ಮಂಗಳೂರು ವಿ.ವಿ ಅಂತರ್-ಕಾಲೇಜು ಈಜು ಸ್ಪರ್ಧೆ – ಪುರುಷರ ವಿಭಾಗದಲ್ಲಿ ಫಿಲೋಮಿನಾ ಕಾಲೇಜು ಚಾಂಪಿಯನ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಉಡುಪಿ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ವತಿಯಿಂದ ಉಡುಪಿಯ ಅಜ್ಜರಕಾಡು ಈಜುಕೊಳದಲ್ಲಿ ನ.27 ರಂದು ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್-ಕಾಲೇಜು ಈಜು ಸ್ಪರ್ಧೆಯಲ್ಲಿ ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಪುರುಷರ ತಂಡವು ಚಾಂಪಿಯನ್ ಎನಿಸಿಕೊಂಡಿದೆ.


ಪ್ರಥಮ ಬಿಎಸ್ಸಿ ವಿಭಾಗದ ವಿದ್ಯಾರ್ಥಿ ನೀಲ್ ಮಸ್ಕರೇನ್ಹಸ್‌ರವರು ೫೦ಮೀ., 100ಮೀ, 200ಮೀ ಬ್ರೆಸ್ಟ್ ಸ್ಟ್ರೋಕ್, 50ಮೀ., 100ಮೀ, 200ಮೀ ಬ್ಯಾಕ್ ಸ್ಟ್ರೋಕ್, ೫೦ಮೀ., 100ಮೀ, 200ಮೀ ಬಟರ್‌ಫ್ಲೈ, 400ಮೀ, 800ಮೀ ಫ್ರೀ ಸ್ಟೈಲ್, 200ಮೀ, ೪೦೦ಮೀ ವೈಯಕ್ತಿಕ ಮೆಡ್ಲೆಯಲ್ಲಿ ಚಿನ್ನದ ಪದಕ, 50ಮೀ ಫ್ರೀ ಸ್ಟೈಲ್‌ನಲ್ಲಿ ಬೆಳ್ಳಿ ಪದಕವನ್ನು ಗಳಿಸಿಕೊಂಡಿದ್ದಾರೆ. ಪ್ರಥಮ ಬಿಎ ವಿಭಾಗದ ವಿದ್ಯಾರ್ಥಿ ತ್ರಿಶೂಲ್‌ರವರು 1500ಮೀ ಫ್ರೀ ಸ್ಟೈಲ್‌ನಲ್ಲಿ ಚಿನ್ನದ ಪದಕ, 100ಮೀ, 200ಮೀ ಬ್ರೆಸ್ಟ್ ಸ್ಟ್ರೋಕ್, 200ಮೀ ಫ್ರೀ ಸ್ಟೈಲ್, 400ಮೀ, 800ಮೀ ಫ್ರೀ ಸ್ಟೈಲ್, 50ಮೀ, 100ಮೀ ಬ್ಯಾಕ್ ಸ್ಟ್ರೋಕ್, 200ಮೀ ಮೆಡ್ಲೆನಲ್ಲಿ ಬೆಳ್ಳಿ ಪದಕ, 50ಮೀ ಬಟರ್‌ಫ್ಲೈ, ೫೦ಮೀ ಫ್ರೀ ಸ್ಟೈಲ್‌ನಲ್ಲಿ ಕಂಚಿನ ಪದಕವನ್ನು ಗಳಿಸಿದ್ದಾರೆ. ಅಂತಿಮ ಬಿಕಾಂ ವಿಭಾಗದ ವಿದ್ಯಾರ್ಥಿನಿ ಸಿಂಚನಾ ಡಿ.ಗೌಡರವರು 50ಮೀ, 200ಮೀ ಬಟರ್‌ಫ್ಲೈ, 50ಮೀ ಬ್ಯಾಕ್ ಸ್ಟ್ರೋಕ್‌ನಲ್ಲಿ ಕಂಚಿನ ಪದಕವನ್ನು ಗಳಿಸಿದ್ದಾರೆ. ಇವರುಗಳಿಗೆ ಬಾಲವನ ಈಜುಕೊಳದ ಪಾರ್ಥ ವಾರಣಾಶಿ, ವಸಂತ್ ಕುಮಾರ್, ನಿರೂಪ್ ಜಿ.ಆರ್, ರೋಹಿತ್, ದೀಕ್ಷಿತ್‌ರವರು ತರಬೇತಿ ನೀಡಿರುತ್ತಾರೆ.


