ಕಬಕ-ಪದ್ನಡ್ಕ ರಸ್ತೆ ದುರಸ್ಥಿ, ನ್ಯಾಯಾಲಯಕ್ಕೆ ಹಾಜರಾಗದ ಪಿಡಿಓ ಆರೋಪ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಪದ್ನಡ್ಕ ಪ.ಜಾತಿ ಕಾಲನಿ ನಿವಾಸಿಗಳಿಂದ ಪಂ.ಕಚೇರಿ ಮುಂಭಾದಲ್ಲಿ ಪ್ರತಿಭಟನೆ
  • ತಾ.ಪಂ ಇಒ ಭೇಟಿ- ಸಮಸ್ಯೆಗಳ ಕುರಿತು ಮನವೊಲಿಕೆ -ಪ್ರತಿಭಟನೆ ಹಿಂದಕ್ಕೆ

 

ಪುತ್ತೂರು:ಕಬಕ ಪಂಚಾಯತ್ ವ್ಯಾಪ್ತಿಯ ಪದ್ನಡ್ಕ ಪರಿಶಿಷ್ಟ ಜಾತಿ ಕಾಲೋನಿಗಳ ನಿವಾಸಿಗಳಿಗೆ ಮೂಲಭೂತ ವ್ಯವಸ್ಥೆಗಳಾದ ರಸ್ತೆ, ಶುದ್ಧ ಕುಡಿಯುವ ನೀರು ಪೂರೈಕೆಯಾಗದೇ ಇರುವುದು ಹಾಗೂ ರಸ್ತೆ ಸಮಸ್ಯೆ ಕುರಿತು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದ ಪಿಡಿಓ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಪದ್ನಡ್ಕ ಪರಿಶಿಷ್ಟ ಜಾತಿ ಕಾಲನಿ ನಿವಾಸಿಗಳು ನ.29ರಂದು ಕಬಕ ಗ್ರಾ.ಪಂ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.


