ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿದಾಯಕೂಟ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ 2020-21ನೇ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ವಿದಾಯಕೂಟ ಸಮಾರಂಭ ನಡೆಯಿತು. ಫಾದರ್‌ಮುಲ್ಲರ್ ಆಸ್ಪತ್ರೆಯ ವಾಕ್ ಶ್ರವಣ ವಿಭಾಗದ ಮುಖ್ಯಸ್ಥ ಡಾ|ಅಖಿಲೇಶ್ ಭಟ್ ಪಿ.ಎಂ. ಮಾತನಾಡಿ ವಿನಯದಿಂದ ಸಂಪಾದಿಸಿದ ವಿದ್ಯೆ ಯೋಗ್ಯವಾದದ್ದು ಎಂದು ಹೇಳಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ರಂಗನಾಥ.ರೈ ಗುತ್ತು ಅಧ್ಯಕ್ಷತೆ ವಹಿಸಿದ್ದರು. 

ಪಿ.ಟಿ.ಎ ಅಧ್ಯಕ್ಷ ಶುಭಕರ.ರೈ ಶುಭಹಾರೈಸಿದರು.ಸಂಸ್ಥೆಯ ಪೋಷಕರಾದ ಶಿವಪ್ರಕಾಶ್, ಆಡಳಿತಮಂಡಳಿಯ ಸಂಚಾಲಕ ಡಾ|ಸತೀಶ್ ರಾವ್, ಆಡಳಿತ ಮಂಡಳಿಯ ಸದಸ್ಯರಾದ ಪ್ರಕಾಶ್ ರೈ ಬೈಲಾಡಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಂಸ್ಥೆಯ ಮುಖ್ಯಗುರು ರಾಜೇಶ್ ನೆಲ್ಲಿತ್ತಡ್ಕ ಪ್ರಾಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿದರು. ಕನ್ನಡ ಭಾಷಾ ಶಿಕ್ಷಕಿ ಶೈನಿ ವಿದಾಯ ಗೀತೆಯೊಂದಿಗೆ ಮಕ್ಕಳನ್ನು ಹರಸಿದರು. ಆಂಗ್ಲಭಾಷಾ ಶಿಕ್ಷಕ ಪ್ರಶಾಂತ ವಂದಿಸಿದರು. ವಿದ್ಯಾರ್ಥಿ ತೇಜಸ್ವಿ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ವಿವಿಧ ರೀತಿಯ ಮನರಂಜನ ಆಟ ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.