ಕೋವಿಡ್ -19 ವ್ಯಾಕ್ಸಿನ್ ಮಾಹಿತಿ, ಜಾಗೃತಿ ಜಾಥ, ಜಾಗೃತಿ ನಾಟಕ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  •  ಕಡ್ಡಾಯವಾಗ ಲಸಿಕೆ ಪಡೆಯಿರಿ ಸಾರ್ವಜನಿಕರಲ್ಲಿ ಮನವಿ -ತಹಶೀಲ್ದಾರ್ ರಮೇಶ್ ಬಾಬು

ಪುತ್ತೂರು: ಕೋವಿಡ್ -19 ಲಸಿಕೆಯನ್ನು ಪ್ರಥಮ ಡೋಸ್ ಪಡಕೊಂಡವರು ಕಡ್ಡಾಯವಾಗಿ 2ನೇ ಡೋಸ್ ಪಡೆಯಿರಿ ಮತ್ತು ಪ್ರಥಮ ಡೋಸ್ ಪಡಕೊಳ್ಳದವರು ಕೂಡಾ ಲಸಿಕೆ ಪಡೆಯುವಂತೆ ಸಾರ್ವಜನಿಕರಲ್ಲಿ ವಿನಂತಿ ಮಾಡುತ್ತಿದ್ದೇನೆ ಎಂದು ತಹಸೀಲ್ದಾರ್ ರಮೇಶ್ ಬಾಬು ಅವರು ಹೇಳಿದರು.


ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಪುತ್ತೂರು, ನಗರಸಭೆ ಮತ್ತು ಸಮರ್ಥನಂ ಅಂಗವಿಕಲರ ಸಂಸ್ಥೆ ಬೆಂಗಳೂರು, ರಾಷ್ಟ್ರೀಯ ಸೇವಾ ಯೋಜನಾ ಘಟಕ ವಿವಕೇಕಾನಂದ ಪದವಿ ಕಾಲೇಜು ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಎರಡು ದಿನ ನಡೆಯುವ ಕೋವಿಡ್ ಲಸಿಕೆ ಅಭಿಯಾನದ ಅಂಗವಾಗಿ ನ.26ರಂದು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕೋವಿಡ್ -19 ವ್ಯಾಕ್ಸಿನ್ ಮಾಹಿತಿ ಮತ್ತು ಜಾಗೃತಿ ಜಾಥ ಹಾಗು ಜಾಗೃತಿ ನಾಟಕವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಪ್ರಥಮ ಲಸಿಕೆ ಪಡಕೊಂಡ ಮತ್ತು ದ್ವಿತೀಯ ಲಸಿಕೆ ಪಡಕೊಳ್ಳದವರು ಮತ್ತು ಈವರೆಗೆ ಪ್ರಥಮ ಲಸಿಕೆ ಪಡಕೊಳ್ಳದವರು ಲಸಿಕೆಯನ್ನು ಕಡ್ಡಾಯವಾಗಿ ಪಡಕೊಂಡು ಕೊರೋನಾ ನಿಯಂತ್ರಣಕ್ಕೆ ಸಹಕರಿಸುವಂತೆ ಕೋರಿದರು. ಇದೇ ಸಂದರ್ಭದಲ್ಲಿ ಕೋವಿಡ್ ಲಸಿಕೆ ಪಡೆಯಲು ಜಾಗೃತಿ ಪತ್ರವನ್ನು ಬಿಡುಗಡೆ ಮಾಡಲಾಯಿತು.


