ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ‘ಜ್ಞಾನಬಿಂಬ’ ಭಿತ್ತಿ ಪತ್ರಿಕೆ ಅನಾವರಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಜ್ಞಾನ ಸಂಪಾದನೆಯಿಂದ ಯಶಸ್ಸು ಖಚಿತ: ಡಾ. ಬಿ.ಕೆ ರವೀಂದ್ರ

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ‘ಜ್ಞಾನಬಿಂಬ’ ಭಿತ್ತಿ ಪತ್ರಿಕೆ ಉದ್ಘಾಟನಾ ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕ ಡಾ. ಬಿ.ಕೆ. ರವೀಂದ್ರರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ರಾಜ್ಯಶಾಸ್ತ್ರ ವಿಭಾಗದಿಂದ ನಿರ್ವಹಿಸುವ ‘ಜ್ಞಾನಬಿಂಬ’ ಎಂಬ ಭಿತ್ತಿ ಪತ್ರಿಕೆಯನ್ನು ಅನಾವರಣಗೊಳಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು, ವಿದ್ಯಾರ್ಥಿ ಜೀವನದಲ್ಲಿ ಬರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಭವಿಷ್ಯದಲ್ಲಿ ಗುರಿ ಸಾಧಿಸಬಹುದು. ‘ಜ್ಞಾನಬಿಂಬ’ದಂತಹ ಭಿತ್ತಿ ಪತ್ರಿಕೆಗಳು ನಿಮಗೆ ಜ್ಞಾನ ಮತ್ತು ಬರವಣಿಗೆಯ ಅವಕಾಶ ನೀಡುತ್ತದೆ. ಅಂತಹ ವೇದಿಕೆಯನ್ನು ಸದುಪಯೋಗ ಪಡಿಸಿಕೊಳ್ಳಿ. ಜ್ಞಾನ ಸಂಪಾದನೆಯಿಂದ ಯಶಸ್ಸು ಖಚಿತ ಎಂದರು. ಡಿಜಿಟಲ್ ಯುಗದಲ್ಲಿ ಪ್ರತಿಕ್ಷಣ ನಾವು ಕಲಿಯುವ, ಅರ್ಥೈಸುವ ಹಾಗೂ ಆ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಿದೆ ಎಂದ ಅವರು, ರಾಜ್ಯಶಾಸ್ತ್ರ ವಿಭಾಗದಿಂದ ನಿರ್ವಹಿಸಲ್ಪಡುವ ‘ಜ್ಞಾನಬಿಂಬ’ ವಿದ್ಯಾರ್ಥಿಗಳಿಗೆ ಪ್ರೇರಣೆ ಹಾಗೂ ವೇದಿಕೆಯಾಗಿ ಬೆಳೆಯಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ  ಅಕ್ಷತಾ ಎ.ಪಿ. ಮಾತನಾಡಿ, ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಸತತವಾಗಿ ಜ್ಞಾನವನ್ನು ಪಡೆಯುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಕಾನೂನು ವಿದ್ಯಾರ್ಥಿಗಳು ಸತತವಾಗಿ ವಿವಿಧ ಮೂಲಗಳಿಂದ ನಿರಂತರವಾಗಿ ಮಾಹಿತಿಯನ್ನು ಪಡೆಯಬೇಕು. ನಮ್ಮ ಮಹಾವಿದ್ಯಾಲಯ ಅಂತಹ ವಿದ್ಯಾರ್ಥಿಸ್ನೇಹಿ ಕಾರ್ಯಕ್ರಮಗಳು, ವೇದಿಕೆಯನ್ನು ಸೃಷ್ಟಿಸುತ್ತದೆ. ಅದನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಿ ಎಂದರಲ್ಲದೆ, ಜ್ಞಾನ ಹಂಚುವ ಹಿನ್ನಲೆಯಲ್ಲಿ ಹುಟ್ಟಿರುವ ‘ಜ್ಞಾನಬಿಂಬ’ ಭಿತ್ತಿಪತ್ರಿಕೆ ಮಾಹಿತಿ ಹಂಚುವ ಮೂಲಕ ಅತ್ಯಂತ ಯಶಸ್ವಿಯಾಗಿ ಮುನ್ನಡೆಯಲಿ ಎಂದರು.

 

ವೇದಿಕೆಯಲ್ಲಿ ಉಪಸ್ಥಿತರಿದ್ದ ‘ವಿವೇಕ ಚಿಂತನ’ ಭಿತ್ತಿಪತ್ರಿಕೆಯ ಸಂಯೋಜಕಿ ಹಾಗೂ ಆಂಗ್ಲ ಉಪನ್ಯಾಸಕಿ  ಸಂಧ್ಯಾ ಪಿ.ಎಂ ಮಾತನಾಡಿ, ವಿದ್ಯಾರ್ಥಿಯೊಬ್ಬ ಸದಾ ಓದು, ಬರವಣಿಗೆಯತ್ತ ಗಮನಹರಿಸಿದಾಗ ಜ್ಞಾನ ಹೆಚ್ಚಾಗುವ ಜೊತೆಗೆ ಭವಿಷ್ಯದಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದು ನುಡಿದರು.

ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮಿಕಾಂತ ರೈ ಅನಿಕೂಟೇಲ್ ಪ್ರಾಸ್ತವಿಕವಾಗಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನವನ್ನು ಪಡೆಯಲು ಇರುವ ಮಾರ್ಗಗಳು ಹಾಗೂ ಅದಕ್ಕಾಗಿ ವಿದ್ಯಾರ್ಥಿಗಳ ಶ್ರಮದ ಕುರಿತು ಹೇಳಿ, ರಾಜ್ಯಶಾಸ್ತ್ರ ವಿಭಾಗದ ವಿವಿಧ ವಿದ್ಯಾರ್ಥಿಸ್ನೇಹಿ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಕಾನೂನು ಮಹಾವಿದ್ಯಾಲಯದ ಕಾನೂನು ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಸಂಗೀತಾ ಎಸ್.ಎಂ , ಶ್ರೀಮತಿ ಸುಭಾಷಿಣಿ ಜೆ, ಶ್ರೀ ಕೌಶಿಕ್ ಸಿ, ಕು. ಶ್ರೀರಕ್ಷಾ, ಕು. ಶೀತಲ್ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ನವೀನ್ ಕುಮಾರ್ ಎಂ.ಕೆ ಹಾಗೂ ಕಂಪ್ಯೂಟರ್ ಉಪನ್ಯಾಸಕ ತಿಲಕ್ ಸಹಕರಿಸಿದರು. ದ್ವಿತೀಯ ಬಿ.ಎ. ಎಲ್.ಎಲ್.ಬಿ.ಯ ವೆಂಕಟಕೃಷ್ಣ ಸ್ವಾಗತಿಸಿ, ಗಣೇಶ್ ಜಿ ಬಾಳಿಗ ವಂದಿಸಿದರು. ಪ್ರಥಮ ಬಿ.ಎ. ಎಲ್.ಎಲ್.ಬಿ.ಯ ಮನ್ವಿತ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.