ಉಪ್ಪಿನಂಗಡಿ-ಮಠದಲ್ಲಿ ಆಟೋರಿಕ್ಷಾಗೆ ಲಾರಿ ಡಿಕ್ಕಿ ಹೊಡೆದು ಗಂಭಿರ ಗಾಯಗೊಂಡಿದ್ದ ಖತೀಜಮ್ಮ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

೦ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 2ಕ್ಕೆ ಏರಿಕೆ

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಮಠ ಎಂಬಲ್ಲಿ ನ. 29ರಂದು ಆಟೋ ರಿಕ್ಷಾಗೆ ಲಾರಿಯೊಂದು ಡಿಕ್ಕಿ ಹೊಡೆದು ಓರ್ವ ಶಾಲಾ ಬಾಲಕ ಮೃತಪಟ್ಟು, ಇತರ 3 ಗಂಭೀರ ಸ್ವರೂಪದ ಗಾಯಗೊಂಡಿದ್ದವರ ಪೈಕಿ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ನ. 30ರಂದು ಮೃತಪಟ್ಟಿದ್ದು, ಘಟನೆಯಿಂದ ಮೃತಪಟ್ಟವರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ.

ಮೃತಪಟ್ಟಿರುವ ಮಹಿಳೆ ಮಠ ಹಿರ್ತಡ್ಕ ನಿವಾಸಿ ಖತೀಜಮ್ಮ (45 ವ.) ಎಂಬವರಾಗಿರುತ್ತಾರೆ. ಇವರು ತನ್ನ ಇಬ್ಬರು ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದವರು ಮರಳಿ ತನ್ನ ಮನೆಗೆ ಅಟೋ ರಿಕ್ಷಾದಲ್ಲಿ ಹೋಗುತ್ತಿದ್ದ ವೇಳೆ ಎದುರುಗಡೆಯಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದು ಅಟೋ ರಿಕ್ಷಾದಲ್ಲಿದ್ದ ಖತೀಜಮ್ಮರವರ ಪುತ್ರ ಟಿ. ಮಹಮ್ಮದ್ ಅಲ್ತಾಫ್ (12ವ.) ಮೃತಪಟ್ಟಿದ್ದರು. ಇನ್ನೊಬ್ಬಾತ ಪುತ್ರ ಆಶಿಕ್ ಅಲಿಯಾಸ್ ಟಿ. ಮೊಹಮ್ಮದ್ ಅಸ್ರಾರ್ (23 ವ.) ಮತ್ತು ಆಟೋ ರಿಕ್ಷಾ ಚಾಲಕ ಹಿರ್ತಡ್ಕ ನಿವಾಸಿ ಸಿದ್ದಿಕ್(34) ಗಂಭೀರ ಸ್ವರೂಪದ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ತಲೆಗೆ ಗಂಭೀರ ಸ್ವರೂಪದ ಗಾಯಗೊಂಡಿದ್ದ ಖತೀಜಮ್ಮ ಚಿಕಿತ್ಸೆ ಫಲಕಾರಿಯಾಗದೆ ನ. 30ರಂದು ನಿಧನರಾದರು.
ಖತೀಜಮ್ಮ ಮಂಗಳೂರು ಬೆಂಗರೆ ನಿವಾಸಿ ಆಗಿದ್ದು, ಇವರು ತನ್ನ ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದವರು ಬಸ್ಸಿನಲ್ಲಿ ಬಂದು ಉಪ್ಪಿನಂಗಡಿಯಲ್ಲಿ ಬಸ್‌ನಿಂದ ಇಳಿದು ಆಟೋರಿಕ್ಷಾದಲ್ಲಿ ಮನೆಗೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿತ್ತು.

ಅನಾಥರಾದರು ಇಬ್ಬರು ಮಕ್ಕಳು:
ಮೃತ ಖತೀಜಮ್ಮರವರ ಪತಿ ಅಶ್ರಫ್ ಎಂಬವರು 2 ವರ್ಷದ ಹಿಂದೆ ಮೃತಪಟ್ಟಿದ್ದರು. ಇವರಿಗೆ ನಿನ್ನೆ ಮೃತಪಟ್ಟಿರುವ ಅಲ್ತಾಫ್ ಮತ್ತು ಆಶಿಕ್ ಹಾಗೂ ಆಶಿಫ್ ಸೇರಿದಂತೆ ಒಟ್ಟು ೩ ಮಕ್ಕಳು. ಇದೀಗ ಆಶಿಕ್ ಮತ್ತು ಆಶಿಫ್ ತಂದೆ, ತಾಯಿಯನ್ನು ಕಳಕೊಂಡು ಅನಾಥರಾಗುವಂತಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.