ವಿದೇಶದಲ್ಲಿ ಲಸಿಕೆ ಪಡೆಯದ ಕಾರಣ ಕೋವಿಡ್ ಪ್ರಕರಣ ಹೆಚ್ಚಾಗಿದೆ:
ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಮಾತನಾಡಿ ಕೋವಿಡ್ ನಿರ್ಮೂಲನೆಗೆ ಭಾರತದಲ್ಲಿ ಈಗಾಗಲೇ 120 ಕೋಟಿ ಜನರಿಗೆ ಕೋವಿಡ್ ಲಸಿಕೆ ವಿತರಣೆ ಚಾಲನೆ ಆಗಿದೆ. ಮೊದಲ ಡೋಸ್ ಪಡೆಯದವರು ಮತ್ತು 2ನೆ ಡೋಸ್ ತೆಗೆದು ಕೊಳ್ಳದವರು ಇನ್ನೂ ಇದ್ದಾರೆ. ಅವರನ್ನು ಶೇ.೧೦೦ ರಷ್ಟು ತಲುಪುವಂತೆ ನಾವು ಪ್ರಯತ್ನ ಮಾಡುತ್ತಿದ್ದೇವೆ. ಕೆಲವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅಂತವರಿಗೆ ಮಾಹಿತಿ ನೀಡಿ ನಾವು ಲಸಿಕೆ ನೀಡುವ ವ್ಯವಸ್ಥೆ ಕಲ್ಪಿಸುತ್ತೇವೆ. ಕೋವಿಡ್ ನಿಯಂತ್ರಣ ಮಾಡಲು ಲಸಿಕೆ ಅತೀ ಅಗತ್ಯ. ವಿದೇಶದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿವೆ. ಕಾರಣ ಅಲ್ಲಿ ಸಮರ್ಪಕವಾಗಿ ಕೋವಿಡ್ ಲಸಿಕೆ ನೀಡಿಕೆ ನಿಧಾನವಾಗಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ನಮ್ಮಲ್ಲಿ ಪ್ರತಿ ಮನೆಗೂ ಲಸಿಕೆ ಕಡ್ಡಾಯ ಪಡೆಯುವಂತೆ ಮಾಹಿತಿ ನೀಡಬೇಕು ಎಂದರು.

ಪೇಟೆಯಲ್ಲೇ 7,500 ಮಂದಿ 2ನೇ ಡೋಸ್ ಪಡೆದಿಲ್ಲ:
ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ದೀಪಕ್ ರೈ ಅವರು ಮಾತನಾಡಿ ಕೋವಿಡ್ ಸಮಪರ್ಕವಾಗಿ ನಿಯಂತ್ರಣ ಮಾಡಬೇಕಾದರೆ ಕೋವಿಡ್ ಲಸಿಕೆ ಪಡೆಯುವುದು ಅಗತ್ಯ. ಆದರೆ ಕೆಲವೊಂದು ಸುಳ್ಳು ಮಾಹಿತಿಯಿಂದಾಗಿ 2ನೇ ಡೋಸ್‌ಗೆ ಬಹಳ ವಿಳಂಬ ಮಾಡುತ್ತಿದ್ದಾರೆ. ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ೭,೫೦೦ ಮಂದಿ ಪ್ರಥಮ ಡೋಸ್ ಪಡೆದು ೮೪ ದಿನವಾದರೂ ಇನ್ನೂ ಕೂಡಾ 2ನೆ ಡೋಸ್ ಪಡೆದಿಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದು ಕೊಳ್ಳಿ ಎಂದು ವಿನಂತಿಸಿದರು. ವೇದಿಕೆಯಲ್ಲಿ ಪುತ್ತೂರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಹೈಲಾ, ಸಮರ್ಥನಂ ಅಂಗವಿಕಲರ ಸಂಸ್ಥೆಯ ಶಿಖಾ ಶೆಟ್ಟಿ ಉಪಸ್ಥಿತರಿದ್ದರು. ತಾಲೂಕು ಆರೋಗ್ಯ ಇಲಾಕೆಯ ಹಿರಿಯ ಆರೋಗ್ಯ ಸಿಬ್ಬಂದಿ ಪದ್ಮಾವತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರವಿ ಸುವರ್ಣ ವಂದಿಸಿದರು. ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್, ಕಂದಾಯ ನಿರೀಕ್ಷಕ ರಾಧಾಕೃಷ್ಣ ಸಹಿತ ಕಾಲೇಜಿನ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

ಕೋವಿಡ್ ಲಸಿಕೆ ಪಡೆಯಲು ಜಾಗೃತಿ ನಾಟಕ
ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡಪರಿಣಾಮವಿಲ್ಲ. ಸುಳ್ಳು ಅಪಪ್ರಚಾರಕ್ಕೆ ಕಿವಿಗೊಡಬೇಡಿ ಮತ್ತು ಎಲ್ಲರು ಕೋವಿಡ್ ಲಸಿಕೆ ಪಡೆಯುವಂತೆ ಜಾಗೃತಿ ಸಂದೇಶ ನೀಡುವ ಕುರಿತು ವಿವೇಕಾನಂದ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳು ನಾಟಕ ಪ್ರದರ್ಶನ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.