ವಿಟ್ಲದಲ್ಲಿ ಯುವವಾಹಿನಿಯ 36ನೇ ಘಟಕ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಮಂಗಳೂರು ಕೇಂದ್ರ ಸಮಿತಿಯ 36ನೇ ಘಟಕ ವಿಟ್ಲದಲ್ಲಿ ಅಸ್ತಿತ್ವಕ್ಕೆ ಬಂದಿದೆ. ವಿಟ್ಲ ಘಟಕದ ಪ್ರಥಮಾಧ್ಯಕ್ಷರಾಗಿ ಯಶವಂತ ಪೂಜಾರಿ ಎನ್. ಆಯ್ಕೆಯಾಗಿದ್ದಾರೆ. ವಿಟ್ಲ ಪರನೀರು ನಿವಾಸಿಯಾಗಿರುವ ಯಶವಂತ ಪೂಜಾರಿ ನೇತೃತ್ವದ ವಿಟ್ಲ ಯುವವಾಹಿನಿ ಘಟಕದ ಉದ್ಘಾಟನಾ ಸಮಾರಂಭ ನ.28ರಂದು ಸಂಜೆ ವಿಟ್ಲ ಶಿವಗಿರಿಯ ಬ್ರಹ್ಮಶ್ರೀ ನಾರಾಯಣ ಗುರುಸಭಾಭವನದ ದೇಯಿ ಬೈದೆತಿ ವೇದಿಕೆಯಲ್ಲಿ ನಡೆಯಿತು.


ವಿಟ್ಲ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಸಿ.ಎಚ್. ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನೂತನ ಘಟಕವು ಯಶಸ್ವಿಯಾಗಿ ಮುನ್ನಡೆಯಲಿ ಎಂದು‌ ಶುಭಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ. ಅವರು ಯುವವಾಹಿನಿ ವಿಟ್ಲ ಘಟಕದ ಪದಾಧಿಕಾರಿಗಳನ್ನು ಶಾಲು‌ ಹೊದಿಸಿ, ಹೂಗುಚ್ಛ ನೀಡಿ ಪದಗ್ರಹಣ ನೆರವೇರಿಸಿದರು.‌ ಬಳಿಕ ಪ್ರತಿಜ್ಞಾವಿಧಿ ಬೋಧಿಸಿದರು. ಜಾನಪದ ಸಂಶೋಧಕ ಡಾ.ನವೀನ್ ಕುಮಾರ್ ಮರಿಕೆ ದಿಕ್ಸೂಚಿ ಭಾಷಣಗೈದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಲಯನ್ಸ್ ನಿಕಟಪೂರ್ವ ಗವರ್ನರ್ ಡಾ.‌ಗೀತಪ್ರಕಾಶ್ ಮಾತನಾಡಿ ಯುವವಾಹಿನಿ ಘಟಕವು ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಸರಿಸಾಟಿಯಾಗಿ ಕೆಲಸವನ್ನು ಮಾಡಿ ಪ್ರಶಂಸೆ ಗಳಿಸಲಿ‌ ಎಂದು‌ ಆಶಿಸಿದರು.

