ಕೊಂಬೆಟ್ಟು ಮುಸ್ಲಿಂ ವಿದ್ಯಾರ್ಥಿಗಳಿಗೆ ಹಲ್ಲೆ ಪ್ರಕರಣ ಖಂಡಿಸಿ ಮಸೀದಿಯಲ್ಲಿ ಮುಸ್ಲಿಂ ಒಕ್ಕೂಟದ ತುರ್ತು ಸಭೆ – ಪೊಲೀಸ್ ಠಾಣೆಗೆ ತೆರಳಿದ ನಿಯೋಗದಿಂದ ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಎಫ್‌ಐಆರ್ ಮಾಡದಿದ್ದರೆ ಬೃಹತ್ ಪ್ರತಿಭಟನೆ – ಅಶ್ರಫ್ ಅಗ್ನಾಡಿ
  • ಕಾನೂನಾತ್ಮಕ ಹೋರಾಟಕ್ಕೆ ಸಿದ್ದ – ಅಶ್ರಫ್ ಕಲ್ಲೇಗ

ಪುತ್ತೂರು: ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿರುವ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಪುತ್ತೂರು ತಾಲೂಕು ಮುಸ್ಲಿಂ ಒಕ್ಕೂಟದ ನೇತೃತ್ವದಲ್ಲಿ ನ.25ರಂದು ಬದ್ರಿಯಾ ಮಸೀದಿ ಹಾಲ್‌ನಲ್ಲಿ ಪ್ರಮುಖರು ಸಭೆ ನಡೆಸಿ ಬಳಿಕ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳುವಂತೆ ಡಿವೈಎಸ್ಪಿ, ಪ್ರೊಬೆಷನರಿ ಎ.ಎಸ್ಪಿ ಅವರ ಜೊತೆ ಮಾತುಕತೆ ನಡೆಸಲಾಯಿತು. ಈ ಸಂದರ್ಭ ಪೊಲೀಸ್ ಠಾಣೆಯಲ್ಲಿ ನೂರಾರು ಮಂದಿ ಮುಸ್ಲಿಂ ಸಮುದಾಯದವರು ಜಮಾಯಿಸಿದ್ದರು.


