ಮೈಸೂರಿನ ಫೋಟೋ ಗ್ರಾಫರ್ ಕೊಲೆ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಪ್ರಕರಣವನ್ನು ಒಂದೇ ವಾರದಲ್ಲಿ ಭೇದಿಸುವಲ್ಲಿ ಸಫಲರಾದ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷರಿಂದ ಸೂಕ್ತ ಬಹುಮಾನ ಘೋಷಣೆ

ಪುತ್ತೂರು: ಮೈಸೂರಿನ ಪೋಟೋ ಗ್ರಾಫರ್ ಅನ್ನು ಪುತ್ತೂರಿನಲ್ಲಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 6 ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗಳನ್ನು ನ.೩೦ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಪ್ರಕರಣವನ್ನು ಒಂದೇ ವಾರದಲ್ಲಿ ಭೇದಿಸುವಲ್ಲಿ ಸಫಲರಾದ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷರಿಂದ ಸೂಕ್ತ ಬಹುಮಾನ ಘೋಷಣೆ ಮಾಡಲಾಗಿದೆ.


ಮೈಸೂರು ಜಿಲ್ಲೆಯ ಸುಬ್ರಹ್ಮಣ್ಯ ನಗರದಲ್ಲಿ ಫೋಟೋಗ್ರಾಫರ್ ಆಗಿದ್ದ ಜಗದೀಶ್ ಕೊಲೆಯಾದವರು. ಅವರು ಪುತ್ತೂರು ತಾಲೂಕು ಅರ್ಯಾಪು ಗ್ರಾಮದ ಕುಂದೂರುಪಂಜದಲ್ಲಿ ಮತ್ತು ಪಡುವನ್ನೂರು ಗ್ರಾಮದ ಪಟ್ಲಡ್ಕ ಎಂಬಲ್ಲಿರುವ ತಮ್ಮ ಕೃಷಿ ಜಮೀನನ್ನು ನೋಡಲೆಂದು ನ.21ಕ್ಕೆ ಬಂದಾಗ ಅವರನ್ನು ಕೊಲೆ ಮಾಡಲಾಗಿತ್ತು. ಅತ್ತ ಕಡೆ ಮೈಸೂರು ಮನೆಗೆ ತಲುಪದ ಜಗದೀಶ್ ಅವರನ್ನು ಹುಡುಕಾಟ ಮಾಡಿದ ಅವರ ಅಣ್ಣ ಶಶಿದರ ಕಾವೂರು ಅವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿದ್ದರು. ಬಳಿಕ ಕಾಣೆಯಾದ ವ್ಯಕ್ತಿಯ ಕೊಲೆಯಾಗಿರಬಹುದೆಂದು ಮನೆಯವರ ಸಂಶಯದ ಅಧಾರದಲ್ಲಿ ಪತ್ತೆಯ ಬಗ್ಗೆ ಎಸ್ಪಿ ಮತ್ತು ಅಡಿಷನಲ್ ಎಸ್ಪಿ ಅವರ ನಿರ್ದೇಶನದಂತೆ ವಿಶೇಷ ತಂಡವನ್ನು ಡಿವೈಎಸ್ಪಿ ಡಾ ಗಾನ, ಪಿ. ಕುಮಾರ್, ನೇತೃತ್ವದಲ್ಲಿ ಪುತ್ತೂರು ಗ್ರಾಮಾಂತರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಮತ್ತು ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕ ಉದಯ ರವಿ ಎಂ ವೈ ಅವರುಗಳು ವಿಶೇಷ ತಂಡ ರಚಿಸಿ ಅದರಂತೆ ಸದ್ರಿ ವಿಶೇಷ ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಳು ಕ್ಲಿಷ್ಟಕರವಾದ ಈ ಪ್ರಕರಣ ಪತ್ತೆ ಹಚ್ಚುವಲ್ಲಿ ಹಲವು ಆಯಾಮಗಳಲ್ಲಿ ತನಿಖೆ ನಡೆಸಿ ಕೊಲೆಯ ಜಾಡನ್ನು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆರೋಪಿಗಳಾದ ಪಡುವನ್ನೂರು ಗ್ರಾಮದ ಪಟ್ಲಡ್ಕ ದಿ. ಐತ್ತಪ್ಪ ರೈ ಅವರ ಪುತ್ರ ಬಾಲಕೃಷ್ಣ ರೈ ಯಾನೆ ಸುಬ್ಬಯ್ಯ (೫೯ವ), ಪತ್ನಿ ಜಯಲಕ್ಷ್ಮೀ(೫೬ವ), ಅವರ ಪುತ್ರ ಪ್ರಶಾಂತ್ ರೈ(೨೮ವ), ಪಟ್ಲಡ್ಕ ನಿವಾಸಿ ಸಂಜೀವ ಗೌಡ ಅವರ ಪುತ್ರ ಜೀವನ್ ಪ್ರಸಾದ್(೨೮ವ), ಬಡಗನ್ನೂರು ಗ್ರಾದಮ ಅನಿಲೆ ದಿ.ರಮಾನಾಥ ಶೆಟ್ಟಿಯವರ ಪುತ್ರ ಜಯರಾಜ್ ಶೆಟ್ಟಿ(೪೭ವ)ರವರನ್ನು ಪೊಲೀಸರು ಬಂಧಿಸಿದ್ದರು. ಬಂಧಿತರ ಪೈಕಿ ಬಾಲಕೃಷ್ಣ ರೈ, ಪ್ರಶಾಂತ್, ಜೀವನ್ ಪ್ರಸಾದ್ ಮತ್ತು ಜಯರಾಜ್ ಅವರನ್ನು ಪೊಲೀಸ್ ಕಸ್ಟಡಿಗೆ ಪಡೆದು ಕೊಂಡಿದ್ದರು. ಇದೀಗ ತನಿಖೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದೆ.

ಜಮೀನು ನೋಡಲು ಬಂದ ಜಗದೀಶ್ ಅವರನ್ನು ಕೊಲೆ ಮಾಡಲಾಗಿತ್ತು:
ಕೊಲೆಗೀಡಾಗಿದ್ದ ಜಗದೀಶ್ ರವರು ಅವರ ಜಮೀನು ನೋಡಲು ಬರುವ ಸಮಯದಲ್ಲಿ ಕೊಲೆ ಮಾಡುವ ಬಗ್ಗೆ ಸುಮಾರು ೧೦ ದಿನಗಳ ಹಿಂದೆ ತಿಂಗಳಾಡಿಯ ಉಮೇಶ್ ರೈ ಹೊಲೆ ಪ್ರಕರಣದ ಆರೋಪಿ ಜಯರಾಜ ಶೆಟ್ಟಿ ಅನಿಲೆ ಎಂಬವರು ಬಾಲಕೃಷ್ಣರ ಯಾನೆ ಸುಬ್ಬಯ್ಯ ರೈ, ಪ್ರಶಾಂತ, ಜೀವನ್ ಪ್ರಸಾದ್ ಮತ್ತು  ಜಯಲಕ್ಷ್ಮಿ ಎಂಬವರು ಸೇರಿಕೊಂಡು ಸಂಚು ರೂಪಿಸಿಕೊಂಡು ಕೊಲೆ ಮಾಡುವುದಾಗಿ ತೀರ್ಮಾನಿಸಿದ್ದರು. ಜಗದೀಶ್ ರವರು ತನ್ನ ಜಮೀನನ್ನು ನೋಡಲು ಮತ್ತು ಪಡುವನ್ನೂರು ಗ್ರಾಮದ ಪಟ್ಲಡ್ಕ ಜಮೀನಿನ ನೊಂದಣಿಯನ್ನು ಮಾಡುವ ವಿಚಾರದಲ್ಲಿ ಮಾತನಾಡುವ ಬಗ್ಗೆ ದಿನಾಂಕ ನ.೧೪ರಂದು ಬರುವುದಾಗಿ ತಿಳಿಸಿದ್ದು ಆ ದಿನದೇ ಜಗದೀಶ‍್  ರನ್ನು ಕೊಲೆ ಮಾಡಿ ಯಾರಿಗೂ ತಿಳಿಯದ ರೀತಿಯಲ್ಲಿ ಮೃತ ದೇಹವನ್ನು ಮಣ್ಣಿನಲ್ಲಿ ಹೂತು ಹಾಕಿ ವಾಸ ಮಾಡುವ ಬಗ್ಗೆ ಆರೋಪಿಗಳೆಲ್ಲರೂ ತೀರ್ಮಾನಿಸಿಕೊಂಡು ಅದರಂತೆ ದಿನಾಂಕ ನ.೧೪ರಂದು ಬೆಳಗ್ಗಿನ ಜಾವ ಮೈಸೂರಿನಿಂದ ಜಗದೀಸ್ ಅವರು ಬಸ್ಸಿನಲ್ಲಿ ಹೊರಟು ೧೧,೦೦ ಗಂಟೆ ಸುಮಾರಿಗೆ ಸಂಪ್ಯ ಕ್ಕೆ ಬಂದಿಳಿದವರನ್ನು ಬಾಲಕೃಷ್ಣ ರೈ ಯಾನೆ ಸುಬ್ಬಯ್ಯ ರೈ ರವರು ಆಟೋ ರಿಕ್ಷಾವೊಂದರಲ್ಲಿ ಆರ್ಯಾಪು ಗ್ರಾಮದ ಮೇಗಿನಪಂಜ ಎಂಬಲ್ಲಿಯ ಜಮೀನಿಗೆ ಕರೆದುಕೊಂಡು ಹೋಗಿ ಅಲ್ಲಿಂದ ಪುತ್ತೂರಿಗೆ ಬಂದು ಪುತ್ತೂರಿನಿಂದ ಹೊತೆಯಾಗಿ ಬಸ್ಸಿನಲ್ಲಿ ಕಾವು ಎಂಬಲ್ಲಿ ಬಂದಿಳಿದು ಅಲ್ಲಿಂದ ಸ್ವಲ್ಪ ದೂರಕ್ಕೆ ಈಶ್ವರಮಂಗಲ ರಸ್ತೆ ಕಡಗೆ ನಡೆದುಕೊಂಡು ಹೋದಾಗ ಈ ಮೊದಲು ತೀರ್ಮಾನಿಸಿದಂತೆ ಅರೋಪಿ ಪ್ರಶಾಂತ ಮತ್ತು ಜೀವನ್ ಪ್ರಸಾದ್ ಎಂಬವರು ಕಾರಿನಲ್ಲಿ ಬಂದಿದ್ದವರು ಜಗದೀಶ ರವರನ್ನು ಕಾರಿನಲ್ಲಿ ಕುಳ್ಳಿರಿಸಿ ಅಪಹರಣ ಮಾಡಿಕೊಂಡು ಕಾರನ್ನು ಪ್ರಶಾಂತ್ ಚಲಾಯಿಸುತ್ತಾ ಮುಂಬದಿಯ ಕಾರಿನ ಸೀಟಿನಲ್ಲಿ ಬಾಲಕೃಷ್ಣ ರೈ ಯಾನೆ ಸುಬ್ಬಯ್ಯ ರೈ ಅವರು ಕುಳಿತುಕೊಂಡಿದ್ದು ಹಿಂಬದಿಯ ಸೀಟಿನಲ್ಲಿ ಜಗದೀಶ್ ಅವರನ್ನು ಕೂತುಕೊಳಿಸಿ ಅವರೊಂದಿಗೆ ಜೀವನ್ ಪ್ರಸಾದ್, ಕುಳಿತುಕೊಂಡು, ನೂಜಿಬೈಲು ಪೆರ್ನಾಜೆ ರಸ್ತೆಯಲ್ಲಿ ಸುಮಾರು ೪ ಕಿ ಮೀ ದೂರ ಹೋಗಿ ಅಲ್ಲಿಂದ ಕಾರನ್ನು