ಸೂರಿಲ್ಲದ ಕುಟುಂಬಗಳಿಗೆ ಆಸರೆಯಾದ ಅಶೋಕ್ ಕುಮಾರ್ ರೈ ಮಡ್ಯಂಗಲ, ಅಂಬಟಮೂಲೆಯಲ್ಲಿ 2 ಕುಟುಂಬಗಳಿಗೆ ಮನೆ ಹಸ್ತಾಂತರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ: ಯೂಸುಫ್ ರೆಂಜಲಾಡಿ

ಪುತ್ತೂರು: ಉದ್ಯಮಿ, ಕೋಡಿಂಬಾಡಿ ರೈ ಎಸ್ಟೇಟ್ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್‌ನ ಮುಖ್ಯ ಪ್ರವರ್ತಕರಾಗಿರುವ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಬಡವರ ಪರವಾಗಿರುವ ತಮ್ಮ ಸೇವಾ ಕಾರ್ಯವನ್ನು ಮುಂದುವರಿಸಿದ್ದು ನ.೨೭ರಂದು ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಮಡ್ಯಂಗಳ ಎಂಬಲ್ಲಿ ಮನೆ ಕಳೆದುಕೊಂಡಿದ್ದ ಕುಟುಂಬವೊಂದಕ್ಕೆ ನೂತನ ಮನೆಯನ್ನು ಹಾಗೂ ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ಅಂಬಟಮೂಲೆ ಎಂಬಲ್ಲಿ ಬಡ ಕುಟುಂಬವೊಂದರ ಮನೆಯನ್ನು ದುರಸ್ತಿಗೊಳಿಸಿ ಹಸ್ತಾಂತರಿಸಿದರು. ಆ ಮೂಲಕ ಬಡವರ, ನೊಂದವರ ಪಾಲಿನ ಆಶಾ ಕಿರಣವಾಗಿ ಅಶೋಕ್ ರೈ ಅವರು ಮತ್ತೊಮ್ಮೆ ಮೂಡಿ ಬಂದಿದ್ದಾರೆ.

ಮಡ್ಯಂಗಳದಲ್ಲಿ ಮನೆ ಹಸ್ತಾಂತರ:
ನಾಲ್ಕು ತಿಂಗಳ ಹಿಂದೆ ಅರಿಯಡ್ಕ ಗ್ರಾಮದ ಮಡ್ಯಂಗಳ ಗುತ್ತು ನಿವಾಸಿ ಬಾಬು ರೈ ಅವರ ಮನೆ ಭಾರೀ ಮಳೆಯ ಸಂದರ್ಭದಲ್ಲಿ ಕುಸಿತಗೊಂಡು ಮನೆ ಸಂಪೂರ್ಣ ನೆಲಸಮವಾಗಿತ್ತು. ವಿಚಾರವನ್ನು ಕೌಡಿಚ್ಚಾರು ಅಶೋಕ್ ರೈ ಅಭಿಮಾನಿ ಬಳಗದವರು ಅಶೋಕ್ ರೈಯವರ ಗಮನಕ್ಕೆ ತಂದಿದ್ದರು. ಅಶೋಕ್ ರೈ ಅವರು ಸೆ.೧೨ರಂದು ಮಡ್ಯಂಗಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬಾಬು ರೈ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡುವ ಬಗ್ಗೆ ಭರವಸೆ ನೀಡಿದ್ದರು. ಅದರಂತೆ ಕಾರ್ಯಪ್ರವೃತ್ತರಾದ ಅವರು ಕೌಡಿಚ್ಚಾರು ಅಶೋಕ್ ರೈ ಅಭಿಮಾನಿ ಬಳಗದವರ ಸಹಕಾರದೊಂದಿಗೆ ಕ್ಷಿಪ್ರ ಅವಧಿಯಲ್ಲಿ ಕುಟುಂಬಕ್ಕೆ ನೂತನ ಮನೆಯನ್ನು ನಿರ್ಮಿಸಿ ಅದನ್ನು ನ.೨೭ರಂದು ಹಸ್ತಾಂತರಿಸಿದರು.

