ಯುವ ನಾಯಕ ಸಚ್ಚಿದಾನಂದ ಶೆಟ್ಟಿ ಮುನ್ನಾಲಾಯಿಗುತ್ತುರವರಿಗೆ ಮೀರಾ ಬಾಯಂದರ್ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪಟ್ಟ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಈ ಸ್ಥಾನ ಸುಮ್ಮನೆ ಅವರಿಗೆ ದಕ್ಕಿದ್ದಲ್ಲ. ಕರುನಾಡಿಗೆ ಹೆಮ್ಮೆಯ ದಿನವಿಂದು. ಇವತ್ತು ತಾಯಿ ಭುವನೇಶ್ವರಿಯ ಕಂಗಳಲ್ಲಿ ಆನಂದಭಾಷ್ಪವಿತ್ತು. ಮಗನೊಬ್ಬ ಹೊರನಾಡಿನಲ್ಲಿ ಸಾಧಿಸಿದ ಸಾಧನೆಗೆ ಪಡೆದುಕೊಂಡ ಸನ್ಮಾನಕ್ಕೆ ಅವಳ ಮೊಗದಲ್ಲಿ ಸಂಭ್ರಮವಿತ್ತು. ಸಡಗರವಿತ್ತು.


ಅತ್ಯಂತ ಚಿಕ್ಕ ಪ್ರಾಯದಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಭಾವಕ್ಕೆ ಒಳಗಾದ ಹುಡುಗನೊಬ್ಬ ಇವತ್ತಿಗೂ ಅದೇ ಸಿದ್ದಾಂತವನ್ನು ಮೈಗೂಡಿಸಿಕೊಂಡು ಬೆಳೆದು ನಿಂತ ಪರಿ ಇದೆಯಲ್ಲ ನಿಜಕ್ಕೂ ಚೇತೋಹಾರಿ. ಅಧಿಕಾರದ ಬೆನ್ನು ಬಿದ್ದು ಅದು ಬೇಕೆಬೇಕು ಅನ್ನುತ್ತ ಹಪಹಪಿಸಿದ ಮನಸ್ಸು ಆತನದಲ್ಲ.ಬರುವಾಗ ಎಲ್ಲವೂ ಬರುತ್ತದೆ ಗಡಿಬಿಡಿ ಯಾಕೆ ಅನ್ನುವ ಮನೋಭಾವನೆ. ಸದಾ ಸಮಾಜಮುಖಿ ಚಿಂತನೆ.ಜಾತಿಯ ಸೀಮೆಯನ್ನು ಮೀರಿ ಬೆಳೆದ ಪ್ರಭುದ್ಧತೆ. ಒಳ್ಳೆಯತನ ಎಲ್ಲೆ ಇದ್ದರೂ ಒಳ್ಳೆಯ ಹೋರಾಟಗಳು ಯಾವ ಭಾಗದಲ್ಲೂ ನಡೆದರೂ ಮುಂದೆ ನಿಲ್ಲುವ ನಿರ್ಭಿಡ ವ್ಯಕ್ತಿತ್ವದವರು.ಅನುಕೂಲ ಮತ್ತು ಅವಕಾಶ ಸಾವಿರ ಬಂದರೂ, ಆದರ್ಶ ಬಲಿಕೊಡದ ಸಂಸ್ಕಾರವಂತ. ಯಾರದೋ ನಾಯಕರ ಹೊಗಳುಭಟನಂತೆ ನಡೆದುಕೊಂಡಿದ್ದರೆ ಇಷ್ಟೊತ್ತಿಗೆ ನಗರ ಸೇವಕರೋ ಶಾಸಕರೋ ಆಗಿರುತ್ತಿದ್ದರು ನಮ್ಮ ಸಚ್ಚಣ್ಣ. ಆದರೆ ಅದ್ಯಾವುದನ್ನೂ ಮಾಡದೆಯೇ ಯೋಗ್ಯತೆ ಒಂದನ್ನೇ ಮಾನದಂಡವನ್ನಾಗಿ ಬಳಸಿಕೊಂಡು ಇಲ್ಲಿಯ ತನಕ ನಡೆದು ಬಂದರು.ಅದರಲ್ಲಿ ಯಶಸ್ಸನ್ನು ಸಹ ಕಂಡರು. ರಾಜ್ಯ ಮತ್ತು ರಾಷ್ಟ್ರದ ಪ್ರಮುಖ ನಾಯಕರುಗಳ ಜೊತೆಗೆ ಇವರದ್ದು ಅವಿನಾಭಾವ ಸಂಬಂಧ. ಎಲ್ಲವುಕಿಂತ ಮಿಗಿಲಾಗಿ ಅವರೊಳಗೊಬ್ಬ ಉತ್ತಮ ಆತ್ಮೀಯನಿದ್ದಾನೆ. ಹೌದು ನಮಗೆಲ್ಲರಿಗೂ ಅವರು ಆತ್ಮೀಯರೇ.

ಮಹಾರಾಷ್ಟ್ರ ರಾಜಕಾರಣದ ಪಡಸಾಲೆಯಲ್ಲಿ ಗಟ್ಟಿ ಹೆಜ್ಜೆಯಿಟ್ಟು ಬರುತ್ತಿದ್ದಿರಿ ಸಚ್ಚಣ್ಣ ನೀವು. ಹಣ ಗಳಿಸುವುದು,ಅಂತಸ್ತನ್ನು ಸಂಪಾದಿಸುವುದು,ಬಂಗ್ಲೆ ಕಾರುಗಳನ್ನು ಖರೀದಿಸುವುದು ವಿಶೇಷವಲ್ಲ. ಆದರೆ ಜನರ ಪ್ರೀತಿಯನ್ನು ಗಳಿಸುವುದು ಅದರಲ್ಲೂ ಅನ್ಯ ರಾಜ್ಯದಲ್ಲಿ ಇಲ್ಲಿನವರ ಅಭಿಮಾನಕ್ಕೆ ಪಾತ್ರ ರಾಗುವುದಿದೆಯಲ್ಲ ಅದು ಸರ್ವ ಶ್ರೇಷ್ಠ. ಮಾನವೀಯತೆ ಮತ್ತು ಪ್ರಾಮಾಣಿಕತೆ ನಿಮ್ಮ ಮೂಲ ಗುಣಗಳು.ರಾಜಕಾರಣದಲ್ಲಿಯೂ ಅದನ್ನು ಮುಂದುವರಿಸುತ್ತಿರಿ ಆ ಭರವಸೆ ನಮಗೆಲ್ಲರಿಗೂ ಇದೆ. ಗೆಳೆಯರೊಬ್ಬರು ಉನ್ನತ ಸ್ಥಾನಮಾನಕ್ಕೆ ಭಾಜನರಾದಾಗ ಹೃದಯ ತುಂಬಿ ಬರುತ್ತದೆ ಸ್ನೇಹಿತರೇ. ನಿಮ್ಮೆಲ್ಲರ ಪ್ರೀತಿ ಸಹಕಾರ ಎಂದೆಂದೂ ಈ ಸಜ್ಜನನ ಮೇಲಿರಲಿ.ಮರಾಠಿ ಮಣ್ಣಿನ ರಾಜಕಾರಣದಲ್ಲಿ ಕನ್ನಡಿಗನೊಬ್ಬ ಬಹು ಎತ್ತರಕ್ಕೆ ಬೆಳೆಯಲಿ. ಹಾಗಾಗಲಿ.

                                                                                                                                                                                                                                 ಉದಯ್ ಕುಂದಾಪುರ ಮುಂಬೈ
                                                                                                                                                                                                                  

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.