ಬೂಡಿಯಾರ್ ತುಂಗಶ್ರೀ ನಿಲಯದಲ್ಲಿ ತುಂಗಮ್ಮ ರೈಯವರ ಉತ್ತರಕ್ರಿಯೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಹಿಂದಿನ ಸಂಪ್ರದಾಯ ಪದ್ಧತಿಯಲ್ಲಿ ಮನೆಯಲ್ಲೇ ಜರಗಿದ ಕಾರ‍್ಯಕ್ರಮ


ಪುತ್ತೂರು: ಬೆಳಿಯೂರುಬೀಡು ಬೂಡಿಯಾರ್ ಯಾಜಮಾನ ದಿ.ಕೋಚಪ್ಪ ರೈ ಮತ್ತು ಬೋಳೋಡಿಗುತ್ತು ದಿ.ಸೀತಮ್ಮ ರೈರವರ ಪುತ್ರಿ, ನೆಟ್ಟಣಿಗೆಗುತ್ತು ದಿ.ಸುಬ್ಬಣ್ಣ ರೈಯವರ ಪತ್ನಿ ಬೋಳೋಡಿಗುತ್ತು ಬೂಡಿಯಾರ್ ದಿ.ತುಂಗಮ್ಮ ರೈರವರ ಉತ್ತರಕ್ರಿಯೆ ಕಾರ‍್ಯಕ್ರಮ ದ. ೧ ರಂದು ಕುರಿಯ ಗ್ರಾಮದ ಬೂಡಿಯಾರ್ ತುಂಗಶ್ರೀ ನಿಲಯದಲ್ಲಿ ಜರಗಿತು.

ಈಗಿನ ಕಾಲದಲ್ಲಿ ಉತ್ತರಕ್ರಿಯೆಯ ವೈದಿಕ ಕಾರ‍್ಯಕ್ರಮಗಳು ದೇವಸ್ಥಾನದಲ್ಲಿ ನಡೆಯುವುದು ವಾಡಿಕೆಯಾಗಿದೆ. ಆದರೆ ಸುಮಾರು ೫೦ ವರ್ಷಗಳ ಹಿಂದೆ ಮನೆಯಲ್ಲೇ ಉತ್ತರಕ್ರಿಯೆಯ ಕಾರ‍್ಯಕ್ರಮ ನಡೆಯುವುದರ ಬಗ್ಗೆ ನಮ್ಮ ಹಿರಿಯರು ನೆನಪಿಸುತ್ತಾರೆ. ಆದರೆ ಬೂಡಿಯಾರ್ ತುಂಗಶ್ರೀ ನಿಲಯದಲ್ಲಿ ತುಂಗಮ್ಮ ರೈಯವರ ಉತ್ತರಕ್ರಿಯೆಯು ಹಿಂದಿನ ಕಾಲದಲ್ಲಿ ಮನೆಯಲ್ಲಿ ನಡೆಸುವ ಸಂಪ್ರದಾಯದ ಪ್ರಕಾರವೇ ಜರಗಿತು. ಇಂದಿನ ಯುವ ಪೀಳಿಗೆಗೆ ಮನೆಯ ಸಂಪ್ರದಾಯದಲ್ಲಿ ಉತ್ತರಕ್ರಿಯೆಯನ್ನು ಹೇಗೆ ನಡೆಸುತ್ತಾರೆ ಮತ್ತು ಆದರ ಆಚರಣೆಯ ವೈಶಿಷ್ಟಗಳನ್ನು ಕಾಣುವ ಸೌಭಾಗ್ಯ ದೊರೆಯಿತು.
ಪುತ್ತೂರು ತಾಲೂಕು ಬಂಟರ ಸಂಘದ ಉಪಾಧ್ಯಕ್ಷ ಚಿಲ್ಮೆತ್ತಾರು ಜಗಜೀವನ್‌ದಾಸ್ ರೈರವರು ಮಾತನಾಡಿ ತುಂಗಮ್ಮ ರೈಯವರು ತಮ್ಮ ಬದುಕಿನಲ್ಲಿ ಆದರ್ಶಯುತ ಜೀವನ ನಡೆಸಿ, ತನ್ನ ಸಂಸಾರ ಮತ್ತು ಕುಟುಂಬದ ಪ್ರೀತಿ ವಿಶ್ವಾಸವನ್ನುಗಳಿಸಿದ್ದರು. ಅವರ ಬದುಕಿನ ಆದರ್ಶ ನಮಗೆ ಮಾದರಿಯಾಗಿದೆ ಎಂದು ನುಡಿ ನಮನ ಸಲ್ಲಿಸಿದರು.