ತ್ರಿಶೂಲ್‌ರವರು ಹದಿನೇಳರ ಹರೆಯದಲ್ಲಿರುವಾಗಲೇ ಆಸ್ಟ್ರೇಲಿಯಾದ ಆಡಿಲೇಡ್‌ನಲ್ಲಿ ಜರಗುವ ವಿಶ್ವ ಚಾಂಪಿಯನ್‌ಶಿಪ್ ಜೀವರಕ್ಷಕ ಈಜು ಸ್ಪರ್ಧೆಗೆ ಆಯ್ಕೆಯಾಗಿ ಗಮನ ಸೆಳೆದಿದ್ದರು. ಇವರು ಬಾಲವನ ಈಜುಕೊಳದಲ್ಲಿ ಸೆಕ್ಯೂರಿಟಿಯಾಗಿರುವ ತಂದೆ ಶಿವಣ್ಣ ಹಾಗೂ ತಾಯಿ ಟಿ.ನಳಿನಿರವರ ಪುತ್ರ. ಸಿಂಚನಾ ಡಿ.ಗೌಡರವರು ಈ ಹಿಂದೆ ಚೆನ್ನೈನ ಕೋವಲಮ್‌ನಲ್ಲಿ ನಡೆದ ಮ್ಯೂಸಿಕ್ ಯೋಗ ಫೆಸ್ಟಿವಲ್ ೨೦೧೮ರ ಸರ್ಫಿಂಗ್‌ನ ಮಹಿಳಾ ವಿಭಾಗದಲ್ಲಿ(೧೬ನೇ ಕೊವಲಿಂಗ್ ಪಾಯಿಂಟ್) ಸತತ ಐದನೇ ಬಾರಿ ಪ್ರಥಮ ಸ್ಥಾನ ಗಳಿಸಿರು ಸಾಧನೆಯನ್ನು ಮಾಡಿದ್ದರು. ಇವರು ನೆಹರುನಗರ ಕಲ್ಲೇಗ ಶಿವಲೀಲಾ ನಿವಾಸಿ ದೇರಪ್ಪ ಗೌಡ ಕಲ್ಲೇಗ ಮತ್ತು ಮೀನಾಕ್ಷಿ ಗೌಡರವರ ಪುತ್ರಿ ಎಂದು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೀಲ್ ವೈಯಕ್ತಿಕ ಚಾಂಪಿಯನ್..
ನೀಲ್ ಮಸ್ಕರೇನ್ಹಸ್‌ರವರು ಈ ಈಜು ಸ್ಪರ್ಧೆಯಲ್ಲಿ ಹೆಚ್ಚು ೧೫ ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕವನ್ನು ಗಳಿಸುವ ಮೂಲಕ ಕೂಟದಲ್ಲಿ ವೈಯಕ್ತಿಕ ಚಾಂಪಿಯನ್ ಎನಿಸಿಕೊಂಡಿದ್ದಾರೆ. ಮೈಸೂರಿನ ಚಾಮುಂಡಿ ವಿಹಾರ್ ಸ್ಟೇಡಿಯಂನ ಈಜುಕೊಳದಲ್ಲಿ ಜರಗಿದ ರಾಜ್ಯ ಮಟ್ಟದ ದಸರಾ ಈಜು ಸ್ಪರ್ಧೆಯಲ್ಲಿ ನೀಲ್ ಮಸ್ಕರೇನ್ಹಸ್‌ರವರು ೨ ಬೆಳ್ಳಿ ಹಾಗೂ ೧ ಕಂಚಿನ ಪದಕವನ್ನು ಗಳಿಸಿಕೊಂಡಿದ್ದರು. ಉಡುಪಿ ಅಜ್ಜರಕಾಡು ಈಜುಕೊಳದಲ್ಲಿ ನಡೆದ ಮೈಸೂರು ವಿಭಾಗೀಯ ಮಟ್ಟದ ದಸರಾ ಈಜು ಸ್ಪರ್ಧೆಯಲ್ಲೂ ಭಾಗವಹಿಸಿದ ನೀಲ್ ಮಸ್ಕರೇನ್ಹಸ್‌ರವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ನೀಲ್‌ರವರು ಸಾಮೆತ್ತಡ್ಕ ನಿವಾಸಿ ಹಾಗೂ ಸಂತ ಫಿಲೋಮಿನಾ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿರುವ ಡಾ|ನೋರ್ಬರ್ಟ್ ಮಸ್ಕರೇನ್ಹಸ್ ಹಾಗೂ ಮುಕ್ರಂಪಾಡಿ ಮಹಿಳಾ ಸರಕಾರಿ ಪಿಯು ಕಾಲೇಜಿನ ಪ್ರಾಂಶುಪಾಲೆ ಪ್ರಮೀಳಾ ಕ್ರಾಸ್ತಾರವರ ಪುತ್ರ.

ಕ್ಯಾರಪ್ ಮೊರಾಸ್

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.