ಕಾಲೇಜು ಕುರಿತು ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ – ಕೊಂಬೆಟ್ಟು ಕಾಲೇಜಿನಲ್ಲಿ ಪ್ರಾಂಶುಪಾಲರು, ಎಸ್‌ಡಿಎಂಸಿ ಪತ್ರಿಕಾಗೋಷ್ಠಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶತಮಾನದ ಇತಿಹಾಸ ಹೊಂದಿದ ಜಿಲ್ಲೆಯ ಪ್ರತಿಷ್ಠಿತ ಕಾಲೇಜಾಗಿರುವ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ಅದೆಷ್ಟೋ ಶ್ರೇಷ್ಠ ವ್ಯಕ್ತಿಗಳನ್ನು ದೇಶಕ್ಕೆ ಕಾಣಿಕೆ ನೀಡಿದೆ. ಇಂತಹ ಸಂಸ್ಥೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿರುವುದು ದುರದೃಷ್ಟಕರ ವಿಚಾರ. ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲ ಸುರೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಕಾಲೇಜಿನ ಪ್ರಾಂಶುಪಾಲರು, ಹಿರಿಯ ಉಪನ್ಯಾಸಕರು ಮತ್ತು ಎಸ್‌ಡಿಎಂಸಿ ಕಾರ್ಯಾಧ್ಯಕ್ಷರು ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಕೆಲವು ಅಹಿತಕರ ಘಟನೆಗಳ ಕುರಿತು ಕೈಗೊಂಡ ಕ್ರಮದ ಕುರಿತು ನ.27ರಂದು ಸಂಸ್ಥೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಕಾಲೇಜನ ಪ್ರಾಂಶುಪಾಲರು ಮಾತನಾಡಿ ಕಾಲೇಜಿನಲ್ಲಿ 1187 ವಿದ್ಯಾರ್ಥಿಗಳಿದ್ದು, ಎಲ್ಲಾ ವರ್ಗದ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಎಲ್ಲಾ ವಿಭಾಗದಲ್ಲೂ ಶೇ.100 ರಷ್ಟು ಉತ್ತೀರ್ಣತೆಯನ್ನು ಪಡೆದಿರುವುದಲ್ಲದೆ ಅನೇಕ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇತ್ತೀಚೆಗೆ ಕೆಳೆದ ಕೆಲವು ದಿನಗಳಲ್ಲಿ ಕಾಲೇಜಿನ ಹೊರ ಆವರಣದಲ್ಲಿ ನಡೆದ ಅನಿರೀಕ್ಷಿತ ಪ್ರಕರಣಕ್ಕೆ ಸಂಬಂಧಿಸಿ ಪೋಷಕರನ್ನು ಕರೆಸಿ ಮನವರಿಕೆ ಮಾಡಿದ್ದೇವೆ. ಶಾಸಕರು ಕೂಡಾ ನಿನ್ನೆ ಸಭೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಅವರ ಮಾರ್ಗದರ್ಶನದಂತೆ ಇವತ್ತು ಪೋಷಕರ ಸಭೆ ನಡೆಸಿದ್ದೇವೆ. ಇಂತಹ ಸಂದರ್ಭದಲ್ಲ ಕಾಲೇಜಿನ ಗಣತೆಗೆ ಧಕ್ಕೆ ತರುವಂತಹ ಕೆಲಸ ಯಾರೂ ಕೂಡಾ ಮಾಡಬಾರದು. ಕಾಲೇಜಿನ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಎಲ್ಲರು ಸಹಕಾರ ನೀಡುವಂತೆ ಅವರು ವಿನಂತಿಸಿದರಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಕಾಲೇಜಿನ ಕುರಿತು ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿದ್ಯಾರ್ಥಿಗಳ ರಕ್ಷಣೆ ನಮ್ಮ ಜವಾಬ್ದಾರಿ:
ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪಿ.ಜಿ ಜಗನ್ನಿವಾಸ ರಾವ್ ಅವರು ಮಾತನಾಡಿ ಹೊರಗಿನ ಸಂಘಟನೆಯ ಪ್ರಚೋಚನೆಯಿಂದ ತಿಳುವಳಿಕೆ ಇಲ್ಲದ ಅಪ್ರಾಪ್ತ ವಿದ್ಯಾರ್ಥಿಗಳು ತೊಂದರೆ ತಂದು ಕೊಂಡಿದ್ದಾರೆ. ಕಾಲೇಜಿನ ವಿದ್ಯಾಸಂಸ್ಥೆಯಲ್ಲಿ ಎಲ್ಲರು ವಿದ್ಯಾರ್ಥಿಗಳೇ ಆಗಿರುತ್ತಾರೆ. ಈ ಕುರಿತು ಶಾಸಕರು ಕೂಡಾ ಸಭೆ ನಡೆಸಿ ಮಾರ್ಗದರ್ಶನ ನೀಡಿದ್ದಾರೆ. ಯಾವುದೇ ಸಂಘಟನೆಗಳು ಕೂಡಾ ಕಾಲೇಜಿನ ಆವರಣಕ್ಕೆ ಬಂದು ವಿದ್ಯಾರ್ಥಿಗಳನ್ನು ಪ್ರಚೋದಿಸುವುದು ಮತ್ತು ಪತ್ರಿಕಾಗೋಷ್ಠಿ ನಡೆಸುವುದು ಸರಿಯಲ್ಲ. ನಮಗೆ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ. ಅವರ ಶಿಕ್ಷಣ ಮತ್ತು ರಕ್ಷಣೆ ನಮ್ಮ ಜವಾಬ್ದಾರಿ. ಅಹಿತಕರ ಘಟನೆ ನಡೆಯದಂತೆ ಎಲ್ಲರು ಸಹಕಾರ ನೀಡಬೇಕೆಂದು ಅವರು ಹೇಳಿದ ಅವರು ಕಾಲೇಜಿನ ಆವರಣದೊಳಗೆ ಪ್ರಾಂಶುಪಾಲರ ಕಚೇರಿಯ ತನಕ ವಾಹನಗಳಿಗೆ ಅವಕಾಶ ನೀಡಬಾರದು ಎಂಬ ದೂರುಗಳು ಬಂದ ನೆಲೆಯಲ್ಲಿ ಮತ್ತು ವಿದ್ಯಾರ್ಥಿಗಳ ರಕ್ಷಣೆಯ ಹಿತದೃಷ್ಟಿಯಿಂದ ಸದ್ಯ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಮುಗಿಯುತ್ತಿದ್ದಂತೆ ಗೇಟು ಅಳವಡಿಸಿ ಮುಂದಿನ ದಿನ ಕಾಲೇಜು ಆವರಣಕ್ಕೆ ನಿಗದಿತ ಸಮಯ ಹೊರತು ಪಡಿಸಿ ಉಳಿದ ಅವಧಿಯಲ್ಲಿ ಕಾಲೇಜು ಆವರಣಕ್ಕೆ ವಾಹನಗಳ ಪ್ರವೇಶ ನಿಷೇಧಿಸಲಾಗುವುದು ಎಂದು ಅವರುಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಉಪನ್ಯಾಸಕರಾದ ಈಶ್ವರ ಭಟ್ ಬೇರಿಕೆ, ಸುಬ್ರಹ್ಮಣ್ಯ ಎನ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. Shashi

    Love jihaad bhaari nadapunduge aa volleged..aitha bagett khadak aadh onji nirdhara dethonda edde.. ndh enna abhipraaya.. ithe ee vshyala start aathini airdhaadhe.. thuyinakl uller masth jana.. aik khadak rules mnth unthale. Yav. Bk clg g dharmogu pudar padujer yerla.. altha joklu bk rules sari ithnda yer dada pnper??

    Javabdhari enklena pandibk elle dina onje onji love jihaad da case bathndala aiyhala javabdhari muklen mitthe burund. Nenepippad..!!

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.