ತುಂಗಮ್ಮ ರೈಯವರ ಪುತ್ರ ಬೋಳೋಡಿಗುತ್ತು ಬೂಡಿಯಾರ್ ಪುರುಷೋತ್ತಮ ರೈ ಸ್ವಾಗತಿಸಿ ಮಾತನಾಡಿ ನಮ್ಮ ತಾಯಿ ೮೯ ವರ್ಷಗಳ ಕಾಲ ಆದರ್ಶ ಜೀವನ ನಡೆಸಿದರು. ಅವರ ಉತ್ತರಕ್ರಿಯೆಯನ್ನು ಮನೆಯಲ್ಲೇ ಮಾಡುವ ಮೂಲಕ ನಾವು ಹಿಂದಿನ ಸಂಪ್ರದಾಯವನ್ನು ಪಾಲಿಸಿದ್ದೇವೆ ಎಂದು ಹೇಳಿದರು. ಇನ್ನೂರ್ವ ಪುತ್ರ ಬೋಳೋಡಿಗುತ್ತು ಚಂದ್ರಹಾಸ ರೈ . ಅಳಿಯಂದಿರಾದ ಡಿಂಬ್ರಿಗುತ್ತು ಪದ್ಮನಾಭ ರೈ, ಪೇರಾಲ್‌ಗುತ್ತು ಕಿಟ್ಟಣ್ಣ ರೈ, ಪುತ್ರಿಯರಾದ ಬೋಳೋಡಿಗುತ್ತು ತಾರಾ ಪಿ.ರೈ, ಬೋಳೋಡಿಗುತ್ತು ವೀಣಾ ಕೆ.ರೈ, ಸೊಸೆಯಂದಿರಾದ ಸುಮತಿ ಸಿ.ರೈ ಕುಡಲುಗುತ್ತು, ರೂಪ ಪಿ.ರೈ ಬಾಯಾರುಗುತ್ತು, ತುಂಗಮ್ಮ ರೈಯವರ ಮೊಮ್ಮಕ್ಕಳು ಹಾಗೂ ಮರಿಮಕ್ಕಳು, ಕುಟುಂಬಸ್ಥರು, ಊರ-ಪರವೂರ ಹಿತೈಸಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳ ಪ್ರಮುಖರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

ಮನೆಯಲ್ಲೇ ಕಾರ‍್ಯಕ್ರಮ ನಡೆಯುವ ಪರಂಪರೆ ಉಳಿಯಬೇಕು
ಉತ್ತರಕ್ರಿಯೆಯ ಕಾರ‍್ಯಕ್ರಮಗಳು ೫೦ ವರ್ಷಗಳ ಮುಂಚೆ ಮನೆಯಲ್ಲೇ ನಡೆಯುತ್ತಿತ್ತು. ಮನೆಯಲ್ಲಿ ನಡೆಯುವ ಸಂಪ್ರದಾಯವನ್ನು ಉಳಿಸುವ ನಿಟ್ಟಿನಲ್ಲಿ ನಾವು ನಮ್ಮ ತಾಯಿಯವರ ಉತ್ತರ ಕ್ರಿಯೆಯನ್ನು ಮನೆಯಲ್ಲಿ ಮಾಡಿದ್ದೇವೆ. ಹಿಂದಿನ ನಮ್ಮ ಹಿರಿಯರ ಸಂಪ್ರದಾಯವನ್ನು ಉಳಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಈನಿಟ್ಟಿನಲ್ಲಿ ನಮ್ಮ ಹಿರಿಯರ ಆಚಾರ-ವಿಚಾರಗಳು ಜೀವಂತವಾಗಿ ಉಳಿಯುತ್ತದೆ.

-ಬೋಳೋಡಿಗುತ್ತು ಬೂಡಿಯಾರ್ ಪುರುಷೋತ್ತಮ ರೈ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.