ಬೆಳಿಗ್ಗೆ ಪುತ್ತೂರು ಬದ್ರಿಯಾ ಮಸೀದಿಯ ಆವರಣದಲ್ಲಿ ಸಭೆ ಸೇರಿದ ಪುತ್ತೂರು ಮುಸ್ಲಿಂ ಒಕ್ಕೂಟದ ಪ್ರಮುಖರು ಕೊಂಬೆಟ್ಟಿನಲ್ಲಿ ನಡೆದಿರುವ ಮುಸ್ಲಿಂ ವಿದ್ಯಾರ್ಥಿಗಳ ಹಲ್ಲೆಗೆ ಸಂಬಂಧಿಸಿ ಘಟನೆಯನ್ನು ಕೂಲಂಕುಶವಾಗಿ ತನಿಖೆ ಮಾಡುವುದು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು. ಅದೆ ರೀತಿ ಈ ಘಟನೆಯ ಷಡ್ಯಂತ್ರ್ಯಕ್ಕೆ ಕಾರಣಕರ್ತರಾದ ವ್ಯಕ್ತಿ ಮತ್ತು ಸಂಘಟನೆಗಳ ಕುರಿತು ತನಿಖೆ ನಡೆಸುವುದು. ಮುಂದಿನ ದಿನಗಳಲ್ಲಿ ಇಂತಹ ಘಟನೆ ಮತ್ತೆ ಮರುಕಳಿಸದಂತೆ ಮುಂಜಾಗ್ರತೆ ವಹಿಸಬೇಕೆಂದು ಮನವಿ ಮಾಡುವುದೆಂದು ಸಭೆಯಲ್ಲಿ ನಿರ್ಣಯಿಸಿದಂತೆ ಸಭೆಯ ಬಳಿಕ ಮುಸ್ಲಿಂ ಒಕ್ಕೂಟದ ನಿಯೋಗ ಪೊಲೀಸ್ ಠಾಣೆಗೆ ತೆರಳಿ ಅಲ್ಲಿ ಡಿವೈಎಸ್ಪಿ ಡಾ.ಗಾನ ಪಿ ಕುಮಾರ್, ಪ್ರೊಬೇಷನರಿ ಎ.ಎಸ್ಪಿ ಧನ್ಯ ಅವರೊಂದಿಗೆ ತಮ್ಮ ಆಗ್ರಹವನ್ನು ವ್ಯಕ್ತಪಡಿಸಿದರು. ಮುಸ್ಲಿಂ ಒಕ್ಕೂಟದ ಸಂಚಾಲಕ ಅಶ್ರಫ್ ಕಲ್ಲೇಗ, ಗೋಳಿಕಟ್ಟೆ ಮಸೀದಿ ಉಪಾಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ, ಕೇಂದ್ರ ಮಸೀದಿ ಅಧ್ಯಕ್ಷ ಎಲ್.ಟಿ.ರಜಾಕ್ ಹಾಜಿ, ನ್ಯಾಯವಾದಿ ಅಶ್ರಫ್ ಅಗ್ನಾಡಿ, ಪಿಎಫ್‌ಐ ಜಿಲ್ಲಾಧ್ಯಕ್ಷ ಜಾಬೀರ್ ಅರಿಯಡ್ಕ, ಎಸ್‌ಡಿಪಿಐ ಮುಖಂಡರಾದ ಸಿದ್ದಿಕ್ ಎ, ಇಬ್ರಾಹಿಂ ಸಾಗರ್, ಹಮೀದ್ ಸಾಲ್ಮರ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಸುಮಾರು ಮುಕ್ಕಾಲು ಗಂಟೆ ಮಾತುಕತೆ ನಡೆಸಿದರು. ಮಾತುಕತೆ ಬಳಿಕ ಹೊರ ಬಂದ ಮುಖಂಡರು ಆರಂಭದಲ್ಲಿ ಹೊರಗೆ ಜಮಾಯಿಸಿದ ಮುಸ್ಲಿಂ ಒಕ್ಕೂಟದ ಪ್ರಮುಖರೊಂದಿಗೆ ಆರಂಭದಲ್ಲಿ ಚರ್ಚಿಸಿ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದರು.


ಎಫ್‌ಐಆರ್ ಮಾಡದಿದ್ದರೆ ಬೃಹತ್ ಪ್ರತಿಭಟನೆ:
ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಕಾನೂನಾತ್ಮಕ ಅಂಶಗಳನ್ನ ನಾವು ಪೂರೈಕೆ ಮಾಡುತ್ತೇವೆ. ಒಂದು ವೇಳೆ ತನಿಖೆ ಮತ್ತು ಎಫ್‌ಐಆರ್ ಮಾಡಿಲ್ಲ ಎಂದಾದರೆ ನಾವು ಕೂಡಾ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಮಾಡಲಿದ್ದೇವೆ ಎಂದು ನ್ಯಾಯವಾದಿ ಅಶ್ರಫ್ ಅಗ್ನಾಡಿ ಅವರು ಹೇಳಿದ್ದಾರೆ.

