ಕುಂಬ್ರ: ಜನಸಾಗರಕ್ಕೆ ಸಾಕ್ಷಿಯಾದ ನೂರೇ ಅಜ್ಮೀರ್ ಮಜ್ಲಿಸ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಆಧ್ಯಾತ್ಮಿಕ ಮಜ್ಲಿಸ್‌ಗಳು ದೇಹ ಮತ್ತು ಆತ್ಮ ಎರಡನ್ನೂ ಶುದ್ದಿಗೊಳಿಸುತ್ತದೆ: ವಲಿಯುದ್ದೀನ್ ಫೈಝಿ

ಪುತ್ತೂರು: ಒಬ್ಬ ವ್ಯಕ್ತಿಯನ್ನು ಕೆಟ್ಟವನನ್ನಾಗಿ ಪರಿವರ್ತಿಸಲು ಬಲು ಸುಲಭ ಆದರೆ ಅದೇ ವ್ಯಕ್ತಿಯನ್ನು ಉತ್ತಮನನ್ನಾಗಿಸಲು ಸಾಧ್ಯವಿದ್ದರೂ ಅದು ತುಂಬಾನೆ ಕಷ್ಟದ ಕೆಲಸವಾಗಿದೆ ಎಂಬುದು ಜನಜನಿತವಾಗಿದೆ ಆದರೆ ಆಧ್ಯಾತ್ಮಿಕ ಮಜ್ಲಿಸ್‌ಗಳು ಯಾವುದೇ ದುಷ್ಟವ್ಯಕ್ತಿಯನ್ನು ಉತ್ತಮನನ್ನಾಗಿಸುತ್ತದೆ ಎಂಬುದಕ್ಕೆ ಇದುವರೆಗೆ ನಡೆದ ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಲಿಸ್‌ಗಳೇ ಸಾಕ್ಷಿಯಾಗಿದೆ ಎಂದು ವಲಿಯುದ್ದೀನ್ ಫೈಝಿ ವಾಝಕ್ಕಾಡ್ ಹೇಳಿದರು.

 

ಅವರು ಕುಂಬ್ರ ಕೆಐಸಿ ಆಶ್ರಯದಲ್ಲಿ ಕುಂಬ್ರ ಎಬ್ರೋಡ್ ಹೊರಾಂಗಣದಲ್ಲಿ ನಡೆದ ಬೃಹತ್ ನೂರೇ ಅಜ್ಮೀರ್ ಮಜ್ಲಿಸ್‌ನ ನೇತೃತ್ವ ವಹಿಸಿ ಮಾತನಾಡಿದರು.

ವ್ಯಕ್ತಿ ಎಷ್ಟೇ ಕೆಟ್ಟವನಾದರೂ ಆತನನ್ನು ಸರಿದಾರಿಗೆ ದಾರಲು ಸಾಧ್ಯವಿಲ್ಲ ಎಂಬುದು ಮಿಥ್ಯವಾಗಿದೆ. ನಾವು ಲೌಕಿಕ ಆಡಂಬರದ ನಡುವೆ ಅಲ್ಲಾಹನ ಅನುಗ್ರಹವನ್ನು ಮರೆಯುತ್ತಿದ್ದೇವೆ, ದೇವರು ನಮಗೆ ಎಲ್ಲಾ ಸೌಕರ್ಯ, ಸೌಭಾಗ್ಯವನ್ನು ಕರುಣಿಸಿದರೂ ನಾವು ಅವನು ಕಲಿಸಿದ ಧರ್ಮಕ್ಕೆ ವಿರುದ್ದವಾಗಿ ನಾವು ನಮ್ಮ ಜೀವನ ಶೈಲಿಯನ್ನು ಬಲದಾಯಿಸಿದಾಗ ನಾವು ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ . ವ್ಯಕ್ತಿ ಆರೋಗ್ಯ ಅಥವಾ ಸದೃಢನಾಗಿದ್ದಾಗ ಅವನಿಗೆ ದೇವರ ನೆನಪು ಆಗಲಾರದು ಅವನು ಕಷ್ಟಕ್ಕೊಳಗಾದಾಗ ದೇವನ ಮೊರೆ ಹೋಗುತ್ತಾನೆ ಇದು ಇಸ್ಲಾಂ ಕಲಿಸಿದ ಜೀವನ ಶೈಲಿಯಲ್ಲ ಎಂದು ಹೇಳಿದ ಅವರು ನಾವು