ಪುತ್ತೂರು ತಾಲೂಕು ಬಂಟರ ಸಂಘದ ಕಾರ‍್ಯಕಾರಿ ಸಮಿತಿ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸಂಘದ ವತಿಯಿಂದ ಜಾಗ ಖರೀದಿಸಿ, ಕಟ್ಟಡ ನಿರ್ಮಾಣ-ಶಶಿಕುಮಾರ್ ರೈ ಬಾಲ್ಯೊಟ್ಟು

ಪುತ್ತೂರು: ತಾಲೂಕು ಬಂಟರ ಸಂಘದ ವತಿಯಿಂದ ಸ್ವಂತ ಜಾಗ ಖರೀದಿಸಿ, ಅದರಲ್ಲಿ ಸುಂದರವಾದ ಕಟ್ಟಡವನ್ನು ನಿರ್ಮಿಸುವ ಯೋಜನೆಗೆ ಚಾಲನೆ ನೀಡಲಿದ್ದೇವೆ, ಇದಕ್ಕೆ ಬಂಟ ಸಮಾಜದ ಎಲ್ಲಾ ಬಂಧುಗಳು ಹಾಗೂ ಸಂಘದ ಎಲ್ಲಾ ನಿರ್ದೇಶಕರುಗಳು, ಮಾಜಿ ಅಧ್ಯಕ್ಷರುಗಳು, ಕಾರ‍್ಯಕಾರಿ ಸಮಿತಿ ಸದಸ್ಯರುಗಳು ಪೂರ್ಣ ರೀತಿಯ ಸಹಕಾರವನ್ನು ನೀಡುವಂತೆ ಪುತ್ತೂರು ತಾಲೂಕು ಬಂಟರ ಸಂಘದ ನೂತನ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಹೇಳಿದರು.

ಅವರು ನ. 29 ರಂದು ಪುತ್ತೂರು ಬಂಟರ ಭವನದಲ್ಲಿ ಜರಗಿದ ತಾಲೂಕು ಬಂಟರ ಸಂಘದ ೨೦೨೧-೨೨ ನೇ ಸಾಲಿನ ಕಾರ‍್ಯಕಾರಿ ಸಮಿತಿಯ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿ ಬಂಟರ ಸಂಘದ ಮೂಲಕ ಜಾಗ ಖರೀದಿಗೆ ಸೂಕ್ತವಾದ ಸ್ಥಳ ಕಂಡು ಬಂದಿಲ್ಲ ಕೂಡಲೇ ಸಮಾಜ ಬಾಂದವರು ತಿಳಿಸುವಂತೆ ವಿನಂತಿಸಿದರು. ಜಾಗ ಖರೀದಿಗೆ ದೊಡ್ಡ ಮೊತ್ತದ ದೇಣಿಗೆಯನ್ನು ನೀಡಲು ಈಗಾಗಲೇ ಹತ್ತು ಮಂದಿ ಮುಂದೆ ಬಂದಿದ್ದಾರೆ, ಆರು ತಿಂಗಳ ಒಳಗೆ ಪ್ರತಿ ಗ್ರಾಮ ಗ್ರಾಮದಲ್ಲಿ ಸಂಘಟಿತವಾಗಿ ಗ್ರಾಮ ಸಮಿತಿಯನ್ನು ರಚಿಸು ಕಾರ‍್ಯಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿ, ಇದು ಕಾರ‍್ಯಗತವಾದ ಕೂಡಲೇ ದೊಡ್ಡ ಮಟ್ಟದಲ್ಲಿ ಬಂಟರ ಭವನದಲ್ಲಿ “ಬಂಟರ ಗೌಜಿ”ಯನ್ನು ಅದ್ದೂರಿಯಾಗಿ ಮಾಡುವ ಮೂಲಕ, ನಮ್ಮ ಸಮಾಜವನ್ನು ಗುರುತಿಸುವಂತೆ ಮಾಡುವ ಕೆಲಸಕ್ಕೆ ಎಲ್ಲರ ಪೂರ್ಣ ಬೆಂಬಲ ಅಗತ್ಯ ಎಂದು ಹೇಳಿದರು. ಬಂಟರ ಸಂಘದ ಅಧ್ಯಕ್ಷರಾಗಿ ಬೂಡಿಯಾರ್ ರಾಧಾಕೃಷ್ಣ ರೈಯವರ ತಂಡದ ೧೮ ತಿಂಗಳ ಕಾರ‍್ಯ ಸಮಾಜಕ್ಕೆ ಪೂರಕವಾಗಿತ್ತು. ಕರೋನಾ ಕಾಲಘಟ್ಟದಲ್ಲಿ ಬೂಡಿಯಾರ್ ಮತ್ತು ಅವರ ತಂಡ ನಡೆಸಿದ ಕಿಟ್ ವಿತರಣೆ ಮಾದರಿ ಕಾರ‍್ಯಕ್ರಮವಾಗಿತ್ತು. ಬಂಟ ಸಮಾಜವು ಸದಾ ಸಕ್ರಿಯವಾಗಿ ಮುನ್ನಡೆಯಲ್ಲಿ ಎಲ್ಲರ ಸಹಕಾರ ಅತೀ ಅಗತ್ಯ ಎಂದು ಹೇಳಿದರು.

