ಅಂತರ್ ಕಾಲೇಜು ಅಕ್ವಾಟಿಕ್ ಚಾಂಪಿಯನ್‌ಶಿಪ್ – ಸಂತ ಫಿಲೋಮಿನಾ ಕಾಲೇಜಿನ ತ್ರಿಶೂಲ್ ರನ್ನರ್ ಅಪ್, ಸಿಂಚನಾ ಡಿ.ಗೌಡರಿಗೆ ಕಂಚು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : 2021ರ ನ.27 ರಂದು ಉಡುಪಿಯ ಅಜ್ಜೆರ್ಕಾಡು ಈಜುಕೊಳದಲ್ಲಿ ಉಡುಪಿಯ ಉಪೇಂದ್ರ ಪೈ ಸ್ಮಾರಕ ಕಾಲೇಜು ವತಿಯಿಂದ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನ ತ್ರಿಶೂಲ್ ಮತ್ತು ಸಿಂಚನಾ ಡಿ.ಗೌಡ ಮಿಂಚಿದ್ದಾರೆ.


ಪ್ರಥಮ ಬಿಎ ವಿದ್ಯಾರ್ಥಿ ತ್ರಿಶೂಲ್ ವಿವಿಧ ವೈಯಕ್ತಿಕ ಈಜು ಸ್ಪರ್ಧೆಗಳಲ್ಲಿ 11 ಪದಕಗಳನ್ನು ಗೆಲ್ಲುವ ಮೂಲಕ ಬಾಲಕರ ವಿಭಾಗದಲ್ಲಿ ಮೊದಲ ರನ್ನರ್ ಅಪ್ ಆದರು. ಅವರು ೧೫೦೦ ಫ್ರೀಸ್ಟೈಲ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 100ಮೀಟರ್ಸ್ ಬ್ರೆಸ್ಟ್ ಸ್ಟ್ರೋಕ್, 200 ಫ್ರೀಸ್ಟೈಲ್, 200 ಬ್ರೆಸ್ಟ್ ಸ್ಟ್ರೋಕ್, 400  ಫ್ರೀಸ್ಟೈಲ್, 800 ಫ್ರೀಸ್ಟೈಲ್, ೫೦ ಬ್ಯಾಕ್ ಸ್ಟ್ರೋಕ್ ಮತ್ತು ೨೦೦ ಇಂಡಿವಿಜುವಲ್ ಮೆಡ್ಲಿಯಲ್ಲಿ ೭ ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ. ತ್ರಿಶೂಲ್ ೫೦ ಮೀಟರ್ ಬಟರ್‌ಫ್ಲೈ, ೫೦ ಮೀಟರ್ ಫ್ರೀಸ್ಟೈಲ್, ೧೦೦ ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ೩ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

3ನೇ ಬಿಕಾಂನ ಸಿಂಚನಾ ಡಿ.ಗೌಡ50 ಮೀಟರ್ ಬ್ಯಾಕ್‌ಸ್ಟ್ರೋಕ್, ೨೦೦ ಮತ್ತು ೫೦ ಮೀಟರ್ ಬಟರ್‌ಫ್ಲೈನಲ್ಲಿ ೩ ಕಂಚಿನ ಪದಕ ಗೆದ್ದಿದ್ದಾರೆ. ಇಬ್ಬರೂ ಪುತ್ತೂರು ಅಕ್ವಾಟಿಕ್ ಕ್ಲಬ್‌ನ ಸದಸ್ಯರಾಗಿದ್ದಾರೆ ಮತ್ತು ಪುತ್ತೂರಿನ ಡಾ. ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ಮತ್ತು ಮಂಗಳೂರಿನ ಸೇಂಟ್ ಅಲೋಶಿಯಸ್ ಈಜುಕೊಳದಲ್ಲಿ ಕೋಚ್ ಪಾರ್ಥ, ಕೋಚ್ ನಿರೂಪ್, ಕೋಚ್ ರೋಹಿತ್ ಮತ್ತು ಕೋಚ್ ದೀಕ್ಷಿತ್ ಅವರ ನೇತೃತ್ವದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.