ಅಶೋಕ್ ರೈಯವರನ್ನು ದೇವರು ಕೈಬಿಡಲ್ಲ:
ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮನೆಯ ಯಜಮಾನ ಬಾಬು ರೈ ಮಾತನಾಡಿ ನಮ್ಮ ಕಷ್ಟವನ್ನು ನೋಡಿ ನಮಗೆ ಮನೆ ನಿರ್ಮಿಸಿಕೊಟ್ಟ ಅಶೋಕ್ ರೈ ಅವರಿಗೆ ದೇವರು ಒಳ್ಳೆಯದನ್ನು ಮಾಡುತ್ತಾನೆ. ಅಶೋಕ್ ರೈ ಅವರು ಮುಂದಕ್ಕೆ ರಾಷ್ಟ್ರಮಟ್ಟದ ದೊಡ್ಡ ನಾಯಕನಾಗಿ ಮೂಡಿ ಬರಬೇಕು ಎಂದರು. ನಮಗೆ ಕಷ್ಟಕಾಲದಲ್ಲಿ ನೆರವಾದ ಅಶೋಕ್ ರೈಯವರನ್ನು ದೇವರು ಎಂದಿಗೂ ಕೈ ಬಿಡುವುದಿಲ್ಲ ಎಂದು ಬಾಬು ರೈಯವರ ಪತ್ನಿ ಹೇಳಿದರು.
ಅಶೋಕ್ ರೈ ಅಭಿಮಾನಿ ಬಳಗ ಕೌಡಿಚ್ಚಾರು ಇದರ ಜನಾರ್ದನ ಪೂಜಾರಿ, ಅನಿಲ್ ಕೌಡಿಚ್ಚಾರು, ಪ್ರಕಾಶ್ ಕೊಯಿಲ ಮತ್ತಿತರರು ಉಪಸ್ಥಿತರಿದ್ದರು. ರಾಜೇಶ್ ಪ್ರಸಾದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಅಂಬಟಮೂಲೆಯಲ್ಲಿ ಮನೆ ಹಸ್ತಾಂತರ:
ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ಅಂಬಟಮೂಲೆ ಎರುಕೊಟ್ಯ ಎಂಬಲ್ಲಿ ರಾಮ ನಾಯ್ಕ ಅವರ ಕುಟುಂಬಕ್ಕೆ ಅಶೋಕ್ ರೈ ಅವರು ದುರಸ್ತಿಗೊಳಿಸಿದ ಮನೆಯನ್ನು ಹಸ್ತಾಂತರಿಸಲಾಯಿತು. ರಾಮ ನಾಯ್ಕರಿಗೆ ನಡೆದಾಡಲು ಆಗದೆ ಮನೆಯಲ್ಲೇ ಇದ್ದು ಅವರ ಪತ್ನಿ ಸುಶೀಲ ಕಳೆದ ೬ ವರ್ಷದಿಂದ ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದಾರೆ. ಈ ಕುಟುಂಬದ ಮನೆಯ ಗೋಡೆ ಕೆಲವು ಸಮಯಗಳ ಹಿಂದೆ ಕುಸಿತಕ್ಕೊಳಗಾಗಿ ಮನೆ ಮಂದಿ ಅತಂತ್ರ ಸ್ಥಿತಿಯಲ್ಲಿದ್ದರು. ವಿಚಾರ ತಿಳಿದ ಅಶೋಕ್ ರೈ ಅವರು ಮನೆಯನ್ನು ದುರಸ್ತಿಗೊಳಿಸಿ ಕುಟುಂಬಕ್ಕೆ ಹಸ್ತಾಂತರಿಸಿದರು.

ಮನೆಯ ಗೋಡೆ ಕುಸಿದು ಕಷ್ಟದಲ್ಲಿದ್ದೆವು-ಸಂಧ್ಯಾ
ರಾಮ ನಾಯ್ಕರ ಪುತ್ರಿ ಸಂಧ್ಯಾ ಮಾತನಾಡಿ ನಮ್ಮ ಮನೆಗೆ ಶಿಟು ಹಾಕಿ ೫ ವರ್ಷಗಳಾಗಿದೆ. ಮನೆಯ ಹಿಂದಿನ ಗೋಡೆ ಕುಸಿದು ಬಿದ್ದು ನಾವು ಕಷ್ಟದಲ್ಲಿದ್ದೆವು. ಅಶೋಕ್ ರೈ ಅವರ ನೇತೃತ್ವದಲ್ಲಿ ಸಹಕಾರ ಸಿಕ್ಕಿದ ಕಾರಣ ನಮ್ಮ ಮನೆ ದುರಸ್ತಿಯಾಗಿದೆ. ನಮಗೆ ಗ್ರಾಮ ಪಂಚಾಯತ್‌ನಿಂದ ಸೌಲಭ್ಯಗಳು ಸಿಕ್ಕಿಲ್ಲ. ನಾವು ಹೋಗುವ ರಸ್ತೆಯನ್ನು ಮುಚ್ಚಿರುವ ಕಾರಣ ಅನಾರೋಗ್ಯಪೀಡಿತ ತಂದೆ, ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲೂ ಆಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ರಾಮ ನಾಯ್ಕರ ಪುತ್ರ ಸಂದೀಪ್ ಜೊತೆಯಲ್ಲಿದ್ದರು.

