ನ.27 ಸಾಲ್ಮರ ದಾರುಲ್ ಹಸನಿಯಾ ವಿದ್ಯಾ ಸಂಸ್ಥೆಯ ತೃತೀಯ ವಾರ್ಷಿಕೋತ್ಸವ ಸಂಭ್ರಮ. ಅಂತರಾಷ್ಟ್ರೀಯ ವಾಗ್ಮಿ ನೌಶದ್ ಬಾಖವಿರವರಿಂದ ಧಾರ್ಮಿಕ ಮತಪ್ರವಚನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಸಾಲ್ಮರ ಸಾದಾತ್ ಮಹಲ್‌ನಲ್ಲಿರುವ ದಾರುಲ್ ಹಸನಿಯಾ ವಿದ್ಯಾಸಂಸ್ಥೆಯ ಅಧೀನದ ಮರಿಯಂ ಹಿಫ್ಲುಲ್ ಖುರ್ ಆನ್ ಕಾಲೇಜ್‌ನ ತೃತೀಯ ವಾರ್ಷಿಕೋತ್ಸವದ ಸಂಭ್ರಮ ಹಾಗೂ ಅಂತರಾಷ್ಟ್ರೀಯ ಖ್ಯಾತೀಯ ವಾಗ್ಮಿ ನೌಶದ್ ಬಾಖವಿಯವರ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮವು ನ.27ರಂದು ಸಾಲ್ಮರದಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ಪುತ್ತು ಹಾಜಿ ಬಾಯಾರ್‌ರವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ನ.27 ರಂದು ಸಂಜೆ 4 ಗಂಟೆಗೆ ಮರಿಯಂ ಹಿಫ್ಲುಲ್ ಖುರ್ ಆನ್ ಕಾಲೇಜುನ ಅಧ್ಯಕ್ಷ ಸಯ್ಯದ್ ಶರಫುದ್ದೀನ್ ತಂಙಳ್‌ರವರ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು ಬಳಿಕ ವಿವಿಧ ಕಾರ್‍ಯಕ್ರಮಗಳು ಆರಂಭಗೊಳ್ಳಲಿದೆ.

ಸಯ್ಯದ್ ಯಹ್ಯಾ ತಂಙಳ್‌ರವರ ನೇತೃತ್ವದಲ್ಲಿ ಮರ್ಹೂಂ ಸಯ್ಯದ್ ಹಸನ್ ಕೋಯ ತಂಙಳ್‌ರವರ ದರ್ಗಾ ಝಿಯಾರತ್ ನಡೆಯಲಿದೆ. ಎಸ್. ಎಂ. ತಂಙಳ್ ಸಾಲ್ಮರ, ಸಯ್ಯದ್ ಹಬೀಬುರ್ರಹ್ಮಾನ್ ತಂಙಳ್ ಮುಕ್ವೆ, ಸಯ್ಯದ್ ಜುನೈದ್ ಜಿಫ್ರಿ ತಂಙಳ್ ಆತೂರು, ಸಯ್ಯದ್ ಅಕ್ರಂ ಅಲಿ ತಂಙಳ್ ರಹ್ಮಾನಿ ಮೊದಲಾದ ಉಲಮಾ, ಸಾದಾತ್‌ಗಳ ನೇತೃತ್ವದಲ್ಲಿ ಖತಮುಲ್ ಖುರಾನ್ ಪ್ರಾರ್ಥನಾ ಸಂಗಮ ನಡೆಯಲಿದೆ ಎಂದು ಅವರು ಹೇಳಿದರು. ರಾತ್ರಿ ಗಂಟೆ 7ರಿಂದ ಧಾರ್ಮಿಕ ಪ್ರಭಾಷಣ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು ಕಾರ್‍ಯಕ್ರಮದ ಉದ್ಘಾಟನೆ ಹಾಗೂ ದುವಾಃದ ನೇತೃತ್ವವನ್ನು ಕುಂಬೋಳ್ ಸಯ್ಯದ್ ಅಲಿ ತಂಙಳ್‌ರವರು ನೆರವೇರಿಸಲಿದ್ದಾರೆ. ಈ ಕಾರ್‍ಯಕ್ರಮದಲ್ಲಿ ಕೇರಳದ ಖ್ಯಾತ ವಾಗ್ಮಿ ನೌಶದ್ ಬಾಖವಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಸ್ವಾಗತ ಸಮಿತಿಯ ಅಧ್ಯಕ್ಷ ಪುತ್ತು ಹಾಜಿ ಬಾಯಾರ್‌ರವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಶಾವರ ಸದಸ್ಯರಾದ ಅಬ್ದುಲ್ ಖಾದ್ರ ಅಲ್‌ಖಾಸಿಮಿ ಬಂಬ್ರಾಣ ಉಸ್ತಾದ್ ಪ್ರಾಸ್ತವಿಕ ಭಾಷಣ ನಡೆಸಲಿದ್ದಾರೆ. ಅಲ್ಲದೆ ಉಲಮಾ ಉಮಾರಾ ನಾಯಕರು, ಸಾದಾತ್‌ಗಳು, ಸಾಮಾಜಿಕ ಗಣ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ.

 

ಸಯ್ಯದ್ ಶರಫುದ್ದೀನ್ ತಂಙಳ್ ಸಾಲ್ಮರರವರು ಮಾತನಾಡಿ ತೃತೀಯ ವಾರ್ಷಿಕೋತ್ಸವ ಆಚರಿಸುವ ಈ ವಿದ್ಯಾಸಂಸ್ಥೆಯಲ್ಲಿ ಪವಿತ್ರ ಖುರಾನಿನ ಕಂಠಪಾಠ ಜೊತೆಗೆ ಧಾರ್ಮಿಕ ದಅವಾ ಕೋರ್ಸು ಮತ್ತು ಲೌಕಿಕ ಶಿಕ್ಷಣವನ್ನು ನೀಡಲಾಗುತ್ತದೆ ಎಂದು ಅವರು ಕಾರ್‍ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸುವಂತೆ ಅವರು ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ದಾರುಲ್ ಹಸನಿಯಾ ವಿದ್ಯಾ ಸಂಸ್ಥೆಯ ಕಾರ್‍ಯದರ್ಶಿ ಹಸೈನಾರ್ ಹಾಜಿ ಸಿಟಿ ಬಝಾರ್, ಸ್ವಾಗತ ಸಮಿತಿಯ ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ, ಅನ್ವರ್ ಮುಸ್ಲಿಯಾರ್ ಪುತ್ತೂರು, ಅಬ್ದುಲ್ ಕರೀಂ ದಾರಿಮಿ ಬೊಳ್ವಾರ್, ಅಶ್ರಫ್ ಮುಕ್ವೆ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.