ಪದ್ನಡ್ಕ ಪರಿಶಿಷ್ಟ ಜಾತಿ ಕಾಲನಿ ಸಂಪರ್ಕ ರಸ್ತೆಗೆ ತನ್ನ ಕುಮ್ಕಿ ಜಾಗ ಎಂದು ಹೇಳಿ ಖಾಸಗಿ ವ್ಯಕ್ತಿಯೊಬ್ಬರು ಕಬಕ ಗ್ರಾ.ಪಂ ವಿರುದ್ಧ ದಾವು ಹೋಡಿದ್ದಾರೆ. ಇದರ ವಿರುದ್ಧ ಪಂಚಾಯತ್‌ನ ಪಿಡಿಓರವರು ನ್ಯಾಯಾಲಯಕ್ಕೆ ಹಾಜರಾಗಿರುವುದಿಲ್ಲ. ವಿಚಾರಣೆಯ ಹಂತದಲ್ಲಿ ಒಟ್ಟು 29  ವಾಯಿದೆಗಳಲ್ಲಿ 22 ಬಾರಿ  ಪಿಡಿಓರವರು ಗೈರು ಹಾಜರಾಗಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಕಾರರು ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ನ್ಯಾಯ ಒದಗಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರು ಸ್ಥಳಕ್ಕೆ ಆಗಮಿಸಿ, ಸದರಿ ಸಮಸ್ಯೆಗಳ ಕುರಿತು ಪಂಚಾಯತ್ ಹಾಗೂ ಪ್ರತಿಭಟನಕಾರರಿಂದ ಮಾಹಿತಿ ಪಡೆದುಕೊಂಡರು. ಪದ್ನಡ್ಕ ರಸ್ತೆಗೆ ಸಂಬಂಧಿಸಿ ಪ್ರಕರಣವು ನ್ಯಾಯಾಲಯದಲ್ಲಿರುವುದರಿಂದ ಅಭಿವೃದ್ಧಿ ನಡೆಸುವುದು ಅಸಾಧ್ಯವಾಗಿದೆ. ಈ ಪಂಚಾಯತ್‌ನ ವಕೀಲರನ್ನು ಬದಲಾಯಿಸಲಾಗಿದ್ದು ಶೀಘ್ರದಲ್ಲೇ ಪ್ರಕರಣ ಇತ್ಯರ್ಥಗೊಳ್ಳಲಿದೆ. ಬಳಿಕ ಕೂಡಲೇ ರಸ್ತೆ ಅಭಿವೃದ್ಧಿ ಪಡಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ಅಧ್ಯಕ್ಷ ವಿನಯ ಕುಮಾರ್ ಕಲ್ಲೇಗ ಹಾಗೂ ಪಿಡಿಓ ಆಶಾರವರು ರಸ್ತೆ ಅಭಿವೃದ್ಧಿಗೆ ಸಂಬಂಧಿಸಿ ಪ್ರಸ್ತುತ ಸಮಸ್ಯೆಗಳ ಕುರಿತು ಪ್ರತಿಭಟನಕಾರರಿಗೆ ಮನವರಿಕೆ ಮಾಡಿದರು. ಸದರಿ ರಸ್ತೆಗೆ ಶಾಸಕರು ಈಗಾಗಲೇ ಅನುದಾನ ನೀಡಿದ್ದು ರಸ್ತೆಯ ಬಹುತೇಕ ಭಾಗ ಕಾಂಕ್ರೀಟಕರಣಗೊಂಡಿದೆ. ಗಣಿ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿದ್ದರೂ ಕೋವಿಡ್‌ನಿಂದಾಗಿ ಬಾಕಿಯುಳಿದಿದೆ. ಈಗ ಮತ್ತೆ ಅನುದಾನ ಬಿಡುಗಡೆ ಮಾಡಿದ್ದು ಬಾಕಿ ಉಳಿದಿರುವ ರಸ್ತೆ ಕಾಂಕ್ರೀಟಕರಣ ನಡೆಯಲಿದೆ ಎಂದರು ಬಿಜೆಪಿ ಗ್ರಾಮಾಂತರ ಮಂಡಲದ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ತಿಳಿಸಿದರು. ಈ ಎಲ್ಲಾ ಭರವಸೆಗಳ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು. ಕಬಕ ಗ್ರಾ.ಪಂ ಉಪಾಧ್ಯಕ್ಷ ರುಕ್ಮಯ್ಯ ಗೌಡ ಪೋಳ್ಯ, ಸದಸ್ಯೆ ಗೀತಾ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಜಯರಾಮ ನೆಕ್ಕರೆ ಉಪಸ್ಥಿತರಿದ್ದರು.


ನ್ಯಾಯ ದೊರಕದಿದ್ದರೆ ತಾಲೂಕು ಮಟ್ಟದಲ್ಲಿ ಹೋರಾಟ-ಜಯರಾಮ ಪದ್ನಡ್ಕ:
ಕಬಕ-ಪದ್ನಡ್ಕ ರಸ್ತೆ ಸಂಬಂಧಿಸಿ ಪಂಚಾಯತ್ ವಿರುದ್ಧ ಖಾಸಗಿ ವ್ಯಕ್ತಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ಅದರಲ್ಲಿ ಜಯ ದೊರೆತಿಲ್ಲ. ಪ್ರಕರಣದ ಬಗ್ಗೆ ವಕೀಲ ಮೂಲಕ ದಾಖಲೆ ಸಂಗ್ರಹಿಸಿದ್ದು ಒಟ್ಟು ೨೯ ವಾಯಿದೆಗಳ ಪೈಕಿ ಪಿಡಿಓರವರು ೨೨ ವಾಯಿದೆಗಳಿಗೆ ಗೈರು ಹಾಜರಾಗಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ತಾ.ಪಂ., ಜಿ.ಪಂ ಹಾಗೂ ಬೆಂಗಳೂರಿಗೂ ಮನವಿ ಮಾಡಿ ಒಂದು ತಿಂಗಳು ಕಳೆದರೂ ಯಾವುದೇ ಸ್ಪಂಧನೆ ದೊರೆತಿಲ್ಲ. ಹೀಗಾಗಿ ಗ್ರಾಮಸ್ಥರು ಸೇರಿ ಪ್ರತಿಭಟನೆ ನಡೆಸಿದ್ದೇವೆ. ತಾ.ಪಂ ಕಾರ್ಯನಿರ್ವಹಣಾಧಿಕಾರಗಳು ಪ್ರತಿಭಟನೆಗೆ ಆಗಮಿಸಿ ಶೀಘ್ರವಾಗಿ ಪರಿಹರಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ನ್ಯಾಯಾಲಯದಲ್ಲಿರುವ ಕಾರಣ ರಸ್ತೆ ಅಭಿವೃದ್ಧಿ ಅಸಾಧ್ಯವಾಗಿದೆ ಎಂಬುದನ್ನು ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಪ್ರತಿಭಟನೆ ಹಿಂತೆಗೆದು ಕೊಂಡಿದ್ದೇವೆ. ಪಂಚಾಯತ್ ಕಚೇರಿ ಬಳಿಯಲ್ಲಿಯೇ ಇರುವ ಪದ್ನಡ್ಕದಲ್ಲಿ ಕೊಳಚೆ ನೀರು ಚರಂಡಿಯಲ್ಲಿ ಹಾದುಹೋಗುತ್ತಿದ್ದು ರೋಗ ರುಜಿನಗಳಿಗೆ ದುತ್ತಾಗುವ ಪರಿಸ್ಥಿತಿ ಬಂದಿದೆ. ಈಗ ಬಾಟಲಿ ನೀರು ಕುಡಿಯುವಂತಾಗಿದೆ. ಕಚೇರಿಯ ಬಳಿಯಲ್ಲೇ ಇದ್ದರೂ ಗಮನ ಹರಿಸುತ್ತಿಲ್ಲ. ಈಗ ನ್ಯಾಯವಾದಿಯರನ್ನು ಬದಲಾಯಿಸಿದ್ದು ಮುಂದಿನ ಎರಡು ಮೂರು ತಿಂಗಳುಗಳ ಕಾಲ ಕಾಲಾವಕಾಶ ನೀಡುತ್ತೇವೆ. ಆ ಬಳಿಕವು ನ್ಯಾಯ ದೊರೆಯದಿದ್ದರೆ ತಾಲೂಕು ಮಟ್ಟದಲ್ಲಿ ಹೋರಾಟ ಎಂದು ಜಯರಾಂ ಪದ್ನಡ್ಕ ಎಚ್ಚರಿಸಿದ್ದಾರೆ.


ಶೇ.೧೦೦ ಪದ್ನಡ್ಕ ರಸ್ತೆ ದುರಸ್ಥಿ-ವಿನಯ ಕುಮಾರ್ ಕಲ್ಲೇಗ
ಕಬಕ ಪಂಚಾಯತ್ ವ್ಯಾಪ್ತಿಯ ಕಬಕದಿಂದ ಪದ್ನಡ್ಕ ಹೋಗುವ ಪ.ಜಾತಿ. ಪ.ಪಂಗಡದ ರಸ್ತೆಯ ೧೫ ವರ್ಷದಿಂದ ಇದೇ ವಿಚಾರದಲ್ಲಿ ಹೋರಾಟ ನಡೆಯುತ್ತಿದೆ. ಈ ಹಿಂದೆ ಕೆ.ಪಿ ಜೇಮ್ಸ್‌ರವರನ್ನು ನ್ಯಾಯವಾದಿಗಳನ್ನು ನೇಮಿಸಿಕೊಂಡು ನ್ಯಾಯಾಲಯದಲ್ಲಿ ಹೋರಾಟ ನಡೆಯುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಜೇಮ್ಸ್‌ರವರ ಅನಾರೋಗ್ಯದ ಕಾರಣದಿಂದ ತನ್ನಿಂದ ಸಾಧ್ಯವಿಲ್ಲ ಎಂದು ಲಿಖಿತವಾಗಿ ತಿಳಿಸಿದ್ದು ಬೇರೊಬ್ಬ ನ್ಯಾಯವಾದಿಗಳನ್ನು ನೇಮಿಸಿಲಾಗಿದೆ. ಶೀಘ್ರದಲ್ಲಿ ಪ್ರಕರಣ ಇತ್ಯರ್ಥಗೊಳಿಸುವಂತೆ ವಕೀಲರಲ್ಲಿ ತಿಳಿಸಲಾಗಿದೆ. ಪದ್ನಡ್ಕ ನಿವಾಸಗಳು ನ್ಯಾಯ ಒದಗಿಸುವಂತೆ ನಮ್ಮ ಬೇಡಿಕೆಯಿಟ್ಟಿದ್ದಾರೆ. ಪಂಚಾಯತ್ ಸದಾ ಜನರ ಪರವಾಗಿದೆ. ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿರುವ ಪ್ರಕರಣವು ಶೀಘ್ರ ಇತ್ಯರ್ಥಗೊಂಡು ರಸ್ತೆ ಶೇ.೧೦೦ಪೂರ್ಣಗೊಳಿಸುವ ನನ್ನ ಕನಸು. ಪಂಚಾಯತ್ ಸದಾ ಜನರ ಪರವಾಗಿದೆ ಎಂದು ಗ್ರಾ.ಪಂ ಅಧ್ಯಕ್ಷ ವಿನಯ ಕುಮಾರ್ ಕಲ್ಲೇಗ ತಿಳಿಸಿದ್ದಾರೆ.

