ನೆಟ್ಟಣದಲ್ಲಿ ಶ್ರೀ ಸುಬ್ರಹ್ಮಣ್ಯ ಮೆಡಿಕಲ್ ಸ್ಟೋರ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ನೆಟ್ಟಣ ಬದ್ರಿಯಾ ಜುಮಾ ಮಸೀದಿ ಬಿಲ್ಡಿಂಗ್‌ನಲ್ಲಿ ಶ್ರೀ ಸುಬ್ರಹ್ಮಣ್ಯ ಮೆಡಿಕಲ್ ಸ್ಟೋರ್ ನ.29ರಂದು ಶುಭಾರಂಭಗೊಂಡಿತು. ನಿವೃತ್ತ ಶಿಕ್ಷಕ ಸುಂದರ ಗೌಡ ಪಣೆಮಜಲು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ನೆಟ್ಟಣ ಪ್ರದೇಶವು ಇದೀಗ ವಾಣಿಜ್ಯ ನಗರವಾಗಿ ಬೆಳೆಯುತ್ತಿದ್ದು, ಇಲ್ಲಿಯ ಜನರ ಅವಶ್ಯಕತೆಗನುಗುಣವಾಗಿ ಮೆಡಿಕಲ್ ಕೇಂದ್ರವೊಂದು ಪ್ರಾರಂಭವಾಗಿರುವುದು ಉತ್ತಮ ಬೆಳವಣಿಗೆ, ಯಾವುದೇ ವ್ಯವಹಾರದಲ್ಲಿ ಕೇವಲ ಲಾಭದ ಉದ್ದೇಶವನ್ನು ಇಟ್ಟುಕೊಳ್ಳದೆ ಜನಸೇವೆಯನ್ನು ಅಳವಡಿಸಿಕೊಂಡಾಗ ಉದ್ಯಮದಲ್ಲಿ ಯಶಸ್ಸು ಖಂಡಿತಾ ಎಂದು ಹೇಳಿ ಶುಭ ಹಾರೈಸಿದರು.

ಅರ್ಚಕ ನಾರಾಯಣ ಅಸ್ರಣ್ಣ ಅವರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ನೆಟ್ಟಣ ಜುಮಾ ಮಸೀದಿಯ ಅಧ್ಯಕ್ಷ ಕೆ.ಎ.ಮಹಮ್ಮದ್, ತಾ.ಪಂ. ಮಾಜಿ ಸದಸ್ಯ ಗಣೇಶ್ ಕೈಕುರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷ ಶಿವಶಂಕರ್, ಮಾಜಿ ಅಧ್ಯಕ್ಷೆ ಶಾರಾದ ದಿನೇಶ್, ಐತ್ತೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಸತೀಶ್ ಕೆ, ಡಾ. ದೇವಿಪ್ರಸಾದ್ ಕಾನತ್ತೂರು, ಡಾ. ಮುರಳೀಧರ, ಪ್ರಕಾಶ್ ನೆಟ್ಟಣ, ರಮೇಶ್ ಬಳಕ್ಕ, ಪ್ರಭಾಕರ ಬಳಕ್ಕೆ, ವಿನಯ ಕುಮಾರ್, ವಿಶ್ವನಾಥ ಗೌಡ, ಯಮುನಾ, ಶಾಂತಮ್ಮ ಬಳಕ್ಕೆ, ಶೇಖರ್ ಬಳಕ್ಕ, ಮಹೇಶ್ ಕಾಣಿಯೂರು ಮೊದಲಾದವರು ಆಗಮಿಸಿ ಶುಭ ಹಾರೈಸಿದರು. ಮೆಡಿಕಲ್‌ನ ಮಾಲಕ ನವೀನ್ ಪಂಜ ಅವರು ಮಾಹಿತಿ ನೀಡಿ, ನಮ್ಮಲ್ಲಿ ಅಲೋಪತಿ ಆಯುರ್ವೇದಿಕ್, ಹೋಮಿಯೋಪತಿ ಔಷಧಿಗಳೊಂದಿಗೆ ಜನರಿಕ್ ಔಷಧಿಗಳು ಲಭ್ಯ, ದನ, ನಾಯಿ, ಕೋಳಿ, ಬೆಕ್ಕು ಸಾಕು ಪ್ರಾಣಿಪಕ್ಷಿಗಳಿಗೆ ಬೇಕಾದ ಔಷಧಿಗಳು ಲಭ್ಯ ಎಂದು ಹೇಳಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.