ಅಲ್ಲಾಹನನ್ನು ಮರೆತು ಜೀವನ ನಡೆಸುವಂತಾಗಬಾರದು. ಅವನಿಗೆ ವು ಮಾಡುವ ನಿತ್ಯ ಆರಾಧನೆಯ ಜೊತೆ ನಮ್ಮ ಆತ್ಮವನ್ನು ಶುದ್ದೀಕರಿಸುವ ಆಧ್ಯಾತ್ಮಿಕ ಮಜ್ಲಿಸ್‌ಗಳಲ್ಲಿ ಭಾಗವಹಿಸುವಂತಾಗಬೇಕು. ಅಲ್ಲಾಹನು ಇಷ್ಟಪಡದ ಕಾರ್ಯದಲ್ಲಿ ನಾವು ತೊಡಗಿಕೊಂಡಾಗ ಅಲ್ಲಾಹನ ಶಿಕ್ಷೆಗೆ ಒಳಗಾಗಲಿದ್ದೇವೆ ಎಂದು ಹೇಳಿದ ಅವರು ಆಧ್ಯಾತ್ಮಿಕ ಮಜ್ಲಿಸ್‌ಗಳು ನಮ್ಮ ದೇಹ ಮತ್ತು ಆತ್ಮ ಎರಡನ್ನೂ ಶುದ್ದೀಕರಿಸುತ್ತದೆ, ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಥವಾ ಆಲಿಸುವ ಮೂಲಕ ನಾವು ಅಲ್ಲಾಹನ ಪ್ರೀತಿಗೆ ಪಾತ್ರರಾಗಬೇಕಿದೆ ಎಂದು ಹೇಳಿದರು.

ಸಂಕಷ್ಟ ನಿವಾರಣೆಗೆ ಮಜ್ಲಿಸ್‌ಗಳು ಸಹಕಾರಿ: ಬಂಬ್ರಾಣ ಉಸ್ತಾದ್
ಕುಂಬ್ರದಲ್ಲಿ ಮೊದಲ ಬಾರಿಗೆ ಆಯೋಜನೆ ಮಡಿರುವ ನೂರೇ ಅಜ್ಮೀರ್ ಮಜ್ಲಿಸ್ ನಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದಾರೆ. ನೂರಾರು ಸಂಕಷ್ಟಗಳನ್ನು ಮನಸ್ಸಲ್ಲಿ ಹೊತ್ತುಕೊಂಡು ಮಜ್ಲಿಸ್ ಗೆ ಬಂದಿದ್ದಾರೆ , ಅವರೆಲ್ಲರ ಪ್ರಾರ್ಥನೆಯನ್ನು ಅಲ್ಲಾಹನು ಸ್ವೀಕರಿಸಲಿದ್ದಾನೆ. ಇದುವರೆಗೆ ಅನೇಕ ಮಂದಿ ರೋಗಿಗಳು ಸೇರಿದಂತೆ ಲೌಕಿಕ ಸಂಕಷ್ಟಗಳಿಗೆ ಪರಿಹಾರವನ್ನು ಕಂಡುಕೊಂಡಿದ್ದಾರೆ. ಕುಂಬ್ರ ಕೆಐಸಿ ವಿದ್ಯಾ ಸಂಸ್ಥೆಯ ವತಿಯಿಂದ ನಡೆಸಲ್ಪಡುವ ಈ ಮಜ್ಲಿಸ್ ನಮ್ಮ ಸಂಸ್ಥೆಯನ್ನು ಬೆಳಗಿಸಲಿದೆ ಎಂಬುದರಲ್ಲಿ ಅನುಮಾನವಿಲ್ಲ. ದಾನವು ನಮ್ಮನ್ನು ಶ್ರೇಷ್ಟರನ್ನಾಗಿಸುತ್ತದೆ ಮತ್ತು ಆಯುಷ್ಯ ವೃದ್ದಿಗೆ ಕಾರಣವೂ ಅಗುತ್ತದೆ ಎಂಬ ಪ್ರವಾದಿಯವರ ನುಡಿಯನ್ನು ನಾವು ಅಳವಡಿಸಿಕೊಳ್ಳಬೇಕು, ಬಡ ಹಾಗೂ ಅನಾಥ ಮಕ್ಕಳ ಸೇವೆಯಲ್ಲಿ ನಾವು ಸಂತೃಪ್ತಿಯನ್ನು ಹೊಂದುವಂತಾಗಬೇಕು. ಅನಾಥ ಮಕ್ಕಳಿಗೆ ನೆರವು ನೀಡಿದ ಯಾರನ್ನೇ ಆಗಲಿ ಅಲ್ಲಾಹನು ಕೈ ಬಿಡಲಾರ ಎಂದು ಹೇಳಿದರು.
