ಮರ್ದಾಳ: ಓಮ್ನಿ- ಬೈಕ್ ಅಪಘಾತದಲ್ಲಿ ಬೈಕಿನ ಹಿಂಬದಿ ಸವಾರ ಮರಣ ಹೊಂದಿದ ಪ್ರಕರಣ: ಓಮ್ನಿ ಚಾಲಕ ದೋಷಮುಕ್ತ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: 5 ವರ್ಷಗಳ ಹಿಂದೆ ಕಡಬ ತಾಲೂಕಿನ ಮರ್ದಾಳ ಎಂಬಲ್ಲಿ ಯಮಹ ಬೈಕ್ ಹಾಗೂ ಮಾರುತಿ ಒಮ್ನಿ ಕಾರ್ ಅಪಘಾತ ಪ್ರಕರಣದಲ್ಲಿ, ಬೈಕಿನ ಹಿಂಬದಿ ಸವಾರ ತೀವ್ರ ಗಾಯಗೊಂಡು,ಮರಣ ಹೊಂದಿದ, ಪ್ರಕರಣಕ್ಕೆ ಸಂಬಂಧಿಸಿದಂತೆ, ಓಮ್ನಿ ಚಾಲಕ ನನ್ನು ದೋಷಮುಕ್ತಗೊಳಿಸಿ, ಪುತ್ತೂರಿನ ನ್ಯಾಯಾಲಯ ಬಿಡುಗಡೆಗೊಳಿಸಿ ಆದೇಶಿಸಿದೆ.

2015ರ ಡಿ.27ರಂದು ಕಡಬ ತಾಲೂಕು ಬಂಟರ ಗ್ರಾಮದ ಮರ್ದಾಳ ಎಂಬಲ್ಲಿ, ಮಾರುತಿ ಓಮ್ನಿ ಕಾರ್ ರಸ್ತೆ ಬದಿಯಿಂದ ರಸ್ತೆಗೆ ಒಮ್ಮೆಲೆ ತಿರುಗಿಸಿ, ಚಲಾಯಿಸಿದ ಕಾರಣ, ಅದೇ ರಸ್ತೆಯಲ್ಲಿ ಬರುತ್ತಿದ್ದ ಯಮಹಾ ಬೈಕ್, ಓಮ್ನಿಗೆ ತಾಗಿ ಅಪಘಾತಕ್ಕೀಡಾಗಿ, ಬೈಕಿನ ಹಿಂಬದಿ ಸವಾರ ರಸ್ತೆಗೆ ಎಸೆಯಲ್ಪಟ್ಟು, ತೀವ್ರವಾಗಿ ಗಾಯಗೊಂಡು, ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಡಬ ಪೊಲೀಸರು ಮಾರುತಿ ಓಮ್ನಿ ಚಾಲಕ ಉಮ್ಮರ್ ಬೆಳ್ಳಾರೆ ಎಂಬವರ ವಿರುದ್ಧ ಮೊಕದ್ದಮೆ ದಾಖಲಿಸಿ, ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ವಿಚಾರಣೆಯನ್ನು ನಡೆಸಿದ ಪುತ್ತೂರಿನ ನ್ಯಾಯಾಲಯವು, ಆರೋಪಿ ಓಮ್ನಿ ಚಾಲಕನನ್ನು ನಿರ್ದೋಷಿಯೆಂದು ಪರಿಗಣಿಸಿ, ಷಮುಕ್ತಗೊಳಿಸಿ, ಬಿಡುಗಡೆಗೊಳಿಸಿದ್ದಾರೆ. ಆರೋಪಿ ಪರ ಪುತ್ತೂರಿನ ಹಿರಿಯ ನ್ಯಾಯವಾದಿ ನೂರುದ್ದೀನ್ ಸಾಲ್ಮರ ವಾದಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.