ಅವರು ಠಾಣೆಯ ಹೊರಗೆ ಪತ್ರಿಕಾ ಮಾದ್ಯಮದವರೊಂದಿಗೆ ಮಾತನಾಡಿ ತ್ರಿಶೂಲದಿಂದ ಚುಚ್ಚಿರುವ ಘಟನೆ ಕಾಲೇಜು ಕ್ಯಾಂಪಸ್ ಬಳಿ ನಡೆದಿರುವುದು ಖಂಡನೀಯ. ಈ ಕುರಿತು ತನಿಖೆ ನಡೆಸುತ್ತೇವೆ ಎಂದು ಡಿವೈಎಪಿ ಭರವಸೆ ನೀಡಿದಾರೆ. ತನಿಖೆಯ ಹಂತದಲ್ಲಿದ್ದೆ. ಅಪರಾಧಿಗಳನ್ನು ಕಾನೂನು ಕ್ರಮ ಕೈಗೊಳ್ಳುತ್ತೆವೆ. ಮುಂದಿನ ದಿನಗಳಲಿ ಇದು ಮರುಕಳಿಸದಂತೆ ಸಂಬಂಧಪಟ್ಟ ಕಾಲೇಜು ಆಡಳಿತಕ್ಕೆ ಶಿಕ್ಷಣ ಇಲಾಖೆಗೆ ತಿಳಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ ಎಂದ ಅವರು ಘಟನೆಗಳು ಮುಂದುವರಿದರೆ ತ್ರಿಶೂಲ ದೀಕ್ಷೆ ಮಾಡಿದ ರಾಜಕೀಯ ಪಕ್ಷ ಇದನ್ನು ಗಂಭೀರವಾಗಿ ಪರಿಗಣಿಸಬೇಕಾದಿತು. ವಿದ್ಯಾರ್ಥಿಗಳ ಬ್ರೈನ್ ವಾಶ್ ಮಾಡುವ ಸಂಘಟನೆಗಳ ವಿರುದ್ಧ ಕಾನೂತಾತ್ಮಕವಾಗಿ ಕ್ರಮ ಕೈಗೊಳ್ಳಬೇಕು. ಮುಂದಿನ ದಿನ ನಮ್ಮ ಸಂಘಟನೆ ಹಿರಿಯರೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬರಲಿದ್ದೇವೆ ಎಂದು ಹೇಳಿದರು.

ಕಾನೂನಾತ್ಮಕ ಹೋರಾಟಕ್ಕೆ ಸಿದ್ದ:
ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದವರ ಬಂಧನಕ್ಕೆ ಮನವಿ ಮಾಡಿದ್ದೇವೆ. ಮುಂದೆ ಇಂತಹ ಘಟನೆಗೆ ಆಸ್ಪದ ಕೊಡುವುದಿಲ್ಲ ಎಂದು ಅಧಿಕಾರಿಗಳು ಭರವಸೆ ಕೊಟ್ಟಿದ್ದಾರೆ. ಜೊತೆಗೆ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಸಮುದಾವಯವನ್ನು ಸೇರಿಸಿ ಒಂದು ಸಭೆ ಮಾಡುವುದಾಗಿ ಡಿವೈಎಸ್ಪಿ ಅವರು ಹೇಳಿದ್ದಾರೆ. ಅವರ ಭರವಸೆಯಂತೆ ಕಾನೂನಾತ್ಮಕವಾಗಿ ಏನು ಮಾಡುತ್ತಾರೆ ಎಂದು ನೋಡಿ ಮುಂದಿನ ದಿನ ಬೇಕಾದ ಕಾನೂನಾತ್ಮಕವಾಗಿ ಹೋರಾಟಕ್ಕೆ ನಾವು ಸಿದ್ದರಿದ್ದೇವೆ ಎಂದು ಮುಸ್ಲಿಂ ಒಕ್ಕೂಟದ ಸಂಚಾಲಕ ಅಶ್ರಫ್ ಕಲ್ಲೇಗ ಅವರು ತಿಳಿಸಿದರು.

ಮಾದ್ಯಮಕ್ಕೆ ಮತ್ತೆ ಬೈಟ್ ಕೊಡುತ್ತೇವೆ
ಮುಸ್ಲಿಂ ಒಕ್ಕೂಟದ ನಿಯೋಗದ ಪ್ರಮುಖರು ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಹೊರ ಬರುತ್ತಿದ್ದಂತೆಯೇ ಮಾದ್ಯಮದವರು ಬೈಟ್ ಕೇಳಿದಾಗ ಮಾದ್ಯಮದಲ್ಲಿ ಊಹಾ ಪೋಹ ಬರುವುದು ಬೇಡ. ಹಾಗಾಗಿ ನಾವು ನಮ್ಮ ಪ್ರಮುಖರೊಂದಿಗೆ ಮಾತನಾಡಿಕೊಂಡು ಬಳಿಕ ನಿಮಗೆ ಬೈಟ್ ಕೊಡುತ್ತೇವೆ ಎಂದು ಹೇಳಿದ ಘಟನೆಯೂ ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.