ಜೂನಿಯರ್ ಕಾಲೇಜು ವಿದ್ಯಾರ್ಥಿಗಳ ಹೊಡೆದಾಟದ ಪ್ರಕರಣ – ವಿದ್ಯಾರ್ಥಿಗಳ ವಿಷಯದಲ್ಲಿ ಹೊರಗಿನವರ ಪ್ರವೇಶಕ್ಕೆ ಆಸ್ಪದವಿರಬಾರದು ವಿದ್ಯಾರ್ಥಿಗಳಲ್ಲಿ ರಾಜಕೀಯ, ಕೋಮುದ್ವೇಷ ಹರಡಬಾರದು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು ಜೂನಿಯರ್ ಕಾಲೇಜಿನಲ್ಲಿ ನಡೆದ ಘಟನೆಗಳನ್ನು ವಿಸ್ತರಿಸಲು ಬಯಸುವುದಿಲ್ಲ. ಶಾಲೆಯ ಜೀವನದಲ್ಲಿ ವಿದ್ಯಾರ್ಥಿಗಳು ಜಗಳವಾಡುತ್ತಾರೆ, ಹೊಡೆದಾಡಿಕೊಳ್ಳುತ್ತಾರೆ, ರಾಜಿಯಾಗುತ್ತಾರೆ, ಸ್ನೇಹಿತರಾಗುತ್ತಾರೆ. ಮುಂದೆ ಭವಿಷ್ಯತ್ತಿನಲ್ಲಿ ವಿದ್ಯಾರ್ಥಿ ಜೀವನದ ಘಟನೆಗಳನ್ನು ನೆನಪಿಸಿಕೊಂಡು ನಗುತ್ತಾರೆ. ಅದು ಅವರಿಗೆ ಜೀವನದ ಪಾಠವನ್ನು ಕಲಿಸಿಕೊಡುತ್ತದೆ. ನಾವು ಸಣ್ಣವರಿರುವಾಗ ನಮ್ಮ ಶಾಲೆಗಳಲ್ಲಿ ಎಲ್ಲಾ ಧರ್ಮದವರಿದ್ದರು. ಮೆಡಿಕಲ್ ಕಾಲೇಜಿನಲ್ಲಿ ಓದುವಾಗ ಎಲ್ಲಾ ಭಾಷಿಕರು, ವಿದೇಶಿಗರೂ ಇದ್ದರು. ಅವರ ಹಬ್ಬಗಳು ನಮಗೂ ಸಂಭ್ರಮದ ದಿನಗಳಾಗುತ್ತಿದ್ದವು. ನಮ್ಮ ಧರ್ಮದ ಆಚರಣೆಯಲ್ಲಿ ಅವರೂ ಸೇರಿಕೊಳ್ಳುತ್ತಿದ್ದರು. ಅವರ ಮನೆಗಳಿಗೂ ನಾವು ಹೋದದ್ದಿದೆ, ನಮ್ಮ ಮನೆಗೂ ಅವರು ಬಂದಿದ್ದಾರೆ. ಅಲ್ಲಿ ಎಲ್ಲಿಯೂ ಅವರ ಧರ್ಮ, ನಮ್ಮ ಧರ್ಮ ನಮ್ಮ ಸ್ನೇಹಾಚಾರಕ್ಕೆ ತೊಡಕುಂಟು ಮಾಡಿರಲಿಲ್ಲ. ಇಂದಿಗೂ ಎಂದಿಗೂ ಅವರು ಸ್ನೇಹಿತರಾಗಿ ಉಳಿದಿದ್ದಾರೆ. ನಮ್ಮ ಕಛೇರಿಯಲ್ಲಿ ವಿವಿಧ ಧರ್ಮದವರೂ ಕೆಲಸ ಮಾಡುತ್ತಿದ್ದಾರೆ. ಸಮಾಜದ ಎಲ್ಲಾ ಧರ್ಮದವರ, ಜಾತಿಯವರ, ಭಾಷೆಯವರ ಸುದ್ದಿ ನಮ್ಮ ಪತ್ರಿಕೆಗೆ ಪ್ರಿಯವಾದ ಸುದ್ದಿಯಾಗಿರುತ್ತದೆ.

ಇಂದು ಜೂನಿಯರ್ ಕಾಲೇಜಿನಲ್ಲಿ ನಡೆದ ಘಟನೆಗೆ ಅಲ್ಲಿ ಭಾಗವಹಿಸಿದವರು ಅಪ್ರಾಪ್ತ ವಯಸ್ಕರಾದ್ದರಿಂದ ಅವರ ಹೆಸರು, ಫೊಟೋಗಳನ್ನು ಪ್ರಕಟಿಸದಂತೆ ಕಾನೂನಿದೆ. ಆದರೆ ರಾಜಕೀಯದವರಿಗೆ, ಮತೀಯ ಭಾವನೆಯನ್ನೇ ಬೆಳೆಸುವವರಿಗೆ ತಾವು ಎಳೆಯ ಮನಸ್ಸುಗಳನ್ನು ಹಾಳು ಮಾಡುತ್ತಿದ್ದೇವೆ ಎಂಬ ಚಿಂತೆಯಿರಬೇಕು. ಅವರು ನಮ್ಮಂತೆ ಆಗದೆ ಸಮಾಜದಲ್ಲಿ ಎಲ್ಲರೊಂದಿಗೆ ಬೆರೆಯುವಂತೆ, ಬೆಳೆಯುವಂತಾಗಬೇಕು ಎಂದು ಬಯಸಬೇಕು ಎಂಬುದೇ ನಮ್ಮ ಕಳಕಳಿಯ ಮನವಿ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ವಿಷಯದಲ್ಲಿ ಹೊರಗಿನವರ ಪ್ರವೇಶವಿರಬಾರದು. ಶಾಲೆಯ ಆಡಳಿತ ಮಂಡಳಿ, ಜನಪ್ರತಿನಿಧಿಗಳು, ಸಾರ್ವಜನಿಕರು, ಪೊಲೀಸರು ಆ ರೀತಿಯ ಹಸ್ತಕ್ಷೇಪವಾಗದಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳ ಭವಿಷ್ಯತ್ತಿನಲ್ಲಿ ಆಟವಾಡುವವರನ್ನು ಸಮಾಜ ಖಂಡಿಸಬೇಕು ಮತ್ತು ದೂರವಿಡಬೇಕು. ಜೂನಿಯರ್ ಕಾಲೇಜಿನ ಪ್ರಕರಣದ ಕೊನೆಯಲ್ಲಿ ಆಡಳಿತ ಮಂಡಳಿ ಮಾಡಿದ ಅಂತಹ ಕೆಲಸವನ್ನು ಪ್ರಾರಂಭದಲ್ಲಿಯೇ ಮಾಡಿದ್ದರೆ ಅಹಿತಕರ ಘಟನೆಗಳು ನಡೆಯುತ್ತಿರಲಿಲ್ಲ. ವಿದ್ಯಾರ್ಥಿಗಳು ದಾರಿತಪ್ಪದಂತೆ ನೋಡಿಕೊಳ್ಳಬಹುದಿತ್ತು ಎಂಬುದನ್ನು ಇನ್ನು ಮುಂದೆ ಅಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ ಎಲ್ಲರ ಮುಂದಿಡಲು ಬಯಸುತ್ತೇವೆ.


Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.