ತಿರುಗಿಸಿಕೊಂಡು ವಾಪಸ್ಸು ಬರುತ್ತಾ ಜೀವನ್ ಪ್ರಸಾದ್ ರವರು ಜಗದೀಶ್ ಅವರನ್ನು ಹಿಡಿದುಕೊಂಡು ತಲೆಯನ್ನು ಬಗ್ಗಿಸಿದಾಗ ಎದುರು ಸೀಟಿನಲ್ಲಿ ಕುಳಿತಿದ್ದ ಬಾಲಕೃಷ್ಣ ರೈ ಯಾನೆ ಸುಬ್ಬಯ್ಯ ರ ರವರು ಆಗಲೇ ಕಾರಿನಲ್ಲಿ ತಂದಿದ್ದ ಸುತ್ತಿಗೆಯಲ್ಲಿ ಜಗದೀಶ ರವರ ತಲೆಗೆ ಬಲವಾಗಿ ಹೊಡೆದ ಸಮಯ ಜಗದೀಶ್ ರವರು ಪ್ರಜ್ಞೆ ತಪ್ಪಿದ್ದು ಆ ಸಮಯ ಹಿಂದಿನಿಂದ ಯಾವುದೋ ವಾಹನ ಬರುವತ್ತಿರುವುದನ್ನು ಗಮನಿಸಿದ ಆರೋಪಿಗಳು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಪಡುವನ್ನೂರು ಗ್ರಾಮ ಪಟ್ಲಡ್ಕ ಮೂನಡ್ಕ ತೋಟದಲ್ಲಿ ಕಟ್ಟಡದ ಬಳಿಗೆ ಹೋಗಿ ಆ ಸಮಯ ಜಗದೀಶ ರವರು ಉಸಿರಾಡಿಕೊಂಡು ಜೀವಂತವಾಗಿರುವುದನ್ನು ಗಮನಿಸಿದ ಆರೋಪಿಗಳು ಮತ್ತೆ ತಮ್ಮಲ್ಲಿದ್ದ ಚಾಕುವಿನಿಂದ ಕುತ್ತಿಗೆ ಮತ್ತು ಬೆನ್ನಿಗೆ ತಿವಿದು ಕೊಲೆ ಮಾಡಿ ನಂತರ ಮೃತ ದೇಹವನ್ನು ಪಡುವನ್ನೂರುಗ್ರಾಮದ ಮುಗುಳಿ ಎಂಬಲ್ಲಿಯ ಅರಣ್ಯ ಇಲಾಖೆಗೆ ಸಂಭಂದಿಸಿದ ಆಕೇಶಿಯ ನೆಡು ತೋಪಿನ ಗುಡ್ಡದಲ್ಲಿ ಹೊಂಡ ತೆಗೆದು ಜಗದೀಶ ರವರ ಮೃತ ದೇಹವನ್ನು ಹೂತು ಹಾಕಿ ಸಾಕ್ಷಿ ನಾಶ ಮಾಡಲು ಪ್ರಯತ್ನ ಪಟ್ಟು ದಿನ ಘೋರ ಕೃತ್ಯ ಎಸಗಿರಲಾಗಿದೆ. ಕೊಲೆ ಮಾಡಿದ ನಂತರ ಸಾಕ್ಷಿ ನಾಶ ಮಾಡಲು ಜಗದೀಶ ಬಳಸುತ್ತಿದ್ದ ಮೊಬೈಲ್ ಅನ್ನು ರಾತ್ರೋ ರಾತ್ರಿ ಮೈಸೂರಿಗೆ ಹೋಗಿ ಮೈಸೂರಿನ ಹೂಟಗಲ್ಲಿಯಲ್ಲಿ ಬಿಸಾಡಿದ್ದು ನಂತರ ಹತ್ಯೆಗೆ ಬಳಿಸಿದ ಸುತ್ತಿಗೆ ಮತ್ತು ಚಾಕುವನ್ನು ಕುಶಾಲನಗರ ಶುಂಠಿಕೊಪ್ಪ ರಸ್ತೆಯ ಬದಿಯಲ್ಲಿ ಬಿಸಾಡಿರುತ್ತಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜಾಗದ ವಿಚಾರ ಕೊಲೆಯಲ್ಲಿ ಅಂತ್ಯ:

