ಸೆರ್ಕಳ ಸಮೀಪ ಪತ್ತೆಯಾದ ಕೇರಳ ಮೂಲದ ಮೂವರು ಅಪರಿಚಿತರು ವಿಟ್ಲ ಪೊಲೀಸರ ವಶಕ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ: ಕೇರಳದ ಮೂಲದ ಕಾರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಮೂವರನ್ನು ಸ್ಥಳೀಯರು ವಿಟ್ಲ ಠಾಣಾ ಪೊಲೀಸರ ವಶಕ್ಕೆ ನೀಡಿದ ಘಟನೆ  ಕೊಳ್ಳಾಡು ಗ್ರಾಮದ ಸೆರ್ಕಳ ಕಲ್ಲಮಜಲು ಎಂಬಲ್ಲಿ ನಡೆದಿದೆ.

ರಾತ್ರಿ 12ಗಂಟೆಯ ಸುಮಾರಿಗೆ ಕೇರಳ ನೋಂದಣಿಯ ಮಾರುತಿ ರಿಡ್ಜ್ ಕಾರಿನಲ್ಲಿ ಮೂವರು ಯುವಕರು ಅನುಮಾನಾಸ್ಪದವಾಗಿ ಮನೆಯೊಂದರ ಬಳಿ ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಅವರನ್ನು ವಿಚಾರಿಸಿದಾಗ ಕೇರಳದ ವಡಗರ ನಿವಾಸಿಗಳೆಂದು ಆಗಂತುಕರು ತಿಳಿಸಿದ್ದರು. ಆದರೆ ಅವರು ಸೆರ್ಕಳ ಸಲೀಂ ಎಂಬಾತ ನಮ್ಮನ್ನು ಬರುವಂತೆ ಹೇಳಿದ್ದ ಎನುವುದನ್ನು ಬಿಟ್ಟರೆ ಯಾವ ಕಾರಣಕ್ಕಾಗಿ ಇಲ್ಲಿಗೆ ಬಂದಿರುವ ಬಗ್ಗೆ ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ  ಸ್ಥಳೀಯರು ವಿಟ್ಲ ಪೊಲೀಸ್ ಠಾಣೆಗೆ ಕರೆ ಮಾಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಆ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಹಣಕಾಸು ವಿಚಾರಕ್ಕೆ ಸಂಬಂಧಿಸಿ ಈ ಮೂವರು ಇಲ್ಲಿಗೆ ಬಂದಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸರ ವಿಚಾರಣೆ ಬಳಿಕ ಹೊರಬರಬೇಕಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.