ನೆಕ್ಕಿಲಾಡಿ: ಪೈಪ್ ಲೈನ್ ಕಾಮಗಾರಿ, ರಸ್ತೆ ಅಗೆತ!!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • 50ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಡಿತ, ಸಂಕಷ್ಟದಲ್ಲಿ ಗ್ರಾಮಸ್ಥರು..!!!
  • ಆರೋಗ್ಯ ಸಮಸ್ಯೆ ಎದುರಾದರೆ ಎತ್ತಿಕೊಂಡೇ ಹೋಗಬೇಕು
  •  ಸಮಸ್ಯೆ ಬಗೆಹರಿಸದಿದ್ದಲ್ಲಿ ಪಂಚಾಯಿತಿ ಎದುರು ಪ್ರತಿಭಟನೆಯ ಎಚ್ಚರಿಕೆ

 

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ 34-ನೆಕ್ಕಿಲಾಡಿ ಗ್ರಾಮದ ಬೋಳಂತಿಲ ಯುನಿಕ್ ಇಂಡಸ್ಟ್ರೀಸ್ ಬಳಿಯಿಂದ ಪುತ್ತೂರುಗೆ ನೀರು ಸರಬರಾಜು ಆಗುವ ಪಂಪು ಹೌಸ್‌ಗೆ ಹೋಗುವ ರಸ್ತೆಯನ್ನು ಕಾಮಗಾರಿ ಸಲುವಾಗಿ ಅಗೆದು ಹಾಕಲಾಗಿದ್ದು, ಗ್ರಾಮಸ್ಥರು ತೀರಾ ಸಂಕಷ್ಟ ಎದುರಿಸುವಂತಾಗಿದ್ದು, ಸಾರ್ವಜನಿಕ ಹಿತದೃಷ್ಠಿಯಿಂದ ಶೀಘ್ರವಾಗಿ ರಸ್ತೆಗೆ ಹಾಕಲಾಗಿರುವ ಮಣ್ಣು ತೆರವು ಮಾಡಿ ರಸ್ತೆಯನ್ನು ಸಂಚಾರಕ್ಕೆ ಮುಕ್ತ ಮಾಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.


ನೆಕ್ಕಿಲಾಡಿ ಗ್ರಾಮದ ಬೋಳಂತಿಲ ಯುನಿಕ್ ಇಂಡಸ್ಟ್ರೀಸ್ ಬಳಿಯಿಂದ ಪಂಪು ಹೌಸ್‌ಗೆ ಹೋಗುವ ರಸ್ತೆಯಲ್ಲಿ ಪಂಪು ಹೌಸ್‌ಗೆ ಸಂಬಂಧಿಸಿದಂತೆ ಪುತ್ತೂರುಗೆ ನೀರು ಸರಬರಾಜು ಸಲುವಾಗಿ ಪೈಪ್ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ಪೈಪ್ ಹಾಕುವ ಸಲುವಾಗಿ ಅಗೆಯುವ ಮಣ್ಣು ರಸ್ತೆಗೆ ಹಾಕುವ ಮೂಲಕ ರಸ್ತೆ ಸಂಪರ್ಕವನ್ನೇ ಕಡಿತಗೊಳಿಸಲಾಗಿದ್ದು, ಇದರಿಂದಾಗಿ ವಾಹನ ಓಡಾಟಕ್ಕೆ ಸಮಸ್ಯೆ ಉಂಟಾಗಿರುವುದಾಗಿ ಗ್ರಾಮಸ್ಥರು ದೂರಿಕೊಂಡಿದ್ದಾರೆ.