ಈ ಕೊಲೆಗೆ `ಜಗದೀಶ ರವರು ಮತ್ತು ಬಾಲಕೃಷ್ಣ ರೈ ಯಾನೆ ಸುಬ್ಬಯ್ಯ, ರವರು ಹತ್ತಿರದ ಸಂಭಂದಿಗಳಾಗಿದ್ದು ಜಗದೀಶ್  ಅವರ ಪುತ್ತೂರಿನ ಜಮೀನು ಎಲ್ಲಾ ವ್ಯಹಾರಗಳನ್ನು ಆರೋಪಿ ಬಾಲಕೃಷ್ಣ ರೈ ಯಾನೆ ಸುಬ್ಬಯ್ಯ ರೈ ರವರು ನೋಡಿಕೊಂಡು ಜಗದೀಶ್ ಅವರೊಂದಿಗೆ ತುಂಬಾ ಆತ್ಮೀಯಾವಾಗಿ ಇದ್ದುಕೊಂಡು ಅವರಿಗೆ ತಿಳಿಯದಂತೆ ಪಡುವನ್ನೂರು ಗ್ರಾಮದ ಪಟ್ಲಡ್ಕದ ಜಮೀನನ್ನು ಜಗದೀಶ್ ಅವರಿಗೆ ತಿಳಿಯದಂತೆ ತನ್ನ ಹೆಸರಿನಲ್ಲಿ ಮಾಡಿಕೊಂಡು ಬೆರೊಬ್ಬರಿಗೆ ಮಾರಾಟ ಮಾಡಿದ್ದು, ಮುಂದಕ್ಕೆ ಜಾಗವನ್ನು ಖರೀದಿಸಿದವರು ಕೃಷಿ ಚಟುವಟಿಕೆ ಮಾಡಿಕೊಂಡಿದ್ದು, ಈ ವಿಚಾರ ಜಗದೀಶ್ ಅವರಿಗೆ ತಿಳಿದರೆ ಮುಂದಕ್ಕೆ ಸಮಸ್ಯೆಯಾಗಬಹುದೆಂದು ತಿಳಿದು ಜಗದೀಶ್ ಯವರು ಜೀವಂತ ಇದ್ದರೆ ತೊಂದರೆಯಾಗಬಹುದೆಂದು ಭಾವಿಸಿ ಜಗದೀಶ ರನ್ನು ಕೊಲೆ ಮಾಡಬೇಕೆಂದು ತೀರ್ಮಾಸಿಸಿ ಈ ಹಿಂದೆ ತಿಂಗಳಾಡಿಯ ಉಮೇಶ್, ರೈ ಕೊಲೆ ಪ್ರಕರಣದ ಆರೋಪಿ ರೌಡಿ ಶೀಟರ್ ಜಯರಾಜ್ ಶೆಟ್ಟಿ ಆನಿಲೆ ಎಂಬವರ ಮಾರ್ಗದರ್ಶನದಲ್ಲಿ ಸಂಚು ರೂಪಿಸಿಕೊಂಡು ಬಾಲಕೃಷ್ಣ ರೈ ಯಾನೆ ಸುಬ್ಬಯ್ಯ ರವರು ಅವರ ಮಗ ಪ್ರಶಾಂತ್ ಪತ್ನಿ  ಜಯಲಕ್ಷ್ಮೀ ಮತ್ತು ನೆರೆಮನೆ ನಿವಾಸಿ ಜೀವನ್ ಪ್ರಸಾದ್ ರವರೊಂದಿಗೆ ಸೇರಿಕೊಂಡು ಕೊಲೆ ಮಾಡಿರುವುದಾಗಿದೆ, ಈ ಕೃತ್ಯಕ್ಕೆ ಆರೋಪಿಗಳು ಬಳಸಿದ ಮಾರುತಿ ಸುಜುಕಿ ಕಂಪನಿಯ ಸೆಲೆರಿಯೋ ಕಾರು ಮತ್ತು ಆಲ್ಟೋ ಕಾರನ್ನು ಹಾಗೂ ಸುತ್ತಿಗೆ, ಚಾಕುವನ್ನು ಮತ್ತು ಮೃತರ ಕುತ್ತಿಗೆಯಲ್ಲಿ ಇದ್ದ ಚಿನ್ನದ ಸರ ಆರೋಪಿ ಪ್ರಶಾಂತನ ಬಳಿಯಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ. ಸ್ವಾಧೀನ ಪಡಿಸಿ ಕೊಂಡ ಸೊತ್ತುಗಳ ಅಂದಾಜು ಮೌಲ್ಯ ಸುಮಾರು ರೂ. ೬ ಲಕ್ಷ ಆಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಪೊಲೀಸರಿಗೆ ಬಹುಮಾನ ಘೋಷಣೆ:
ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಪ್ರಕರಣವನ್ನು ಬೇಧಿಸುವಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಭಗವಾನ್ ಸೋನಾವನೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಡಾ|| ಶಿವ ಕುಮಾರ್, ರವರುಗಳ ಮಾರ್ಗದರ್ಶನದಂತೆ ಪೊಲೀಸ್ ಉಪಾಧೀಕ್ಷಕರಾದ ಡಾ| ಗಾನ, ಪಿ. ಕುಮಾರ್ ನೇತೃತ್ವದಲ್ಲಿ ಪುತ್ತೂರು ಗ್ರಾಮಾಂತರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಗೆ ಮತ್ತು ಪುತ್ತೂರು ಗ್ರಾಮಾಂಕದ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಉದಯ ರವಿ ಎಂ.ವ್ಯ ಮತ್ತು ಅಪರಾಧ ವಿಭಾಗದ ಪೊಲೀಸ್ ಉಪನಿರೀಕ್ಷಕರಾದ ಆಮೀನ್ ಸಾಬ್ ಅತ್ತಾರ್, ಪ್ರೊ ಪಿಎಸ್‌ಐ ಶ್ರೀರಾಂತ ರಾಥೋಡ ಅವರು ಮತ್ತು ಸಿಬ್ಬಂದಿಗಳಾದ ಎ ಎಸ್ ಐ ಜಗನ್ನಾಥ್, ಶಿವರಾಮ ಹೆಚ್, ರ್ದಪ್ಪ ಗೌಡ, ಸಣ, ದೇವರಾಜ್, ಆದ್ರಾಯ್ಡ್, ಸ್ಮರಿಯ, ಪ್ರಶಾಂತ್ ರೈ, ಪ್ರವೀಣ್ ರೈ ಪಾಲ್ತಾಡಿ, ಪ್ರಶಾಂತ, ಕೃಷ್ಣಪ್ಪ ಗೌಡ, ಲಕ್ಷ್ಮೀಶ ಗೌಡ, ಜಗದೀಶ ಅತ್ತಾಜೆ, ಹರ್ಷಿತ್, ಲೋಕೇಶ್, ಗಿರೀಶ ರೈ, ಮುನಿಯ ನಾಯ್ಕ, ಗುಡದಪ್ಪ ತೋಟದ್, ಧನ್ಯಶ್ರೀ, ಗಾಯತ್ರಿ, ಜಿಲ್ಲಾ ಗಣಕ ಯಂತ್ರದ ಸಂಪತ್, ದಿವಾಕರ್, ಹಾಗೂ ಚಾಲಕರಾದ ಹರೀಶ ನಾಯ್ಕ, ನವಾಝ್ ಬುಡ್ಡಿ, ಮತ್ತು ವಿನೋದ್ ರವರುಗಳ ನೇತೃತ್ವದ ತಂಡವು ಈ ಕ್ಲಿಷ್ಟಕರವಾದ ಪ್ರಕರಣವನ್ನು ಕೇವಲ ಒಂದೇ ವಾರದಲ್ಲಿ ಭೇದಿಸುವಲ್ಲಿ ಸಫಲಾಗಿರುತ್ತಾರೆ ಈ ತಂಡಕ್ಕೆ ಜಿಲ್ಲಾ ಪೊಲೀಸ್ ಆದಿಚಕರು ಸೂಕ್ತ ಬಹುಮಾನವನ್ನು ಘೋಷಿಸಿರುತ್ತಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.