ಎಸ್ಕೆ ಎಸ್ಸೆಸ್ಸೆಫ್ ಮುಖಂಡ ಇಕ್ಬಾಲ್ ಬಾಳಿಲ ಮಾತನಾಡಿ ದಿನಂಪ್ರತಿ ವಲಿಯುದ್ದೀನ್ ಫೈಝಿ ಅವರ ನೂರೇ ಮಜ್ಲಿಸ್ ಆಧ್ಯಾತ್ಮ ಕಾರ್ಯಕ್ರಮ ಪ್ರತೀ ದಿನವೂ ಆನ್‌ಲೈನಲ್ಲಿ ನಡೆಯುತ್ತಿದ್ದು ದಿನವೊಂದಕ್ಕೆ ಲಕ್ಷಾಂತರ ಮಂದಿ ಅದರ ವೀಕ್ಷಣೆಯನ್ನು ಮಾಡಿ ಕಾರ್ಯಕ್ರಮದಲ್ಲಿ ಭಾಗಿಗಳಾಗುತ್ತಿದ್ದಾರೆ. ಅನೇಕ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಮಜ್ಲಿಸ್ ಸಹಕಾರಿಯಾಗುತ್ತಿದೆ ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಿನ ಜನರಿಗೆ ತಲುಪುವಲ್ಲಿ ಸಹಕಾರಿಯಾಗಲಿದ್ದು ಮಾನವನ ಒಳಿತಿಗೆ ನಾವೆಲ್ಲರೂ ಶ್ರಮಿಸಬೇಕಿದೆ ಎಂದು ಹೇಳಿದರು.

ನಿರೀಕ್ಷೆಗೂ ಮೀರಿದ ಜನ..!
ನೂರೇ ಮಜ್ಲಿಸ್ ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮಿಕ್ಕಿ ಜನ ಭಾಗವಹಿಸಿದ್ದು ಪಾರ್ಕಿಂಗ್ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗಿತ್ತ. ಎಬ್ರೋಡ್ ಹೊರಾಂಗಣದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದೆ ಜನ ರಸ್ತೆ ಬದಿಯಲ್ಲೇ ಮಜ್ಲಿಸ್ ಆಲಿಸುಂವತಾಗಿತ್ತು. ಕುಂಬ್ರ ಜಲಾಲಿಯ್ಯ ಯಂಗ್‌ಮೆನ್ಸ್ ಸ್ವಯಂ ಸೇವಕರು ಟ್ರಾಫಿಕ್ ನಿಯಂತ್ರಿಸುವಲ್ಲಿ ಸಹಕರಿಸಿದರು. ಪುರುಷರು ಮತ್ತು ಮಹಿಳೆಯರು ಸೇರಿ ಅಪಾರ ಸಂಖ್ಯೆಲ್ಲಿ ಜನ ಸೇರಿದ್ದರು. ಪುತ್ತೂರು ತಾಲೂಕಿನ ಇತಿಹಾಸದಲ್ಲೇ ಮಜ್ಲಿಸ್ ಕಾರ್ಯಕ್ರಮದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದು ದಾಖಲೆ ಎಂಬಂತಾಯಿತು.