ಉತ್ತಮ ಸಮಾಜಮುಖಿ ಕಾರ‍್ಯ ಮಾಡಲಿ- ಬೂಡಿಯಾರ್ ರಾಧಾಕೃಷ್ಣ ರೈ
ತಾಲೂಕು ಬಂಟರ ಸಂಘದ ನಿಕಟಪೂರ್ವಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈರವರು ಮಾತನಾಡಿ ನಮ್ಮ ೧೮ ತಿಂಗಳ ಅವಧಿಯಲ್ಲಿ ಸಂಘದ ಕಾರ‍್ಯಕ್ರಮ ನಡೆಸುವಲ್ಲಿ ಸಹಕರಿಸಿದ ಎಲ್ಲರೂ ಧನ್ಯರು. ಸುಮಾರು ೫.೫೦ ಲಕ್ಷ ರೂ ವೆಚ್ಚದಲ್ಲಿ ಕರೋನಾ ಕಾಲ ಘಟ್ಟದಲ್ಲಿ ಆರ್ಹ ವ್ಯಕ್ತಿಗಳಿಗೆ ಕಿಟ್ ವಿತರಣೆಯನ್ನು ಮಾಡಿದ್ದೇವೆ, ವಾಟ್ಯಾಫ್ ಗ್ರೂಪ್ ಮೂಲಕ ಮನೆ ನಿರ್ಮಾಣ ಸೇರಿದಂತೆ ಆಶಕ್ತರಿಗೆ ನೆರವಿನ ಹಸ್ತವನ್ನು ನೀಡಿದ್ದೇವೆ. ಮುಂಬರುವ ಅವಧಿಯಲ್ಲಿ ಶಶಿಕುಮಾರ್ ರೈ ಮತ್ತು ತಂಡ ಉತ್ತಮ ಸಮಾಜ ಮುಖಿ ಕಾರ‍್ಯವನ್ನು ಮಾಡಲಿ ಎಂದು ಆಶಿಸಿದರು.

ಸಮಾಜಕ್ಕೆ ಮಾದರಿಯಾಗಲಿ- ಕಾವು ಹೇಮನಾಥ ಶೆಟ್ಟಿ

ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರು ಮಾತನಾಡಿ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತು ತಂಡ ಮುಂದಿನ ದಿನಗಳಲ್ಲಿ ಅತ್ಯತ್ತಮವಾಗಿ ಕಾರ‍್ಯವನ್ನು ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಲಿ. ಒಂದುವರೆ ವರ್ಷಗಳ ಅವಧಿಯಲ್ಲಿ ಬೂಡಿಯಾರ್ ರಾಧಾಕೃಷ್ಣ ರೈ ಮತ್ತು ಅವರ ತಂಡದ ಮಾಡಿರುವ ಕಾರ‍್ಯ ಸದಾ ನೆನಪಲ್ಲಿ ಉಳಿಯುತ್ತದೆ ಎಂದರು.