 

ಈ ಸಂದರ್ಭದಲ್ಲಿ ಪ್ರಕಾಶ್ ರೈ ಕೊಯ್ಲ, ಲಿಂಗಪ್ಪ ಗೌಡ, ಪ್ರಜ್ವಲ್ ರೈ ಪಾಲ್ತಾಜೆ, ಜಗದೀಶ್ ಗೌಡ ಕೊಯ್ಲ, ಪ್ರವೀಣ್ ಪಾಟಾಳಿ ಮುಡ್ಪಿನಡ್ಕ, ಗುಣಣೇಶ್ವರ ಕೌಡಿಚ್ಚಾರು, ಪ್ರದೀಪ್ ಪಾಟಾಳಿ ಪುತ್ತೂರು, ಶರತ್‌ರಾಜ್ ಕೊಯ್ಲ ಮತ್ತಿತರರು ಉಪಸ್ಥಿತರಿದ್ದರು. ರೈ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಕಚೇರಿಯ ಲಿಂಗಪ್ಪ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಕಷ್ಟದಲ್ಲಿದ್ದವರಿಗೆ ನೆರವು ನೀಡಿದ ತೃಪ್ತಿಯಿದೆ:
ಅರಿಯಡ್ಕ ಗ್ರಾ.ಪಂ ವ್ಯಾಪ್ತಿಯ ಮಡ್ಯಂಗಲದಲ್ಲಿ ಬಾಬು ರೈ ಕುಟುಂಬ ಮನೆ ಕಳೆದುಕೊಂಡ ವಿಚಾರ ತಿಳಿದ ತಕ್ಷಣ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಕುಟುಂಬದ ದಯನೀಯ ಪರಿಸ್ಥಿತಿ ಕಂಡು ಮರುಕವುಂಟಾಗಿತ್ತು. ಕುಟುಂಬಕ್ಕೊಂದು ಮನೆ ನಿರ್ಮಿಸಿಕೊಡುವ ಬಗ್ಗೆ ಸ್ಥಳದಲ್ಲೇ ಭರವಸೆ ನೀಡಿದ್ದೆ. ಅದರಂತೆ ಹೊಸ ಮನೆ ನಿರ್ಮಿಸಿ ಕುಟುಂಬಕ್ಕೆ ಹಸ್ತಾಂತರಿಸಿದ್ದೇನೆ. ಅಶೋಕ್ ರೈ ಅಭಿಮಾನಿ ಬಳಗ ಕೌಡಿಚ್ಚಾರು ಇದರ ಸದಸ್ಯರು ಸಹಕಾರ ನೀಡಿದ್ದಾರೆ.

ಅದೇ ರೀತಿ ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ಅಂಬಟಮೂಲೆ ಎಂಬಲ್ಲಿನ ರಾಮ ನಾಯ್ಕರ ಕುಟುಂಬ ತೀರಾ ಕಷ್ಟದಲ್ಲಿರುವುದನ್ನು ಮನಗಂಡು ಅಲ್ಲಿನವರ ಸಹಕಾರದೊಂದಿಗೆ ಕುಟುಂಬಕ್ಕೆ ಮನೆ ದುರಸ್ತಿ ಮಾಡಿಕೊಟ್ಟಿದ್ದೇನೆ. ಹೀಗಾಗಿ ಒಟ್ಟು ೯೫ ಕುಟುಂಬಗಳಿಗೆ ಸೂರು ಒದಗಿಸಿದಂತಾಗಿದೆ. ಕಷ್ಟದಲ್ಲಿರುವವರಿಗೆ ಸಹಕಾರ ನೀಡುವುದರಲ್ಲಿ ಜಾತಿ, ಮತ, ಧರ್ಮ, ಪಕ್ಷ ಎಂಬುವುದಿಲ್ಲ. ನಾನು ಅರಮನೆ, ಬಂಗಲೆ ನಿರ್ಮಿಸಿಕೊಡುತ್ತೇನೆಂದು ಎಲ್ಲಿಯೂ ಹೇಳಿಲ್ಲ, ಸಂಕಷ್ಟದಲ್ಲಿರುವ ಕುಟುಂಬಕ್ಕೆ ವಾಸಿಸಲು ಯೋಗ್ಯವಾದ ಮನೆಯನ್ನು ನಿರ್ಮಿಸಿ ಕೊಡುತ್ತಿದ್ದೇನೆ. ಆಶ್ವಾಸನೆ ನೀಡುವ ಬದಲು ನೀಡಿದ ಭರವಸೆ ಈಡೇರಿಸುವುದು ಮುಖ್ಯ. ಬಡವರ ಕಣ್ಣೀರೊರೆಸುವ ಮೂಲಕ ನನ್ನಿಂದಾಗುವ ಅಲ್ಪ ಪ್ರಮಾಣದ ಸೇವೆಯನ್ನು ಸಮಾಜಕ್ಕೆ ನೀಡುತ್ತಾ ಬಂದಿದ್ದೇನೆ. ಇದರಲ್ಲಿ ನನಗೆ ಆತ್ಮ ತೃಪ್ತಿ ಇದೆ –ಅಶೋಕ್ ಕುಮಾರ್ ರೈ ಕೋಡಿಂಬಾಡಿ

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.