ಪುತ್ತೂರು:ಮಹಾರಾಷ್ಟ್ರದ ಮೀರಾ-ಭಾಯಂದರ್ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಖ್ಯಾತ ಯಕ್ಷಗಾನ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುತ್ತೂರು ಶ್ರೀಧರ ಭಂಡಾರಿಯವರ ಅಳಿಯ ಯುವ ಉದ್ಯಮಿ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
]
ಕಳೆದ 23ವರ್ಷಗಳಿಂದ ಮಹಾರಾಷ್ಟ್ರದಲ್ಲಿ ನೆಲೆಸಿರುವ ಸಚ್ಚಿದಾನಂದ ಶೆಟ್ಟಿಯವರು, 15 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಕ್ರೀಯವಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಶಿಪ್ಪಿಂಗ್ ಮತ್ತು ಫಾರ್ಮಾ ಉದ್ಯಮಿಯಾಗಿದ್ದು ನೂರಾರು ಮಂದಿಗೆ ಉದ್ಯೋಗದಾತರಾಗಿದ್ದಾರೆ. ಯುವ ಉದ್ಯಮಿಯಾಗಿ, ರಾಜಕೀಯ ನೇತರಾರಾಗಿ, ಶ್ರೇಷ್ಠ ಸಮಾಜ ಸೇವಕರಾಗಿ ಮೀರಾರೋಡ್ ಪರಿಸರದ ನಾಮಾಂಕಿತ ತುಳು-ಕನ್ನಡಿಗರೆನಿಸಿಕೊಂಡಿರುವ ಸಚ್ಚಿದಾನಂದ ಶೆಟ್ಟಿಯವರು ಜನರ ವಿಶ್ವಾಸ, ಗೌರವಗಳನ್ನು ಗಳಿಸಿಕೊಂಡಿರುತ್ತಾರೆ. ನ.೨೮ರಂದು ಭಾಯಂದರ್ ಪಶ್ಚಿಮದ ಕಸ್ತೂರಿ ಟವರ್ಸ್ನಲ್ಲಿರುವ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಆಯ್ಕೆ ನಡೆದು ಪದಗ್ರಹಣವು ನಡೆದಿರುತ್ತದೆ. ಪತ್ನಿ ಶಾಂತಲಾ ಸಚ್ಚಿದಾನಂದ ಶೆಟ್ಟಿ, ಪುತ್ರರಾದ ಆಯುಷ್ ಶೆಟ್ಟಿ ಹಾಗೂ ಅಹನ್ ಶೆಟ್ಟಿಯವರೊಂದಿಗೆ ಮಹಾರಾಷ್ಟ್ರದ ಮುಂಬಯಿಯಲ್ಲಿ ವಾಸ್ತವ್ಯವಿದ್ದಾರೆ.