ಸಮಾಜ ಮುಖಿ ಕಾರ‍್ಯ ನಿರಂತರವಾಗಿ ನಡೆಯಲಿ- ಲಕ್ಷ್ಮಿನಾರಾಯಣ ಶೆಟ್ಟ
ಬಂಟರ ಸಂಘದ ಮಾಜಿ ಅಧ್ಯಕ್ಷ ಲಕ್ಷ್ಮಿನಾರಾಯಣ ಶೆಟ್ಟಿ ಅರಿಯಡ್ಕರವರು ಮಾತನಾಡಿ ಪುತ್ತೂರು ತಾಲೂಕು ಬಂಟರ ಸಂಘದ ಮೂಲಕ ಉತ್ತಮ ಸಮಾಜಮುಖಿ ಕಾರ‍್ಯ ನಿರಂತರವಾಗಿ ನಡೆಯಲಿ ಎಂದರು.

ಹೊಸ ತಂಡ ಅತ್ಯತ್ತಮವಾದ ಕಾರ‍್ಯವನ್ನು ಮಾಡಲಿ- ದಯಾನಂದ ರೈ
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತುರವರು ಮಾತನಾಡಿ ಶಶಿಕುಮಾರ್ ರೈ ಬಾಲ್ಯೊಟ್ಟುರವರ ಸಾರಥ್ಯದಲ್ಲಿ ಹೊಸ ತಂಡ ಅತ್ಯುತ್ತಮವಾದ ಕಾರ‍್ಯವನ್ನು ಮಾಡಲಿ ಎಂದು ಆಶಿಸಿದರು.

ಬಂಟರ ಸಂಘವು ಹೋರಾಟವನ್ನು ನಡೆಸಬೇಕು- ಶಕುಂತಳಾ ಶೆಟ್ಟಿ
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿರವರು ಮಾತನಾಡಿ ಸಮಾಜದಲ್ಲಿ ಬಂಟ ಸಮುದಾಯದ ಯಾರಿಗದರೂ ಅನ್ಯಾಯವಾದಲ್ಲಿ ಸಂಘಟಿತರಾಗಿ ಬಂಟರ ಸಂಘವು ಹೋರಾಟವನ್ನು ನಡೆಸಬೇಕು ಎಂದು ಸಲಹೆವನ್ನು ನೀಡಿದರು.

ಹೆಸರನ್ನು ಪಡೆಯಲಿ- ಮಲ್ಲಿಕಾ ಪ್ರಸಾದ್
ಮಾಜಿ ಶಾಸಕಿ ಮತ್ತು ಪುತ್ತೂರು ತಾಲೂಕು ಮಹಿಳಾ ಬಂಟರ ಸಂಘದ ಮಾಜಿ ಅಧ್ಯಕ್ಷೆ ಮಲ್ಲಿಕಾ ಪ್ರಸಾದ್‌ರವರುಮಾತನಾಡಿ ಹೊಸ ಹೊಸ ಯೋಜನೆಗಳ ಮೂಲಕ ಶಶಿಕುಮಾರ್ ರೈ ಬಾಲ್ಯೊಟ್ಟು ತಂಡ ಸಮಾಜದಲ್ಲಿ ಹೆಸರನ್ನು ಪಡೆಯಲಿ ಎಂದು ಹಾರೈಸಿದರು. ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಮೀರಾ ಭಾಸ್ಕರ್ ರೈ ಮಾದೋಡಿ, ಯುವ ಬಂಟರ ಸಂಘದ ಅಧ್ಯಕ್ಷ ಪ್ರಕಾಶ್ ರೈ ಸಾರಕರೆರವರು ಸಂದಭೋಚಿತವಾಗಿ ಮಾತನಾಡಿದರು. ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಹಾಗೂ ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಜಗನ್ನಾಥ ರೈ ಮಾದೋಡಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಡಮಜಲು ಸುಭಾಸ್ ರೈ, ಪಿ.ಬಿ, ಅಮ್ಮಣ್ಣ ರೈ ದೇರ್ಲ, ಮೋಹನ್ ರೈ ನರಿಮೊಗರುರವರುಗಳು ವಿವಿಧ ಸಲಹೆ ಸೂಚನೆಯನ್ನು ನೀಡಿದರು.

