ನ.29: ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆ ಚಿಂತನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನ.21ರಂದು ಸ್ವರ್ಣ ಪ್ರಶ್ನಾ ಚಿಂತನೆ ನಡೆದಿದ್ದು, ದ್ವಾದಶಿ ರಾಶಿ ಮಂಡಲದಲ್ಲಿ ಧನು ರಾಶಿಗೆ ಪ್ರಶ್ನೆ ಚಿಂತನೆ ಚಾಲನೆ ದೊರೆತ ಬಳಿಕ ನ.29ರಿಂದ ಅಷ್ಟಮಂಗಲ ಪ್ರಶ್ನೆ ಚಿಂತನೆ ನಡೆಯಲಿದೆ.

ನ.29ರಿಂದ ಒಂದು ವಾರ ನಡೆಯುವ ದೇವಾಷ್ಟಮಂಲ ಪ್ರಶ್ನಾಚಿಂತನೆಯ ಪೂರ್ವಭಾವಿಯಾಗಿ ಖ್ಯಾತ ಜೋತ್ಯಿರ್‌ವಿದ್ವಾನ್ ಒಳಕುಂಜ ವೆಂಕಟರಮಣ ಭಟ್ ನೇತೃತ್ವದಲ್ಲಿ ಅವರ ಪುತ್ರ ಪ್ರಶ್ನಾ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಹಾಪ್ರಬಂಧ ಮಂಡಿಸಿರುವ ಡಾ. ವಳಕುಂಜ ಮುರಳೀಕೃಷ್ಣ ಭಟ್ ಸ್ವರ್ಣ ಪ್ರಶ್ನೆ ರಾಶಿ ನೆರವೇರಿಸಿದರು. ಕೋಕೊ ಗುರು ಸಂಸ್ಥೆಯ ಶಿವಶಂಕರ್ ಭಟ್ ಬೋನಂತಾಯ ಅವರ ಮೊಮ್ಮಗಳು ಗರಿಮಾ ಅವರು ತುಂಬೆ ಹೂವು ಮತ್ತು ಭತ್ತವನ್ನು ಕೈಯಲ್ಲಿ ಹಿಡಿದು ದ್ವಾದಶ ರಾಶಿ ಮಂಡಲಕ್ಕೆ ಮೂರು ಸುತ್ತು ಬಂದು ಮೊದಲೇ ದೈವಜ್ಞರ ಮಾರ್ಗದರ್ಶನದಂತೆ ತನಗಿಷ್ಟವಾದ ಒಂದು ಚೌಕಾಕಾರದ ಕೋಣೆಯಲ್ಲಿ ಹೂವು, ಭತ್ತದ ಜೊತೆಗೆ ವಳಕುಂಜ ಕುಟುಂಬದ ಸ್ವರ್ಣ ನಾಣ್ಯವನ್ನು ಇಟ್ಟು ನಮಸ್ಕರಿಸಿದರು. ಆಕೆ ಇಟ್ಟ ಕೋಣೆಗೆ ಸಂಬಂಧಿಸಿ ಸ್ವರ್ಣಾರೂಢರಾಶಿಯಾಗಿ ಧನು ಬಂದಿತ್ತು. ಇದೀಗ ನ.೨೯ರಿಂದ ಒಂದು ವಾರ ಕಾಲ ಅಷ್ಟಮಂಗಲ ಪ್ರಶ್ನಾಚಿಂತನೆ ನಡೆಯಲಿದೆ.

ಸ್ವರ್ಣಪ್ರಶ್ನೆ ಇಡುವ ಸಂದರ್ಭ ದೇವರ ಉತ್ಸವ ಬಲಿ:
ಸ್ವರ್ಣಪ್ರಶ್ನೆ ಇಡುವ ಸಂದರ್ಭ ದೇವರ ನಿತ್ಯ ಬಲಿ ಉತ್ಸವವೂ ನಡೆಯುತ್ತಿತ್ತು. ಕಾಕತಾಳಿಯವೆಂಬಂತೆ ದೇವರ ಉತ್ಸವ ಮೂರ್ತಿಯ ನಿತ್ಯ ಬಲಿ ಗೋಪುರಕ್ಕೆ ಸಮೀಪ ಬರುತ್ತಿದ್ದಂತೆ ಗರಿಮಾ ಅವರು ಸ್ವರ್ಣಪ್ರಶ್ನೆಗೆ ಪೂರಕವಾಗಿ ದ್ವಾದಶ ರಾಶಿ ಮಂಡಲದಲ್ಲಿ ಸ್ವರ್ಣ ಇರಿಸಿರುವುದು ವಿಶೇಷವಾಗಿತ್ತು. ಸ್ವತಃ ದೇವರ ಇಷ್ಟಾನುಸಾರವೇ ಸ್ವರ್ಣಪ್ರಶ್ನೆ ಇಡಲಾಗಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.