ಪಿಎಫ್‌ಐ ವತಿಯಿಂದ ಮ್ಯಾರಥಾನ್ ಜಾಥಾ ,ಕಲಾ ಪ್ರದರ್ಶನ, ಸನ್ಮಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ರಾಷ್ಟ್ರಾದ್ಯಂತ ನಡೆಸಿಕೊಂಡು ಬರುತ್ತಿರುವ ಜನಾರೋಗ್ಯವೇ ರಾಷ್ಟ್ರ ಶಕ್ತಿ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಂಗವಾಗಿ ಪಿಎಫ್‌ಐ ಪುತ್ತೂರು ಜಿಲ್ಲಾ ಸಮಿತಿ ವತಿಯಿಂದ ನ.30ರಂದು ದರ್ಬೆ ಜಂಕ್ಷನ್ ನಿಂದ ಕಿಲ್ಲೆ ಮೈದಾನದ ತನಕ ಮ್ಯಾರಥಾನ್ ಜಾಥಾ ನಡೆಯಿತು.


ಪಿಎಫ್‌ಐ ಪುತ್ತೂರು ಜಿಲ್ಲಾಧ್ಯಕ್ಷ ಜಾಬಿರ್ ಅರಿಯಡ್ಕರವರು ಧ್ವಜ ಹಸ್ತಾಂತರ ಮಾಡುವ ಮೂಲಕ ದರ್ಬೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯೋಗ ಹಾಗೂ ಸ್ವಯಂ ರಕ್ಷಣೆಯ ಕಲಾ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪುತ್ತೂರಿನ ಹಾಜಬ್ಬ ಖ್ಯಾತಿಯ ನ್ಯಾಯವಾದಿ ಎಂ.ಪಿ.ಎಂ ವಿದ್ಯಾಲಯ ಮುರ ಇದರ ಸಂಚಾಲಕ ಎಂ.ಪಿ ಅಬೂಬಕ್ಕರ್ ಹಾಗೂ ಕುನ್ಫು, ಕಲರಿಯಲ್ಲಿ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ವಿಜೇತ ಆಸಿಫ್ ಕಿನ್ಯಾರವರನ್ನು ಸನ್ಮಾನಿಸಲಾಯಿತು.

 


ಕಾರ್ಯಕ್ರಮವನ್ನು ಉದ್ದೇಶಿಸಿ ಪಾಪ್ಯುಲರ್ ಫ್ರಂಟ್ ರಾಜ್ಯ ಉಪಾಧ್ಯಕ್ಷರಾದ ಅಯ್ಯೂಬ್ ಅಗ್ನಾಡಿ ಮಾತನಾಡಿ ಆರೋಗ್ಯ ಹಾಗೂ ಕ್ರೀಡೆ, ವ್ಯಾಯಾಮದ ಪ್ರಾಮುಖ್ಯತೆ ಬಗ್ಗೆ ಹಾಗೂ ಸಂಘಟನೆ ಜನಾರೋಗ್ಯ ರಾಷ್ಟ್ರಶಕ್ತಿ ಕಾರ್ಯಕ್ರಮದ ಮೂಲಕ ನಡೆಸುವ ಮ್ಯಾರಥಾನ್ ಜಾಥಾವನ್ನು ಪ್ರಾಮುಖ್ಯತೆ ಮತ್ತು ಸಂಘಟನೆಯ ಕಾರ್ಯಕ್ಷಮತೆ ಹಾಗೂ ಕಾರ್ಯಕ್ರಮದ ಆಯೋಜನೆಯ ಬಗ್ಗೆ ವಿವರಿಸಿದರು.ಪಾಪ್ಯುಲರ್ ಫ್ರಂಟ್ ದ.ಕ ಜಿಲ್ಲಾ ಸಮಿತಿ ಸದಸ್ಯ ಝಕರಿಯಾ ಗೋಳ್ತಮಜಲು ಹಾಗೂ ಪುತ್ತೂರು ಜಿಲ್ಲಾಧ್ಯಕ್ಷ ಜಾಬಿರ್ ಅರಿಯಡ್ಕ ರವರು ಸಂದರ್ಭೋಚಿತವಾಗಿ ಮಾತನಾಡಿದರು. ಹಾಜಿ ಇಬ್ರಾಹಿಂ ಸಾಗರ್, ಅಲ್ ಅನ್ಸಾರ್ ಚಾರಿಟಿ ಟ್ರಸ್ಟ್ (ರಿ)ಸವಣೂರು ಇದರ ಗೌರವ ಸಲಹೆಗಾರರಾದ ನಝೀರ್ ಸಿ.ಎ ಕ್ಯಾಂಪಸ್ ಫ್ರಂಟ್ ಪುತ್ತೂರು ಅಧ್ಯಕ್ಷರಾದ ಅನ್ಸಾರ್ ಬೆಳ್ಳಾರೆ ಉಪಸ್ಥಿತರಿದ್ದರು. ಸಿದ್ದೀಕ್ ಬೀಟಿಗೆ ಕಾರ್ಯಕ್ರಮವನ್ನು ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.