ಪುತ್ತೂರಿನಲ್ಲಿ 5 ಸ್ಟಾರ್ ಚಿಕನ್ ಪ್ರಾಂಚೈಸ್ ಉದ್ಘಾಟನೆ – ಕೋಳಿ ಮಾಂಸದ ಬಗೆ ಬಗೆಯ ಆಹಾರ ಇನ್ನು ನಿಮ್ಮ ಮನೆ ಬಾಗಿಲಿಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಭಾರತದಲ್ಲಿ 600ಕ್ಕೂ ಮಿಕ್ಕಿ ಪ್ರಾಂಚೈಸ್ ಗಳನ್ನೊಳಗೊಂಡ ಕೋಳಿ ಮಾಂಸದ ಬಗೆ ಬಗೆಯ ಸಿದ್ದಪಡಿಸಿದ ಆಹಾರಗಳಾದ ಥಾಯ್ ಕ್ರಿಸ್ತಿ, ಕ್ರಂಚಿ ಮಸಾಲ, ಹಾಟ್ ಎನ್‌ಸ್ಮೋಕಿ, ಸಥೆರ್ನ್ ಸ್ಪೈಸ್, ಚಿಕನ್ ರೋಲ್, ಕ್ರಿಸ್ಟಿ ಚಿಕನ್ ಬರ್ಗರ್ ಸೇರಿದಂತೆ ಸುಮಾರು 17ಕ್ಕೂ ಮಿಕ್ಕಿದ ಐಟಂಗಳನ್ನೊಳಗೊಂಡ 5 ಸ್ಟಾರ್ ಚಿಕನ್ ನ.29ರಂದು ಇಲ್ಲಿನ ಹೆಗ್ಡೆ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನೆಗೊಂಡಿತ್ತು. ದಿನೇಶ್ ಭವನದ ಸಚಿನ್ ಶೆಣೈ ಮಾಲಕತ್ವದ ಪೂರ್ಣಗಿರಿ ಎಂಟರ್‌ಪ್ರೈಸಸ್‌ನ ನೇತೃತ್ವದಲ್ಲಿ ನೂತನ ಸಂಸ್ಥೆಯನ್ನು ಅವರ ತಂದೆ ಗಿರಿಧರ್ ಶೆಣೈ ಮತ್ತು ಹಿರಿಯ ವೈದ್ಯ ಡಾ.ಗೋಪಿನಾಥ್ ಪೈ ಉದ್ಘಾಟಿಸಿದರು.


ಹೊಟೇಲ್ ದಿನೇಶ್ ಭವನದ ಗುಣಮಟ್ಟದಂತೆ ಸಂಸ್ಥೆ ಯಶಸ್ವಿಯಾಗಲಿ:
ಹಿರಿಯ ವೈದ್ಯ ಡಾ.ಗೋಪಿನಾಥ್ ಪೈ ಅವರು ಮಾತನಾಡಿ ಗುಣಮಟ್ಟ, ಕಡಿಮೆ ಬೆಲೆ ಮತ್ತು ಸೇವೆಯಲ್ಲಿ ಹೆಸರು ಪಡೆದ ಪುತ್ತೂರಿನ ಪ್ರಸಿದ್ದ ಹೋಟೇಲ್ ದಿನೇಶ್ ಭವನದಂತೆ ಅವರ ಮಕ್ಕಳು ಕೂಡಾ ನೂತನ ಸಂಸ್ಥೆಯಲ್ಲಿ ಉತ್ತಮ ಗುಣಮಟ್ಟವನ್ನು ಪಾಲಿಸುವ ಮೂಲಕ ಪುತ್ತೂರಿಗೆ ಮಾದರಿಯಾಗಲಿ ಎಂದು ಹಾರೈಸಿದರು.


ಹೊಸತನದ ರುಚಿ ಜನರಿಗೆ ಮೆಚ್ಚುಗೆಯಾಗಲಿ:
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಮಾಂಸಹಾರಿಯಲ್ಲೂ ವಿಶಿಷ್ಟ ಮಾದರಿಯನ್ನು ಅಪೇಕ್ಷೆ ಪಡುವವರಿಗೆ ಇಂತಹ ನೂತನ ಸಂಸ್ಥೆಗಳು ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಆರಂಭಗೊಂಡ ೫ ಸ್ಟಾರ್ ಚಿಕನ್ ಉತ್ತಮ ರೀತಿಯಲ್ಲಿ ಜನರ ಪ್ರೀತಿಗೆ ಪಾತ್ರವಾಗಲಿ. ಹೊಸತನ ರುಚಿ ಪುತ್ತೂರಿನ ಯುವಕ, ಯುವತಿಯರಿಗೆ ಆಕರ್ಷಣೆಯಾಗಲಿ ಎಂದು ಹೇಳಿದರು.


