ಕೊರೋನಾವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು – ನಗರಸಭೆಯಿಂದ ನ.26 ಮತ್ತು 27 ‘ಕೋವಿಡ್-19 ಲಕ್ಷ ಲಸಿಕಾ’ ಅಭಿಯಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾನವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ನಗರಸಭಾ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆಯ ಸಹಕಾರದೊಂದಿಎ ನ.26 ಮತ್ತು 27ರಂದು ಎರಡು ದಿನಗಳ ಕಾಲ ‘ಕೋವಿಡ್ -19 ಲಕ್ಷ ಲಸಿಕಾ’ ಅಭಿಯಾನ ನಡೆಯಲಿದೆ ಎಂದು ಪುತ್ತೂರು ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ತಿಳಿಸಿದ್ದಾರೆ.

ಈಗಾಗಲೇ ಪ್ರಥಮ ಲಸಿಕೆ ಪಡಕೊಂಡ ಮತ್ತು ದ್ವಿತೀಯ ಲಸಿಕೆ ಪಡಕೊಳ್ಳದವರು ಮತ್ತು ಈವರೆಗೆ ಪ್ರಥಮ ಲಸಿಕೆ ಪಡಕೊಳ್ಳದವರು ಲಸಿಕೆಯನ್ನು ಕಡ್ಡಾಯವಾಗಿ ಪಡಕೊಂಡು ಕೊರೋನಾ ನಿಯಂತ್ರಣಕ್ಕೆ ಸಹಕರಿಸುವಂತೆ ಕೋರಲಾಗಿದೆ. ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರಸಭಾ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಮನೆ ಮನೆ ಭೇಟಿ ನೀಡಿ ಲಸಿಕೆ ವಿವರ ಪಡೆದುಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಲಸಿಕೆ ಕೇಂದ್ರಗಳು:
ತಾಲೂಕು ಸಾರ್ವಜನಿಕ ಆಸ್ಪತ್ರೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಲಿಕಟ್ಟೆ ಪುತ್ತೂರು ಮತ್ತು ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಲು ಅಶಕ್ತರಾದವರಿಗೆ ಮೊಬೈಲ್ ಲಸಿಕೆ ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆ. ಅಗತ್ಯತೆ ಉಳ್ಳವರು ನಗರಸಭೆ ಕಚೇರಿ ದೂರವಾಣಿ ಸಂಖ್ಯೆ 08251-230251, ತಾಲೂಕು ವೈದ್ಯಾಧಿಕಾರಿ ಕಚೇರಿ ಪುತ್ತೂರು ದೂರವಾಣಿ ಸಂಖ್ಯೆ: 08251-295650 ಅನ್ನು ಸಂಪರ್ಕಿಸಬೇಕೆಂದು ನಗರಸಭೆ ಪ್ರಕಟಣೆ ತಿಳಿಸಿದೆ.

ಲಸಿಕೆ ಪಡೆದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಪ್ರಕರಣ
ನಗಸರಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉದ್ದಿಮೆದಾರರು/ ಗುತ್ತಿಗೆದಾರರು ತಮ್ಮ ಅಧೀನದಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಕೋವಿಡ್ -19 ಲಸಿಕೆಯನ್ನು ಕಡ್ಡಾಯವಾಗಿ ಪಡಕೊಳ್ಳುವ ಬಗ್ಗೆ ಕ್ರಮವಹಿಸುವುದು. ಲಸಿಕೆ ಪಡೆದ ಬಗ್ಗೆ ದಾಖಲೆಗಳನ್ನು ನಗರಸಭೆ ವತಿಯಿಂದ ಎಲ್ಲಾ ಉದ್ದಿಮೆಗಳ ಪರಿಶೀಲನೆ ವೇಳೆ ಹಾಜರುಪಡಿಸುವುದು. ಲಸಿಕೆ ಪಡೆಯದ ಕಾರ್ಮಿಕರು / ಉದ್ದಿಮೆದಾರರು ಮತ್ತು ಗುತ್ತಿಗೆದಾರರು ಕಂಡು ಬಂದಲ್ಲಿ ಸದ್ರಿಯವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ4,5 ಮತ್ತು 10ರಂಥೆ ಕ್ರಮ ವಹಿಸಲಾಗುವುದು – ಮಧು ಎಸ್ ಮನೋಹರ್, ಪೌರಾಯುಕ್ತರು ನಗರಸಭೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.