3 ವರ್ಷದ ಹಿಂದೆ ಕಡಮಾಜೆಯಲ್ಲಿ ಹಲ್ಲೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಬೆಳ್ತಂಗಡಿ ನ್ಯಾಯಾಲಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ ಎಪಿಪಿ ಪುತ್ತೂರು ನಿವಾಸಿ ದಿವ್ಯಾರಾಜ್

ಪುತ್ತೂರು: 3 ವರ್ಷದ ಹಿಂದೆ ಬೆಳ್ತಂಗಡಿಯ ಕಡಮಾಜೆಯಲ್ಲಿ ಮಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಬೆಳ್ತಂಗಡಿ ಜೆ.ಎಂ.ಎಫ್.ಸಿ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಪ್ರಾಸಿಕ್ಯೂಶನ್ ಪರ ಸರಕಾರಿ ಸಹಾಯಕ ಅಭಿಯೋಜಕ ದಿವ್ಯರಾಜ್ ವಾದಿಸಿದರು.

2018 ರ ಫೆ.19 ರಂದು ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಕಡಮಾಜೆ ಎಂಬಲ್ಲಿ ಆರೋಪಿ ತಿಮ್ಮಪ್ಪ ಮುಗೇರ ಎಂಬವರು ಐತ್ತಪ್ಪ ಮುಗೇರ ಎಂಬವರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಒಡ್ಡಿ ಕಬ್ಬಿಣದ ಸಬ್ಬಲಿನಿಂದ ಹಲ್ಲೆ ನಡೆಸಿದ್ದಾರೆ. ಇನ್ನೋರ್ವ ಆರೋಪಿ ಕೊರಗಪ್ಪ ಮುಗೇರ ಅವರು ಗಾಯಾಳು ಐತ್ತಪ್ಪ ಮುಗೇರರನ್ನು ಮುಂದಕ್ಕೆ ಹೋಗದಂತೆ ಕೈಯಿಂದ ಬಿದು ಹಿಡಿದುಕೊಂಡಾಗ ತಿಮ್ಮಪ್ಪ ಮುಗೇರ ಕಬ್ಬಿಣದ ಸಬ್ಬಲಿನಿಂದ ಐತಪ್ಪ ಮುಗೇರರ ದವಡೆಗೆ ಹೊಡೆದ ಪರಿಣಾದು ಹಲ್ಲು ಕಿತ್ತು ಹೋಗಿ ತೀವ್ರ ಸ್ವರೂಪದ ನೋವುಂಟು ಮಾಡಿರುತ್ತಾರೆ. ಅಲ್ಲದೆ ಗಣೇಶ ಅವರಿಗೂ ಆರೋಪಿತರು ಹಲ್ಲೆ ನಡೆಸಿ ಜೀವ ಜವರಿಕೆ ಒಡ್ಡಿರುತ್ತಾರೆ ಎಂಬುದಾಗಿ ಪಿರ್ಯಾದಿ ಐತಪ್ಪ ಮುಗೇರ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸರು ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿ ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಮೊಕದ್ದಮೆಯ ವಾದ ವಿವಾದಗಳನ್ನು ಆಲಿಸಿದ ಬೆಳ್ತಂಗಡಿ ಸಿ.ಜೆ.(ಹಿ.ವಿ) ಮತ್ತು ಜೆ.ಎಂ.ಎಫ್ ನ್ಯಾಯಾಲಯದ ನ್ಯಾಯಾಧೀಶ ನಾಗೇಶ್ ಮೂರ್ತಿ ಯವರು ಆರೋಪಿತರು ಎಸಗಿರುವ ಅಪರಾಧವು ಸಾಬೀತಾದ ನಿಟ್ಟಿನಲ್ಲಿ ಆರೋಪಿತರನ್ನು ದೋಷಿಗಳೆಂದು ಎಂದು ಪರಿಗಣಿಸಿ, ಐಪಿಸಿ ಕರ 341 ರಡಿ ಅಪರಾಧಕ್ಕೆ 2 ತಿಂಗಳು, ಐಪಿಸಿ ಕಲಂ 504, 506 ರಡಿಯ ಅಪರಾಧಕ್ಕೆ ಪ್ರತ್ಯೇಕ ಪ್ರತ್ಯೇಕವಾಗಿ 3 ತಿಂಗಳು, ಐಪಿಸಿ ಕಲಂ 121 ರಡಿಯ ಅಪರಾಧಕ್ಕೆ 4 ತಿಂಗಳು, ಐಪಿಸಿ 326 ರಡಿಯ ಅಪರಾಧಕ್ಕೆ 6 ತಿಂಗಳು ಜೈಲು ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸುವಂತೆ ಆದೇಶಿಸಿ ತೀರ್ಪು ನೀಡಿರುತ್ತದೆ. ಅಲ್ಲದೆ ಐತ್ತಪ್ಪ ಮುಗೇರವರ ಹಲ್ಲುಮುರಿದ ಪರಿಣಾಮ ಇಬ್ಬರು ಆರೋಪಿತರೂ ಪ್ರತ್ಯೇಕ ಪ್ರತ್ಯೇಕವಾಗಿ ತಲಾ 2,000 – ರೂಗಳನ್ನು ಐತಪ್ಪ ಮುಗೇರರಿಗೆ ನೀಡುವಂತೆ ಆದೇಶಿಸಿದೆ. ಪ್ರಕರಣದಲ್ಲಿ ಬೆಳ್ತಂಗಡಿ ಸ.ಸ.ಅಭಿಯೋಜಕರಾದ ಪುತ್ತೂರು ಉರ್ಲಾಂಡಿ ನಿವಾದಿ ದಿವ್ಯರಾಜ್ ಇವರು ವಾದ ಮಂಡಿಸಿರುತ್ತಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.