ಕೆ.ಎಸ್.ಆರ್.ಟಿ.ಸಿ ಚಾಲಕ ಎಂ.ಗೋಪಾಲ ಗೌಡ ಮುಳಿಯ ನ.30ರಂದು ಸೇವಾ ನಿವೃತ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಕೆ.ಎಸ್.ಆರ್.ಟಿ.ಸಿ. ಪುತ್ತೂರು ವಿಭಾಗದಲ್ಲಿ ಚಾಲಕರಾಗಿರುವ ಚಾಲನಾ ವೃತ್ತಿಯಲ್ಲಿ ವಿವಿಧ ಪ್ರಶಸ್ತಿ, ಪುರಸ್ಕಾರಗಳನ್ನು ಗಳಿಸಿಕೊಂಡಿರುವ ಕಡಬ ತಾ| ಕೋಡಿಂಬಾಳ ಗ್ರಾಮದ ಮುಳಿಯ ನಿವಾಸಿ ಎಂ. ಗೋಪಾಲ ಗೌಡ ಅವರು ಸುಧೀರ್ಘ 30 ವರ್ಷಗಳ ಕಾಲ ಚಾಲಕರಾಗಿ ಕರ್ತವ್ಯ ನಿರ್ವಹಿಸಿ ನ.30ರಂದು ಸೇವಾ ನಿವೃತ್ತಿ ಹೊಂದುತ್ತಿದ್ದಾರೆ.


1992ರ ನವೆಂಬರ್ 19ನೇ ತಾರೀಕಿನಂದು ಕೆ.ಎಸ್.ಆರ್.ಟಿ.ಸಿ. ಮಂಗಳೂರು ವಿಭಾಗದ ಪುತ್ತೂರು ಘಟಕದಲ್ಲಿ ಚಾಲಕ ಹುದ್ದೆಗೆ ಸೇರಿದರು. ಕೆಲಸದ ಪ್ರಾರಂಭದಿಂದಲೇ ತುಂಬಾ ಜಾಗರೂಕತೆಯಿಂದ ಜಾಣ್ಮೆಯಿಂದ ಬಸ್ಸು ಚಾಲನೆ ಮಾಡಿ ಪ್ರಯಾಣಿಕರ ಮತ್ತು ಸಹೋದ್ಯೋಗಿಗಳ ಹಾಗೂ ಅಧಿಕಾರಿಗಳ ಮೆಚ್ಚುಗೆ ಪಾತ್ರರಾಗಿದ್ದರು. ಇವರ ಸೇವಾ ದಕ್ಷತೆಯನ್ನು ಗುರುತಿಸಿ 2000ನೇ ಇಸವಿಯಲ್ಲಿ ಸಂಸ್ಥೆಯ ವತಿಯಿಂದ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರು ಬೆಳ್ಳಿ ಪದಕ ಹಾಗೂ ನಗದು ಮತ್ತು ಐ.ಓ.ಸಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಕ್ರಿಯಾಶೀಲಾ ಮತ್ತು ಸೌಜನ್ಯತೆಯ ಮಾತುಗಾರಿಕೆಯನ್ನು ಎಳವೆಯಿಂದಲೇ ರೂಢಿಸಿಕೊಂಡ ಇವರು ಹಂತ ಹಂತವಾಗಿ ವೃತ್ತಿಯಲ್ಲಿ ಮೇಲುಸ್ತರಕ್ಕೆ ಏರಿದ್ದು, 19-1-2016ರಂದು 27ನೇ ವರ್ಷದ ರಸ್ತೆ ಸುರಕ್ಷಾ ಸಪ್ತಾಹ ಸಮಾರಂಭದಲ್ಲಿ “ಆರ್.ಟಿ.ಓ ರಸ್ತೆ ಸುರಕ್ಷಾ ಚಾಲನಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಸುಧೀರ್ಘ ಅಪಘಾತ ರಹಿತ ಚಾಲನಾ ಸೇವೆಯನ್ನು ಗುರುತಿಸಿ 23-3-2016ರಂದು ಬೆಂಗಳೂರು ಕಂಠೀರವ ಒಳಾಂಗಣಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರಿಂದ ಚಿನ್ನದ ಪದಕ ಮತ್ತು ನಗದು ಪ್ರಶಸ್ತಿಗಳೊಂದಿಗೆ ಗೌರವವನ್ನು ಪಡೆದುಕೊಂಡಿದ್ದು ಅಲ್ಲದೆ ಲಯನ್ಸ್ ಕ್ಲಬ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿದೆ. ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಮುಳಿಯದಲ್ಲಿ ವಾಸಮಾಡಿಕೊಂಡಿರುವ ಇವರು ಪತ್ನಿ ಪ್ರೇಮ ಹಾಗೂ ಪುತ್ರ ರಕ್ಷಿತ್ ಎಂ.ಜಿ ಅವರೊಂದಿಗೆ ಸುಖ ಸಂಸಾರ ನಡೆಸುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.