ಪೈಪ್ ಹಾಕಲು ರಸ್ತೆ ಬದಿಯಲ್ಲಿ ಅಗೆಯುತ್ತಿದ್ದು, ಇದರ ಮಣ್ಣು ರಸ್ತೆಯ ಬದಿಗೆ ಹಾಕಲು ಅವಕಾಶ ಇದ್ದರೂ ಕಾಮಗಾರಿ ನಿರ್ವಹಿಸುವವರು ಮಣ್ಣು ರಸ್ತೆಯ ಮೇಲೆಯೇ ಹಾಕುವುದರಿಂದಾಗಿ ಸಮಸ್ಯೆ ಎದುರಾಗಿದ್ದು, ಈ ಬಗ್ಗೆ ಅಲ್ಲಿ ಕೆಲಸ ನಿರ್ವಹಿಸುವವರ ಗಮನಕ್ಕೆ ಮತ್ತು ಪಂಚಾಯಿತಿ ಗಮನಕ್ಕೆ ತಂದರೂ ಬೇಜವಾಬ್ದಾರಿಯಿಂದ ಮಾತನಾಡಿ ಸಾರ್ವಜನಿಕರ ಕೋರಿಕೆಯನ್ನು ತೀರಾ ನಿರ್ಲಕ್ಷಿಸುವ ಮೂಲಕ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತಿದ್ದಾರೆ ಎಂದು ಗ್ರಾಮಸ್ಥರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಆರೋಗ್ಯ ಸಮಸ್ಯೆ ಎದುರಾದರೆ ಎತ್ತಿಕೊಂಡೇ ಹೋಗಬೇಕು:
ಈ ಪ್ರದೇಶದಲ್ಲಿ ೨ ವಸತಿ ಸಮುಚ್ಚಯ ಸೇರಿದಂತೆ ೫೦ಕ್ಕೂ ಅಧಿಕ ಮನೆಗಳು ಇದ್ದು, ಈ ಮನೆಗಳಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆ ಉಂಟಾದರೆ ಅಂತಹವರನ್ನು ಎತ್ತಿಕೊಂಡೇ ಹೋಗಬೇಕಾದ ಪರಿಸ್ಥಿತಿ ಎದುರಾಗಿದ್ದು, ಗ್ರಾಮ ಪಂಚಾಯಿತಿ ಮತ್ತು ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರ ವರ್ತನೆ ತೀರಾ ಅಮಾನವೀಯವಾಗಿದೆ ಎಂಬ ಗಂಬೀರ ಆರೋಪ ವ್ಯಕ್ತವಾಗಿದ್ದು, ರಸ್ತೆಗೆ ಹಾಕಲಾದ ಮಣ್ಣು ತೆರವು ಮಾಡಿ ರಸ್ತೆಯನ್ನು ಸಂಚಾರ ಮುಕ್ತ ಮಾಡದೇ ಇದ್ದಲ್ಲಿ ಗ್ರಾಮ ಪಂಚಾಯಿತಿ ಎದುರಿನಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್‍ಯವಾದೀತು ಎಂದು ಸ್ಥಳೀಯ ಗ್ರಾಮಸ್ಥರು ತಿಳಿಸಿದ್ದಾರೆ.

ಪಂಚಾಯಿತಿ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ-ಯುನಿಕ್
ಪುತ್ತೂರುಗೆ ನೀರು ಸರಬರಾಜು ಸಲುವಾಗಿ ನಡೆಯುವ ಕಾಮಗಾರಿ ಇದಾಗಿದ್ದು, ತೀರಾ ನಿರ್ಲಕ್ಷತನದಿಂದಾಗಿ ಇಲ್ಲಿ ಸಮಸ್ಯೆ ಉಂಟಾಗಿದೆ. ಕಾಮಗಾರಿಗೆ ನಮ್ಮ ವಿರೋಧ ಇಲ್ಲ, ಆದರೆ ಅಗೆದ ಮಣ್ಣು ಇನ್ನೊಂದು ಬದಿಯಲ್ಲಿ ಹಾಕಿದರೆ ಅಥವಾ ಒಂದೊಂದೇ ಪೈಪ್ ಹಾಕಿದಂತೆಯೇ ಮಣ್ಣು ಹಾಕಿ ವಾಹನ ಸಂಚಾರಕ್ಕೆ ಬೇಕಾದಷ್ಟು ರಸ್ತೆಯನ್ನು ಬಿಟ್ಟಿದ್ದರೆ
ಇಲ್ಲಿ ಸಮಸ್ಯೆ ಇರುತ್ತಿರಲಿಲ್ಲ. ಈ ವಿಚಾರವನ್ನು ಕೆಲಸ ನಿರ್ವಹಿಸುವವರೊಂದಿಗೆ ಮತ್ತು ಗ್ರಾಮ ಪಂಚಾಯಿತಿ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ, ತಕ್ಷಣ ಸಮಸ್ಯೆ ಬಗೆಹರಿಸದಿದ್ದಲ್ಲಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಗ್ರಾಮಸ್ಥರನ್ನು ಒಟ್ಟುಗೂಡಿಸಿ ಪ್ರತಿಭಟನೆ ನಡೆಲಾಗುವುದು – ಅಬ್ದುಲ್ ರಹಿಮಾನ್ ಯುನಿಕ್ ಕಾರ್‍ಯದರ್ಶಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್.

ತೆರವು ಮಾಡಿ ಕೊಡುವ ಬಗ್ಗೆ ತಿಳಿಸಿದ್ದಾರೆ-ಕುಮಾರಯ್ಯ
ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಸ್ತೆಯನ್ನು ತೆರವು ಮಾಡಿಕೊಡುವಂತೆ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಸರಿಪಡಿಸಿಕೊಡುವುದಾಗಿ ತಿಳಿಸಿದ್ದಾರೆ. ಸಮಸ್ಯೆಯನ್ನು ಶೀಘ್ರ ಬಗೆಹರಿಸಲಾಗುವುದು – ಕುಮಾರಯ್ಯ, 34-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.