ಕಾವು ತುಡರ್ ಮಹಿಳಾ ಮಂಡಲದ ಉದ್ಘಾಟನೆ-ಪದಗ್ರಹಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾವು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ಅಧೀನದಲ್ಲಿ ಆರಂಭಗೊಂಡ ತುಡರ್ ಮಹಿಳಾ ಮಂಡಲದ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನ.27ರಂದು ಕಾವು ಸಮುದಾಯ ಭವನದಲ್ಲಿ ನಡೆಯಿತು.

ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ತೆಂಕಿಲ ವಿವೇಕಾನಂದ ಕ.ಮಾ ಶಾಲೆಯ ಮುಖ್ಯಗುರು ಆಶಾ ಬೆಳ್ಳಾರೆಯವರು ಮುಖ್ಯಭಾಷಣ ಮಾಡಿದರು.
ಸಭಾಧ್ಯಕ್ಷತೆ ವಹಿಸಿದ್ದ ದ.ಕ ಜಿ.ಪಂನ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿಯವರು ಶುಭ ಹಾರೈಸಿ ಮಾತನಾಡಿದರು
ಮುಖ್ಯ ಅತಿಥಿಯಾಗಿದ್ದ ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕಿ ನವ್ಯಾರವರು ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ಕಾವು ತುಡರ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯರವರು ಕೃತಜ್ಞತೆ ಸಲ್ಲಿಸಿ ಮಾತನಾಡಿದರು.

ಪದಗ್ರಹಣ:
ಮಹಿಳಾ ಮಂಡಲದ ನೂತನ ಪದಾಧಿಕಾರಿಗಳಿಗೆ ಶಾಲು ಹಾಕಿ ಹೂ ನೀಡಿ ಸ್ವಾಗತಿಸಿ ಅಧಿಕಾರದ ಜವಾಬ್ದಾರಿ ನೀಡಲಾಯಿತು. ಅಧ್ಯಕ್ಷೆ ವಿಜಯ ಪಿಲಿಪಂಜರ, ಕಾರ್ಯದರ್ಶಿ ತುಳಸಿ ಪುರುಷೋತ್ತಮ ಆಚಾರ್ಯ ನನ್ಯ, ಗೌರವ ಸಲಹೆಗಾರರಾದ ಸೌಮ್ಯ ಬಾಲಸುಬ್ರಹ್ಮಣ್ಯ, ಗೀತಾ ಮಾಣಿಯಡ್ಕ, ಉಪಾಧ್ಯಕ್ಷೆ ಗಾಯತ್ರಿ ಮಾಣಿಯಡ್ಕ, ಜತೆ ಕಾರ್ಯದರ್ಶಿ ಯಶಸ್ವಿನಿ, ಸಾಂಸ್ಕೃತಿಕ ಕಾರ್ಯದರ್ಶಿ ಅಶ್ವಿತಾ ಎಂ, ಕ್ರೀಡಾ ಕಾರ್ಯದರ್ಶಿ ತ್ರಿವೇಣಿ, ಸಂಘಟನಾ ಕಾರ್ಯದರ್ಶಿಗಳಾದ ಅನಿತಾ ಆಚಾರಿಮೂಲೆ, ಭವ್ಯಾ ಯೋಗೀಶ್ ಕಾವು, ರಮ್ಯ ಮಾಣಿಯಡ್ಕ, ಕಾರ್ಯಕ್ರಮ ಸಂಯೋಜಕಿ ಪ್ರಜ್ಞಾ ಕುಲಾಲ್‌ರವರ ಪದಗ್ರಹಣ ನಡೆಯಿತು.

ಸಮವಸ್ತ್ರ ವಿತರಣೆ:
ಮಹಿಳಾ ಮಂಡಲದ ಪದಾಧಿಕಾರಿಗಳಿಗೆ ಮತ್ತು ಸದಸ್ಯರಿಗೆ ಸಮವಸ್ತ್ರ ವಿತರಣೆ ನಡೆಯಿತು.
ಯುವಕ ಮಂಡಲದ ಅಧ್ಯಕ್ಷ ಸುನೀಲ್ ನಿಧಿಮುಂಡರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಮಂಡಲದ ಸದಸ್ಯೆಯರಾದ ಪ್ರತೀಕ್ಷಾ ಸ್ವಾಗತಿಸಿ, ಪೂಜಾಲಕ್ಷ್ಮೀ ಚಾಕೋಟೆ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಅಶ್ವಿತಾ ಮತ್ತು ಜತೆ ಕಾರ್ಯದರ್ಶಿ ಯಶಸ್ವಿನಿಯವರು ಕಾರ್ಯಕ್ರಮ ನಿರ್ವಹಿಸಿದರು. ಯುವಕ ಮಂಡಲದ ಸದಸ್ಯರು, ಮಹಿಳಾ ಮಂಡಲದ ಸದಸ್ಯರು ಸಹಕರಿಸಿದರು.

ತುಡರ್ ಸ್ಥಾಪಕಾಧ್ಯಕ್ಷರಿಗೆ ಸನ್ಮಾನ:
ಕಾವು ಗ್ರಾಮೀಣ ಭಾಗದಲ್ಲಿ ತುಡರ್ ಯುವ ಸಂಘವನ್ನು ಹುಟ್ಟು ಹಾಕಿ ಕಳೆದ ೧ ದಶಕದಿಂದ ಯುವಜನ ಕ್ಷೇತ್ರವನ್ನು ಕಟ್ಟಿ ಬೆಳೆಸಿದ ತುಡರ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷ, ಕಲಾ ಪೋಷಕ, ಜ್ಯೋತಿಷಿ ಸುಬ್ರಾಯ ಬಲ್ಯಾಯರವರಿಗೆ ಮಹಿಳಾ ಮಂಡಲದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ನನ್ಯ ಅಚ್ಚುತ ಮೂಡೆತ್ತಾಯರವರು ಸನ್ಮಾನಿತರಿಗೆ ಶಾಲು ಹೊದಿಸಿ, ಹಾರ ಹಾಕಿ, ಫಲಪುಷ್ಫ ಸ್ಮರಣಿಕೆ ನೀಡಿ ಅಭಿನಂದಿಸಿದರು. ಮಹಿಳಾ ಮಂಡಲದ ಕಾರ್ಯಕ್ರಮ ಸಂಯೋಜಕಿ ಪ್ರಜ್ಞಾ ಕುಲಾಲ್‌ರವರು ಸನ್ಮಾನಿತರ ಪರಿಚಯ ಓದಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.