ನೋಟಿಸ್ ಬಂದಿಲ್ಲ, ಹೀಗಾಗಿ ವಿಚಾರಣೆ ಹಾಜರಾಗಿಲ್ಲ-ಆಶಾ
ಕಬಕ-ಪದ್ನಡ್ಕ ರಸ್ತೆಗೆ ಸಂಬಂಧಿಸಿದಂತೆ ೨೦೧೦ರಲ್ಲಿ ಪುತ್ತೂರು ಸಿವಿಲ್ ನ್ಯಾಯಾಲಯದಲ್ಲಿ ನಿವಾಸಿ ಗಿರಿಯಪ್ಪ ಗೌಡ ಹಾಗೂ ಪಂಚಾಯತ್‌ನ ಮಧ್ಯೆ ಪ್ರಕರಣ ದಾಖಲಾಗಿದೆ. ಸ್ಥಳೀಯ ಸುಮಾರು ೧೧ ವರ್ಷಗಳಿಂದ ಈ ಪ್ರಕರಣವು ವಿಚಾರಣೆ ನಡೆಯುತ್ತಿದೆ. ಈ ಹಿಂದೆ ಕೆಪಿ ಜೇಮ್ಸ್‌ರವರನ್ನು ಪಂಚಾಯತ್‌ನ ವಕೀಲರನ್ನಾಗಿ ನೇಮಿಸಲಾಗಿತ್ತು. ಈಗ ಅವರಿಗೆ ಅನಾರೋಗ್ಯದ ಹಿನ್ನೆಯಲ್ಲಿ ಬದಲೀ ವಕೀಲರನ್ನು ನೇಮಕ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂದಿಸಿದಂತೆ ವಿಚಾರಣೆಗೆ ಹಾಜರಾಗಲು ನನಗೆ ಯಾವುದೇ ನೋಟೀಸ್ ಬಂದಿರುವುದಿಲ್ಲ. ಹೀಗಾಗಿ ನಾನು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ವಿಚಾರಣೆಗೆ ಹಾಜರಾಗಲು ಮುಂದಿನ ದಿನಗಳಲ್ಲಿ ನೋಟೀಸ್ ಬಂದಲ್ಲಿ ಖಂಡಿತಾ ಹಾಜರಾಗುತ್ತೇನೆ ಎಂದು ಗ್ರಾ.ಪಂ ಪಿಡಿಓ ಆಶಾ ಇ. ಸ್ಪಷ್ಟಪಡಿಸಿದ್ದಾರೆ.

ಪದ್ನಡ್ಕ ನಿವಾಸಿಗಳಾದ ರೋಹಿಣಿ, ತುಕ್ರು, ಕಮಲ, ಬಾಗಿ, ಜಾನಿಕ, ರಾಜೇಶ್, ಮಾಂಕು, ಮೋಹಿನಿ, ನಾರಾಯಣ, ಚಂದ್ರ, ಯೋಗೀಶ, ಕಾಂತಪ್ಪ, ಬಾಬು, ಪೂವಪ್ಪ, ತಿಮ್ಮಪ್ಪ, ಜಯರಾಮ, ರಮೇಶ ಹಾಗೂ ಮೋನಪ್ಪ ಮೊದಲಾದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.