ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ದೇವಸ್ಥಾನ ಅಭಿವೃದ್ಧಿಗೆ ಇನ್ನಷ್ಟು ಅನುದಾನ ಒದಗಿಸಲು ಪ್ರಯತ್ನ-ಶಾಸಕರ ಭರವಸೆ

ಪುತ್ತೂರು: ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವು ಡಿ.೨೧ರಿಂದ ಡಿ.೨೮ರ ವರೆಗೆ ನಡೆಯಲಿದ್ದು ಕಾರ್ಯಕ್ರಮದ ಆಮಂತ್ರಣ ಬಿಡುಗಡೆ ನ.28ರಂದು ದೇವಸ್ಥಾನದಲ್ಲಿ ನಡೆಯಿತು. ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದ ಶಾಸಕ ಸಂಜೀವ ಮಠಂದೂರು ಮಾತನಾಡಿ ಕೋವಿಡ್‌ನಿಂದ ಜಗತ್ತೇ ತಲ್ಲಣಗೊಂಡಿದ್ದ ಕಾಲಘಟ್ಟದಲ್ಲಿ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಪುನರ್‌ನಿರ್ಮಾಣವಾಗಿದ್ದು ಇದು ಸದಾ ಕಾಲ ನೆನಪಿನಲ್ಲಿರಲಿದೆ. ದೇವಸ್ಥಾನದ ಕಾರ್ಯಗಳಲ್ಲಿ ಊರವರ ಸಹಕಾರ ಪ್ರಮುಖವಾಗಿದ್ದು ಸರಕಾರದ ಮಟ್ಟದಲ್ಲೂ ಈ ದೇವಸ್ಥಾನಕ್ಕೆ ಅನುದಾನ ನೀಡುವ ವ್ಯವಸ್ಥೆಯನ್ನು ಈಗಾಗಲೇ ಮಾಡಿದ್ದೇನೆ. ಮುಂದಕ್ಕೂ ಒಂದಷ್ಟು ಅನುದಾನ ಒದಗಿಸಲು ಪ್ರಯತ್ನಿಸುತ್ತೇನೆ, ಅದರೊಟ್ಟಿಗೆ ತಡೆಗೋಡೆ, ಇಂಟರ್‌ಲಾಕ್ ಮಾಡಿಸುವ ಯೋಚನೆಯಿದೆ ಎಂದು ಅವರು ಹೇಳಿದರು.

ಇಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಪುನರ್‌ನಿರ್ಮಾಣ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ ಊರವರೆಲ್ಲ ಸಕ್ರಿಯವಾಗಿ ಪಾಲ್ಗೊಂಡು ಯಶಸ್ಸುಗೊಳಿಸಬೇಕು. ನನ್ನಿಂದಾಗುವ ನೆರವನ್ನು ನಾನು ಕೂಡಾ ಸರಕಾರಿ ಮಟ್ಟದಲ್ಲಿ ನೀಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.

ಹಿಂದೂ ಧರ್ಮೋತ್ಥಾನ ಆಗಬೇಕು:
ಹಿಂದೂ ಧರ್ಮೋತ್ಥಾನ ಆಗಬೇಕು ಎನ್ನುವ ದೃಷ್ಟಿಯಲ್ಲಿ ನಾವೆಲ್ಲಾ ಒಂದಾಗಿ ದೇವಸ್ಥಾನ, ದೈವಸ್ಥಾನ, ನಾಗಸ್ಥಾನ ಇವೆಲ್ಲವನ್ನು ಅಭಿವೃದ್ಧಿ ಮಾಡಿ ನಮ್ಮ ಮುಂದಿನ ಪೀಳಿಗೆ ಶ್ರದ್ಧೆಯಲ್ಲಿ ಬದುಕಬೇಕು, ಧಾರ್ಮಿಕ ಭಾವನೆಗೆ ಹಿಂದೂ ಸಮಾಜ ಜಗತ್ತಿಗೆ ಮಾರ್ಗದರ್ಶನ ನೀಡುವ ಕಾರ್ಯಕ್ರಮವಾಗಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಎಲ್ಲರ ಸಹಕಾರ ಅಗತ್ಯ-ಲೋಕಪ್ಪ ಗೌಡ
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಕರೆಮನೆ ಮಾತನಾಡಿ ದೇವಸ್ಥಾನದಲ್ಲಿ ಕಾರ್ಯಕ್ರಮಗಳಲ್ಲಿ ಎಲ್ಲರೂ ತೊಡಗಿಸಿಕೊಳ್ಳುವ ಮೂಲಕ ಉತ್ತಮ ರೀತಿಯಲ್ಲಿ ನಡೆಯಲು ಸಹಕಾರ ನೀಡಬೇಕು ಎಂದು ಹೇಳಿದರು.

ಉತ್ತಮ ರೀತಿಯಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿದೆ-ಶಿವನಾಥ ರೈ
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು ಮಾತನಾಡಿ ದೇವಸ್ಥಾನದ ಕೆಲಸ ಕಾರ್ಯಗಳು ಆರಂಭವಾದ ಮೇಲೆ ಎರಡು ಬಾರಿ ಕೊರೋನಾ ಮಹಾಮಾರಿ ವಕ್ಕರಿಸಿದ ಹಿನ್ನೆಲೆಯಲ್ಲಿ ದೇವಸ್ಥಾನದ ಕೆಲಸ ಕಾರ್ಯಗಳು ಒಂದಷ್ಟು ನಿಧಾನವಾಗಿತ ಸಾಗಿತ್ತು. ನಿಧಾನವಾದರೂ ಉತ್ತಮ ರೀತಿಯಲ್ಲಿ ಎಲ್ಲ ಕೆಲಸ ಕಾರ್ಯಗಳನ್ನು ನಡೆಸುತ್ತಾ ಹೋಗುತ್ತಿದ್ದೇವೆ. ನೀವೆಲ್ಲರೂ ಸಹಕಾರ ನೀಡಿದ್ದೀರಿ. ಪ್ರಾರಂಭದಲ್ಲಿ ಶಾಸಕ ಸಂಜೀವ ಮಠಂದೂರು ಅವರು ರೂ.೧೦ ಲಕ್ಷ ಅನುದಾನ ಕೊಟ್ಟ ಕಾರಣ ಕೊರೋನಾ ಸಂದರ್ಭದಲ್ಲೂ ಕೆಲಸ ಮುಂದುವರಿಸಲು ಸುಲಭವಾಗಿದೆ, ಮುಂದಕ್ಕೂ ಶಾಸಕರು ನೆರವು ನೀಡುವ ಭರವಸೆಯಿದೆ ಎಂದು ಅವರು ಹೇಳಿದರು.

ಎಲ್ಲರೂ ಸೇರಿ ಯಶಸ್ವಿಗೊಳಿಸೋಣ-ಪ್ರಸಾದ್ ರೈ
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಸಾದ್ ಸೊರಕೆ ಮಾತನಾಡಿ ನಮ್ಮ ದೇವಸ್ಥಾನಕ್ಕೆ ಶಾಸಕರು ಬಹಳಷ್ಟು ಸಹಕಾರ ನೀಡಿದ್ದು ಮುಂದಕ್ಕೂ ಸಹಕಾರ ನೀಡಲಿದ್ದಾರೆ. ಊರವರು, ಭಕ್ತಾಭಿಮಾನಿಗಳೆಲ್ಲ ಸೇರಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಮೋಹನ್ ರೈ ಓಲೆಮುಂಡೋವು, ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀರಾಮ ಕಲ್ಲೂರಾಯ, ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು, ಜೀಣೋಧ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯವರು, ಊರವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.