ದ.2: ರೋಟರಿ ಕ್ಲಬ್ ಪುತ್ತೂರು ಸ್ವರ್ಣಕ್ಕೆ ರೋಟರಿ ಜಿಲ್ಲಾ ಗವರ್ನರ್ ರವೀಂದ್ರ ಭಟ್ ಅಧಿಕೃತ ಭೇಟಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸ್ವರ್ಣಕ್ಕೆ ರೋಟರಿ ಜಿಲ್ಲಾ ಗವರ್ನರ್ ಎ.ಆರ್ ರವೀಂದ್ರ ಭಟ್‌ರವರು ಡಿ.2ರಂದು ಅಧಿಕೃತ ಭೇಟಿ ನೀಡಿ, ಕ್ಲಬ್‌ನಿಂದ ಹಮ್ಮಿಕೊಂಡ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಸ್ತಾಂತರಿಸಲಿದ್ದಾರೆ.

ಪುತ್ತೂರಿಗೆ ಆಗಮಿಸುವ ಜಿಲ್ಲಾ ಗವರ್ನರ್‌ರವರು ಪ್ರಾರಂಭದಲ್ಲಿ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ. ಬಳಿಕ ಕ್ಲಬ್ ಕಾರ್ಯದರ್ಶಿ ಆನಂದ ಮೂವಪ್ಪುರವರ ನಿವಾಸದಲ್ಲಿ ಉಪಾಹಾರ, ಪಡ್ಡಾಯೂರಿನಲ್ಲಿ ಕ್ಲಬ್‌ನ ವತಿಯಿಂದ ನಿರ್ಮಿಸಲಾದ `ಸ್ವರ್ಣ ಸಂಜೀವಿನಿ’ ಔಷಧಿ ವನ ಭೇಟಿ, ಪಡ್ಡಾಯೂರು ಅಂಗನವಾಡಿ ಕೇಂದ್ರಕ್ಕೆ ಕೊಡುಗೆ ಹಸ್ತಾಂತರ, ಕೈಕಾರ ಸರಕಾರಿ ಹಿ.ಪ್ರಾ ಶಾಲೆಗೆ ನೀರಿನ ಟ್ಯಾಂಕ್ ಹಾಗೂ ನಳ್ಳಿ ನೀರಿನ ಸೌಲಭ್ಯ ಹಸ್ತಾಂತರ, ಬಿರುಮಲೆ ಬೆಟ್ಟದಲ್ಲಿ ಕಾರ್ಯನಿರ್ವಹಿಸುವ ಪ್ರಜ್ಞಾ ವಿಕಲಚೇತರ ಕೇಂದ್ರ ಭೇಟಿ, ಮಧ್ಯಾಹ್ನದ ಭೋಜನ, ಅಪರಾಹ್ನ ರೋಟರಿ ಟ್ರಸ್ಟ್ ಹಾಲ್‌ನಲ್ಲಿ ನಡೆಯುವ ಕ್ಲಬ್ ಎಸ್ಸೆಂಬ್ಲಿ ಹಾಗೂ ಸಂಜೆ ನೆಹರು ನಗರದ ಸುದಾನ ವಸತಿಯುತ ಶಾಲಾ ಎಡ್ವರ್ಡ್ ಹಾಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಲಯ ೫ರ ಸಹಾಯಕ ಗವರ್ನರ್ ಜಿತೇಂದ್ರ ಎನ್.ಎ., ಕಾರ್ಯದರ್ಶಿ ಅಬ್ಬಾಸ್ ಮುರ ಹಾಗೂ ಲೆಪ್ಟಿನೆಂಟ್ ಜಯಂತ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಕ್ಲಬ್‌ನ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ಹಾಗೂ ಕಾರ್ಯದರ್ಶಿ ಆನಂದ ಮೂವಪ್ಪ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.