ಮಕ್ಕಳನ್ನು ವೇದಿಕೆಗೆ ಕರೆ ತಂದರು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲವು ಪೋಷಕರು ಅನರೋಗ್ಯ ಪೀಡಿತ ತಮ್ಮ ಮಕ್ಕಳನ್ನು ವೇದಿಕೆಗೆ ಕರೆತಂದು ವಲಯುದ್ದೀನ್ ಫೈಝಿ ಅವರಲ್ಲಿ ಪ್ರಾರ್ಥನೆ ಮಾಡಿಸಿದರು. ಸಭೆಯಲ್ಲಿ ಸೇರಿದ್ದ ಸಾವಿರಾರು ಮಂದಿಯ ಸಮ್ಮುಖದಲ್ಲಿ ಅನಾರೋಗ್ಯ ಪೀಡಿತ ಮಕ್ಕಳಿಗಾಗಿ ಸಾಮೂಹಿಕ ದುವಾ ಪ್ರಾರ್ಥನೆ ಸಲ್ಲಿಸಲಾಯಿತು.

ವೇದಿಕೆಯಲ್ಲಿ ಇರ್ಷಾದ್ ದಾರಿಮಿ ಮಿತ್ತಬೈಲು, ಅಶ್ರಫ್ ಫೈಝಿ ಮಿತ್ತಬೈಲ್, ಅನ್ಸಾರ್ ಫೈಝಿ ಬುರ್ಹಾನಿ, ಉಸ್ಮಾನುಲ್ ಫೈಝಿ ತೋಡಾರ್, ಹಯಬೀಬುಲ್ಲಾ ತಂಙಳ್ ಮುಕ್ವೆ, ಅಶ್ರಫ್ ಬಾಖವಿ,ಕರೀಂ ದಾರಿಮಿ, ಇಸ್ಮಾಯಿಲ್ ಫೈಝಿ, ಅಬ್ಬಾಸ್ ಮದನಿ, ಮಹಮ್ಮದ್ ಸಾಗರ್ ಮಿತ್ತಬೈಲು, ಸಿ ಎಸ್ ಮೋನುಹಾಜಿ ನೆಹರೂನಗರ, ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಅಬೂಬಕ್ಕರ್ ಮಂಗಳ, ಅಬ್ಬಚ್ಚ ಬೆಳ್ಳಾರೆ, ಜಮಾಲ್ ಹಾಜಿ ಕಳೆಂಜ, ಯೂಸುಫ್ ಹಾಜಿ ಕೈಕಾರ, ಆಮು ಹಾಜಿ ಬೆಳ್ಳಾರೆ, ಮಹಮ್ಮದ್ ಹಾಜಿ ಕಲ್ಲೆಗ, ಹಂಝ ಸಾಲ್ಮರ, ಶರೀಫ್ ಹಿಂಧೂಸ್ತಾನ್ ಲಾಡ್ಜ್, ಅಕ್ಬರ್ ಅಡ್ಡೂರು, ಯು ಪಿ ಇಬ್ರಾಹಿಂ, ಅಶ್ರಫ್ ಎ ಕೆ ಅಡ್ಡೂರು, ಉಸ್ಮಾನ್ ಹಾಜಿ, ಎಂ ಎಚ್ ಮುಹಿಯುದ್ದೀನ್ ಹಾಜಿ ಅಡ್ಡೂರು, ಶೇಖ್ ಮೋನು ಅಡ್ಡೂರು, ಶಾಫಿ ಮುಲಾರ ಪಟ್ಣ, ಅಬ್ದುಲ್ ಖಾದರ್ ಹಾಜಿ ಹಿರಾ, ಎಂ ಎಸ್ ಮಹಮ್ಮದ್, ಅಬ್ದುಲ್ ಅಝೀಝ್ ಹಾಜಿ ಕಾವು, ಮಹಮ್ಮದ್ ಹಾಜಿ ಎಸ್ ಪಿ ಟಿ, ಬಶೀರ್ ಹಾಜಿ ಶೇಕಮಲೆ, ಸುಲೈಮಾನ್ ಹಾಜಿ ಶೇಕಮಲೆ, ಅಬ್ದುಲ್ ರಝಾಕ್ ಹಾಜಿ ಪರ್ಲಡ್ಕ, ಹಂಝ ಹಾಜಿ ಪರ್ಲಡ್ಕ, ಆಸಿಫ್ ಆದರ್ಶ, ಅಬ್ದುಲ್ ರಝಾಕ್ ಟಿಂಬರ್, ಕೆ ಎಂ ಬಾವಾ ಹಾಜಿ ಕೂರ್ನಡ್ಕ, ಎಲ್ ಟಿ ಹಸೈನಾರ್ ಹಾಜಿ, ಪುತ್ತು ಹಾಜಿ ಮಾಂತೂರು, ಅಬ್ಬಾಸ್ ಹಾಜಿ ಚಾಪಲ್ಲ, ಅಹ್ಮದ್ ಹಾಜಿ ಮಿತ್ತೂರು, ಬಾತಿಷಾ ಪಾಟ್ರಕೋಡಿ, ರಫೀಕ್ ಹಾಜಿ ಕೊಡಾಜೆ, ಎಲ್ ಟಿ ಅಬ್ದುಲ್ ರಝಾಕ್ ಹಾಜಿ , ನಾಸಿರ್ ರೆಂಜಲಾಡಿ, ರಿಯಾಝ್ ವಲಚ್ಚಿಲ್, ಹಮೀದ್ ಹಾಜಿ ಸುಳ್ಯ, ಜಾಸಿಂ ಕಡಂಬಾರ್, ರಫೀಕ್ ಆತೂರು, ಅಬ್ದುಲ್ಲ ಹಾಜಿ ಪಡೀಲ್, ಅಬ್ದುಲ್ ಹಮೀದ್ ಹಾಜಿ ಫ್ಯಾಮಿಲಿ, ಉಮ್ಮರ್ ಹಾಜಿ ಚಾಪಲ್ಲ, ಸಿರಾಜುದ್ದೀನ್ ಫೈಝಿ ಮಾಡನ್ನೂರು, ಉಮ್ಮರ್ ಫೈಝಿ ಸಾಲ್ಮರ, ಮುಹಮ್ಮದ್ ಸಾಬ್ ಕೂರ್ನಡ್ಕ, ಅಬ್ದುಲ್ ರಹಿಮಾನ್ ಆಝಾದ್, ಅಬೂಬಕ್ಕರ್ ಮುಲಾರ್, ಜಾಬಿರ್ ಫೈಝಿ ಬನಾರಿ, ಮಹಮ್ಮದ್ ಮುಸ್ಲಿಯಾರ್ ಮುಂಢೋಳೆ, , ಝಕರಿಯ್ಯಾ ಪರ್ಪುಂಜ, ಖಾಸಿಂ ದಾರಿಮಿ ಕಿನ್ಯ, ಮಜೀದ್ ದಾರಿಮಿ ಗಟ್ಟಮನೆ, ಹಮೀದ್ ದಾರಿಮಿ ಸಂಪ್ಯ, ರಫೀಕ್ ಆತೂರು ಸೇರಿದಂತೆ ಹಲವು ಮಂದಿ ಉಲಮಾ, ಉಮರಾ , ಹಾಗೂ ರಾಜಕೀಯ ನೇತಾರರು ಭಾಗವಹಿಸಿದ್ದರು.
ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಪ್ರೊಫೆಸರ್ ಅನೀಸ್ ಕೌಸರಿ ಸ್ವಾಗತಿಸಿದರು. ಸತ್ತಾರ್ ಕೌಸರಿ ವಂದಿಸಿದರು. ಕೆಐಸಿ ವಿದ್ಯಾರ್ಥಿಗಳಾದ ಸಿನಾನ್ ಮತ್ತು ಕಮಾಲ್ ಕಾರ್ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.