ಮುಂಬಯಿಯ ಫ್ಯಾಶನ್ ಕೋರಿಯೋಗ್ರಾಫರ್, ಪತ್ರಕರ್ತ, ದೈವಪಾತ್ರಿ ಸನ್ನಿಧ್ ಪೂಜಾರಿ ಮಾತನಾಡಿ, ಇಂದು‌ ಬಿಲ್ಲವ ಸಮಾಜದಲ್ಲಿ ನನ್ನಂತಹ. ಅದೆಷ್ಟೋ ಪ್ರತಿಭೆಗಳಿದ್ದಾರೆ. ಅವರೆಲ್ಲ ರಿಗೂ‌ ಸೂಕ್ತ ಅವಕಾಶ ದೊರೆತರೆ ಪ್ರತಿಯೊಂದು ಕ್ಷೇತ್ರದಲ್ಲೂ ಬಿಲ್ಲವ ಸಾಧಕರು‌ ಸಿಗುತ್ತಾರೆ ಎಂದು‌ ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಡಾ.‌ರಾಜಾರಾಮ ಕೆ.ಬಿ. ಮಾತನಾಡಿ, ವಿದ್ಯೆಗೆ ಮಹತ್ವ ನೀಡಿದಾಗ ಮಾತ್ರ ಯಾವುದೇ ಸಮುದಾಯ ಸಮಾಜದಲ್ಲಿ ‌ಉನ್ನತ ಸ್ಥಾನವನ್ನು ಅಲಂಕರಿಸಲು ಸಾಧ್ಯ. ನಿರಂತರವಾದ ಅಧ್ಯಯನ ಶೀಲತೆ ಇದ್ದಾಗ ನಾವು ಬೆಳೆಯಬಹುದು. ನಾವು ಸಂಘಟಿತರಾಗಿ ಬೆಳೆದು ಸಮಾಜದ ಇತರ ವರ್ಗಗಳನ್ನೂ ಜೊತೆಯಾಗಿ ನಡೆಸಿಕೊಂಡು ಹೋಗೋಣ ಎಂದು‌ ಕರೆ ನೀಡಿದರು. ಯುವವಾಹಿನಿ ಕೇಂದ್ರ ಸಮಿತಿಯ‌ ಉಪಾಧ್ಯಕ್ಷ ರಾದ ರಾಜೇಶ್ ಪ್ರಾಸ್ತಾವಿಕವಾಗಿ‌ ಮಾತನಾಡಿ, ಯುವವಾಹಿನಿಯು ಬೆಳೆದುಬಂದ‌ ಹಾದಿಯ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಸೇನಾಧಿಕಾರಿ ದಾಸಪ್ಪ ಪೂಜಾರಿ ದಂಪತಿ ಮತ್ತು ಪ್ರಸ್ತುತ ಸೈನಿಕನಾಗಿ ಸೇವೆ ಸಲ್ಲಿಸುತ್ತಿರುವ ದಯಾನಂದ ಪೂಜಾರಿ ದಂಪತಿಯರನ್ನು ಯುವವಾಹಿನಿಯ ಪದಾಧಿಕಾರಿಗಳು ಶಾಲು‌ ಹೊದಿಸಿ, ಫಲಪುಷ್ಪ ಸ್ಮರಣಿಕೆ ನೀಡಿ ಪೇಟ ತೊಡಿಸಿ ಸನ್ಮಾನಿಸಿ ಗೌರವಿಸಿದರು. ಸನ್ಮಾನಿತರ ಪರವಾಗಿ ನಿವೃತ್ತ ಯೋಧ ದಾಸಪ್ಪ ಪೂಜಾರಿಯವರ ಪತ್ನಿ ಮಾತನಾಡಿದರು. ಯುವವಾಹಿನಿ ವಿಟ್ಲ ಘಟಕದ ನಿಯೋಜಿತ ಅಧ್ಯಕ್ಷ ಯಶವಂತ ಪೂಜಾರಿ ಮಾತನಾಡಿ, ಸರ್ವರ ಸಹಕಾರ ಕೋರಿದರು.


 


ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಅನುಪ್ ಕುಮಾರ್ ಮತ್ತು ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರಭಾಕರ ಸಾಲಿಯಾನ್, ಕೇಂಸ್ರ ಸಮಿತಿ ‌ಕಾರ್ಯದರ್ಶಿ ಅಶೋಕ್ ಕುಮಾರ್ ಪಡ್ಪು ವೇದಿಕೆಯಲ್ಲಿ ‌ಉಪಸ್ಥಿತರಿದ್ದರು. ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಅನೂಪ್ ಕುಮಾರ್ ಎಸ್ ಸ್ವಾಗತಿಸಿ ದರು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಸಾಲ್ಯಾನ್ ಪರಿಚಯ ಪತ್ರ ವಾಚಿಸಿದರು. ವಿಟ್ಲ ಘಟಕದ ನಿಯೋಜಿತ ಕಾರ್ಯದರ್ಶಿ ಹರೀಶ ಕೆ. ವಂದಿಸಿದರು. ಶಿಕ್ಷಕಿ ರೇಣುಕಾ ಮತ್ತು ನವೀನ್ ಅಳಿಕೆ ಕಾರ್ಯಕ್ರಮ ನಿರೂಪಿಸಿದರು. ಸಭೆಯ ಬಳಿಕ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಶ್ ವಿಟ್ಲ ನಿರ್ದೇಶನದಲ್ಲಿ ಸಾಂಸ್ಕೃತಿಕ ಸಂಜೆ ನಡೆಯಿತು. ‌

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.