ಸನ್ಮಾನ
18 ತಿಂಗಳ ಅವಧಿಯಲ್ಲಿ ತಾಲೂಕು ಬಂಟರ ಸಂಘದ ನಾಯಕತ್ವವನ್ನು ವಹಿಸಿಕೊಂಡ, ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಪ್ರಧಾನ ಕಾರ‍್ಯದರ್ಶಿ ರಾಕೇಶ್ ರೈ ಕೆಡೆಂಜಿ ಹಾಗೂ ಕೋಶಾಧಿಕಾರಿ ನಿತ್ಯಾನಂದ ಶೆಟ್ಟಿರವರನ್ನು ತಾಲೂಕು ಬಂಟರ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.


ಗೌರವಾರ್ಪಣೆ
ಸಮಾಜದ ವಿವಿಧ ಸಂಘ- ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ ಬಂಟ ಸಮಾಜದ ಮುಂದಾಳುಗಳಾದ ಕಾವು ಹೇಮನಾಥ ಶೆಟ್ಟಿ, ದಯಾನಂದ ರೈ ಮನವಳಿಕೆಗುತ್ತು, ನಿತ್ಯಾನಂದ ಶೆಟ್ಟಿ ಮನವಳಿಕೆ, ಸೂರ‍್ಯನಾಥ ಆಳ್ವ ಮಿತ್ತಳಿಕೆ, ಪುರಂದರ ರೈ ಮಿತ್ರಂಪಾಡಿ, ಶಶಿರಾಜ್ ರೈ, ಚಿಲ್ಮೆತ್ತಾರು ಜಗಜೀವನ್‌ದಾಸ್ ರೈರವರುಗಳನ್ನು ಹೂಗುಚ್ಚ ನೀಡಿ ಗೌರವಿಸಲಾಯಿತು.

ಬಂಟರ ಸಂಘದ ಪ್ರಧಾನ ಕಾರ‍್ಯದರ್ಶಿ ರಮೇಶ್ ರೈ ಡಿಂಬ್ರಿ ಸ್ವಾಗತಿಸಿ, ಕಾರ‍್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ ವಂದಿಸಿದರು. ಸಮಾರಂಭದಲ್ಲಿ ಬಂಟರ ಸಂಘದ ಉಪಾದ್ಯಕ್ಷರುಗಳು, ನಿರ್ದೇಶಕರುಗಳು, ಕಾರ‍್ಯಕಾರಿ ಸಮಿತಿ ಸದಸ್ಯರುಗಳು, ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕರುಗಳು, ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮೌನ ಪ್ರಾರ್ಥನೆ
ನ. 29 ನಿಧನರಾದ ದೈವಗಳ ಮಧ್ಯಸ್ಥ ಭರತ್ ಭಂಡಾರಿರವರಿಗೆ ತಾಲೂಕು ಬಂಟರ ಸಂಘದ ವತಿಯಿಂದ ಒಂದು ನಿಮಿಷದ ಮೌನ ಪ್ರಾರ್ಥನೆ ನಡೆಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.