ಶ್ವಾಸಕೋಶ ತಜ್ಞ ಡಾ. ಪ್ರೀತಿರಾಜ್ ಬಲ್ಲಾಳ್ ದರ್ಬೆ ಉಷಾ ಪಾಲಿ ಕ್ಲಿನಿಕ್‌ನಲ್ಲಿ ಡಿ.5ರಿಂದ ಸೇವೆಗ ಲಭ್ಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಶ್ವಾಸಕೋಶ ತಜ್ಞ ಡಾ.ಪ್ರೀತಿರಾಜ್ ಬಲ್ಲಾಳ್‌ರವರು ದರ್ಬೆ ಉಷಾ ಪಾಲಿ ಕ್ಲಿನಿಕ್‌ನಲ್ಲಿ ಸೇವೆಗ ಲಭ್ಯವಿದ್ದಾರೆ. ಪುತ್ತೂರು ತಾಲೂಕಿನ ಇರ್ದೆ ಬೆಟ್ಟಂಪಾಡಿ ಗ್ರಾಮದ ನಿರ್ಮಲ ಹಾಗೂ ವಿಠ್ಠಲ್ ಬಲ್ಲಾಳ್ ರವರ ಪುತ್ರರಾದ ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಬೆಟ್ಟಂಪಾಡಿಯ ಜಿ.ಎಚ್.ಪಿ.ಎಸ್ ಶಾಲೆ, ಬೆಟ್ಟಂಪಾಡಿ ನವೋದಯ ಪ್ರೌಢಶಾಲೆ, ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಶಿಕ್ಷಣವನ್ನು ಪೂರೈಸಿದ್ದಾರೆ. ಬಳಿಕ ಎಂ.ಬಿ.ಬಿ.ಎಸ್ ಪದವಿಯನ್ನು ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ ಪಡೆದು ಬಳಿಕ ಮುಂಬೈನ ಪ್ರಸಿದ್ಧ ಲೀಲಾವತಿ ಹಾಸ್ಪಿಟಲ್‌ನಲ್ಲಿ ಸ್ವಾಶಕೋಶ ವಿಭಾಗದಲ್ಲಿ DNB  ಪದವಿ, ಮುಂಬೈನ ಸರ್ ಎಚ್.ಎನ್ ರಿಲಯನ್ಸ್ ಆಸ್ಪತ್ರೆಯಲ್ಲಿ ಕ್ರಿಟಿಕಲ್ ಕೇರ್ ವಿಭಾಗದಲ್ಲಿ IDCCM  ಪದವಿ ಪಡೆದಿದ್ದಾರೆ.



ಮಂಗಳೂರಿನ ಏನೋಪೋಯ ಮೆಡಿಕಲ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಹಾಗೂ ಟಿ.ಬಿ ನೋಡಲ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೋವಿಡ್-೧೯ ನ ತುರ್ತು ಸಮಯದಲ್ಲಿ ಮುಂಚೂಣಿ ತಜ್ಞರಾಗಿ ಮುಂಬೈನ SIR HN Reliance ಹಾಸ್ಪಿಟಲ್ ಮತ್ತು ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿನ ಲ್ಲಿ ಸೇವೆಯನ್ನು ಸಲ್ಲಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಶ್ವಾಸಕೋಶದ ಆರೋಗ್ಯ ಮತ್ತು ಧೂಮಪಾನದ ಅಪಾಯದ ಕುರಿತು ಟಿವಿ ಮಾಧ್ಯಮ ಮೂಲಕ ಹಾಗೂ ಶಾಲಾ-ಕಾಲೇಜುಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿ ವಿದ್ಯಾರ್ಥಿಗಳಲ್ಲಿ ಜನ ಜಾಗೃತಿ ಮೂಡಿಸಿದ್ದಾರೆ. ಇವರು ಶ್ವಾಸಕೋಶಕ್ಕೆ ಸಂಬಂಧಿಸಿದ ಉಸಿರಾಟದ ತೊಂದರೆ, ಅಸ್ತಮಾ, ಎಲರ್ಜಿ, COPD, Tuberculosis,sleep apnea, ಕೋವಿಡ್ ಸಂಬಧಿತ ಶ್ವಾಸಕೋಶ ಸಮಸ್ಯೆಗಳು,Bronchoscopy, Lung function test  ಹಾಗೂ ತೀವ್ರ ನಿಗಾ ಘಟಕ (ICU) ಕ್ಷೇತ್ರದಲ್ಲಿ ಪರಿಣತಿ ಪಡೆದಿರುತ್ತಾರೆ. ಇವರು ಇಂಡಿಯನ್ ಚೆಸ್ಟ್ ಸೋಸೈಟಿ(ICS), ಯುರೋಪಿಯನ್ ರೆಸ್ಪಿರೇಟರಿ ಸೋಸೈಟಿ (ERS) ಇದರ ಸದಸ್ಯರಾಗಿದ್ದಾರೆ. ಅಲ್ಲದೆ ಮುಂಬೈ ಟೆಸ್ಟ್ ಸೊಸೈಟಿ (MCS) ಇದರ ಮಾಜಿ ಸೈಂಟಿಫಿಕ್ ಕೋ -ಒರ್ಡಿನೆಟರ್ ಆಗಿರುತ್ತಾರೆ. ಇವರು ಡಿ.೫ರಿಂದ ಪುತ್ತೂರಿನ ದರ್ಬೆಯ ಉಷಾ ಪಾಲಿಕ್ಲಿನಿಕ್‌ನಲ್ಲಿ ಪ್ರತಿ ಸೋಮವಾರ, ಮಂಗಳವಾರ, ಬುಧವಾರ ಸಂಜೆ 6 ರಿಂದ 8ರ ತನಕ ಹಾಗೂ ಆದಿತ್ಯವಾರ ಬೆಳಿಗ್ಗೆ 10  ರಿಂದ 11ತನಕ ಸೇವೆಗೆ ಲಭ್ಯವಿರುತ್ತಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.