ಕ್ವಾಲಿಟಿಗೆ ಹೆಚ್ಚಿನ ಆದ್ಯತೆ:
5 ಸ್ಟಾರ್ ಚಿಕನ್‌ನ ಕರ್ನಾಟಕ ರೀಜಿನಲ್ ಮೆನೇಜರ್ ಆದರ್ಶ್ ಅವರು ಮಾತನಾಡಿ 1985ರಲ್ಲಿ ತೈಲೆಂಡನಲ್ಲಿ ಆರಂಭಗೊಂಡ ೫ಸ್ಟಾರ್ ಚಿಕನ್ ಇವತ್ತು ಪ್ರಪಂಚದಾದ್ಯಂತ ೭ಸಾವಿರಕ್ಕೂ ಮಿಕ್ಕಿ ಜೌಟ್‌ಲೇಟ್ ಇದೆ. ಭಾರತದಲ್ಲಿ ೬೦೦ಕ್ಕೂ ಮಿಕ್ಕಿ ಔಟ್‌ಲೇಟ್ ಇದೆ. ಕೆಎಫ್‌ಸಿಗೂ ಕಚ್ಚಾ ವಸ್ತುಗಳನ್ನು ೫ ಸ್ಟಾರ್ ಚಿಕನ್ ಸಪ್ಲಾಯ್ ಮಾಡುತ್ತಿದೆ. ಚಿತ್ತೂರಿನಲ್ಲಿ ನಮ್ಮ ಕಾರ್ಖಾನೆ ಇದೆ. ಕ್ವಾಲಿಟಿಗೆ ಹೆಚ್ಚು ಆದ್ಯತೆ ನೀಡುವುದರಿಂದ ಕಂಪೆನಿ ಬೆಳೆದಿದೆ. ಕಂಪೆನಿಯಿಂದ ಯಾವ ಸಹಾಯ ಬೇಕು ಅದನ್ನು ಪುತ್ತೂರು ಔಟ್‌ಲೇಟ್‌ಗೆ ಕೊಡಲು ಸಿದ್ದ ಎಂದರು. ಈ ಸಂದರ್ಭದಲ್ಲಿ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಯುವ ಉದ್ಯಮಿ ಇಂದಾಜೆ ವೆಂಕಟರಮಣ ನಾಯಕ್, ನಡುಸಾರಿ ಮಚ್ಚಿಮಲೆ ರಾಮ್‌ಭಟ್, ಸಂಸ್ಥೆಯ ಮಾಲಕ ಸಚಿನ್ ಶೆಣೈ ಅವರ ತಂದೆ ಗಿರಿಧರ್ ಶೆಣೈ, ಪೂರ್ಣಿಮ ದಂಪತಿ, ಸಹೋದರ ನಿತಿನ್ ಶೆಣೈ, ದೀಕ್ಷಿತಾ ದಂಪತಿ, ಕು.ದ್ವಿತಿ, ಭಾಮಿ ಜಗದೀಶ್ ಶೆಣೈ, ವೆಂಕಟೇಶ್ ಹೆಗ್ಡೆ, ರಂಜಿತ್ ಜೈನ್, ವಿಶ್ವನಾಥ್ ಕುಲಾಲ್, ಜೀವನ್, ವಸಂತ ವೀರಮಂಗಲ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರ ಪತ್ನಿ ಸುಶ್ಚಿತಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ತೆರಿಗೆ ಸಲಹೆಗಾರ ರಾಜ್‌ಗಣೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

ಆನ್‌ಲೈನ್ ಮೂಲಕ ಹೋಮ್ ಡೆಲಿವರಿ ವ್ಯವಸ್ಥೆ
ಜನರಿಗೆ ಉತ್ತಮ ಗುಣಮಟ್ಟದ ಶುಚಿರುಚಿಯಾದ ಕೋಳಿ ಮಾಂಸದ ಉತ್ಪನ್ನ ಆಹಾರ ಕೊಡುವ ಉದ್ದೇಶ ನಮ್ಮದು. ಬೆಳಿಗ್ಗೆ ಗಂಟೆ 10.30 ರಿಂದ ರಾತ್ರಿ ಗಂಟೆ 10ರ ತನಕ ನಮ್ಮ ಔಟ್‌ಲೇಟ್ ತೆರೆದಿರುತ್ತದೆ. ಅದೇ ರೀತಿ ಆನ್‌ಲೈನ್ ಮೂಲಕ ಜೊಮೆಟೊ, ಸ್ವೀಗಿ, ಪ್ಯಾಗೋ ಮೂಲಕ ಆರ್ಡರ್ ಮಾಡಿದರೆ ಡೆಲಿವರಿ ವ್ಯವಸ್ಥೆ ಇದೆ. ಕೋಳಿ ಮಾಂಸದಲ್ಲಿ ಬಗೆ ಬಗೆಯ ವಿಶೇಷ ಖಾದ್ಯಗಳು ರೂ. 45 ರಿಂದ ಆರಂಭಗೊಳ್ಳುತ್ತದೆ. ಥಾಯ್ ಕ್ರಿಸ್ತಿ, ಕ್ರಂಚಿ ಮಸಾಲ, ಹಾಟ್ ಎನ್‌ಸ್ಮೋಕಿ, ಸಥೆರ್ನ್ ಸ್ಪೈಸ್, ಚಿಕನ್ ರೋಲ್, ಕ್ರಿಸ್ಟಿ ಚಿಕನ್ ಬರ್ಗರ್, ಸೀಕ್ ರೋಲ್, ಹಂಗ್ರಿ ಬರ್ಡ್ ಬರ್ಗರ್, ಕ್ರಿಸ್ಟರ್ ರೋಲ್, ಹಾಟ್ ಕ್ರಿಸ್ತಿ ಬರ್ಗರ್, ಚಿನ್ ಪಿಂಗರ್‍ಸ್, ಮಸಾಲ ಪ್ರೈಸ್, ಚಿಕನ್ ನಗ್ಗೆಟ್ಸ್, ಚಿನ್ ಪಾಪ್‌ಕಾರ್ನ್, ಚೀಸಿ ಚಿಕನ್ ಶಾರ್ಟ್ಸ್, ಚಿಕನ್ ಸ್ಟ್ರೀಪ್ಸ್ ಗ್ರಾಹಕರ ಆರ್ಡರ್‌ಗೆ ತಕ್ಕಂತೆ ಮಾಡಿಕೊಡಲಾಗುವುದು. ಪುತ್ತೂರಿನ ಜನತೆಯ ಸಹಕಾರ ನಮಗೆ ಬೇಕು.
ಸಚಿನ್ ಶೆಣೈ, ಮಾಲಕರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.