್ಲಾ ಮಟ್ಟದಲ್ಲಿ ಆಗಬೇಕಿತ್ತು. ಅನಿವಾರ್ಯ ಕಾರಣದಿಂದ ತಾಲೂಕು ಶಾಖೆಯಲ್ಲಿ ಸಾಂಕೇತಿಕವಾಗಿ ವಿತರಣೆ ಮಾಡಿದ್ದೇವೆ. ಯಾವುದೇ ಇಲಾಖೆಯಲ್ಲಿನ ಸರಕಾರಿ ನೌಕರರಿಗೆ ಏನಾದರೂ ಸಮಸ್ಯೆಗಳು ಆಗಿದ್ದಲ್ಲಿ ನಮ್ಮ ಶಾಖೆಗೆ ಬಂದು ತಿಳಿಸಿದಾಗ, ಆವಾಗ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ –  ಶಿವಾನಂದ ಆಚಾರ್ಯ, ಅಧ್ಯಕ್ಷರು, ತಾಲೂಕು ಸರಕಾರಿ ನೌಕರರ ಸಂಘ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.