ಕೊಳ್ತಿಗೆ: ಸದಸ್ಯರ ಖಾತೆಗೆ ಪ್ರಗತಿನಿಧಿ ವರ್ಗಾವಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶ್ರೀ. ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಬಿ. ಸಿ ಟ್ರಸ್ಟ್ (ರಿ.)ಪುತ್ತೂರು ಇದರ ಸ್ವ -ಸಹಾಯ ಸಂಘಗಳ ಪ್ರಗತಿನಿಧಿ ವಿತರಣೆಯನ್ನು ಸದಸ್ಯರ ಖಾತೆಗೆ ಪ್ರಗತಿನಿಧಿ ವರ್ಗಾವಣೆ ಮಾಡುವ ಕಾರ್ಯಕ್ರಮ ಡಿ.೩ರಂದು ಅರಿಯಡ್ಕ ವಲಯದ ಕೊಳ್ತಿಗೆ ಕಾರ್ಯಕ್ಷೇತ್ರದಲ್ಲಿ ನಡೆಯಿತು.

 


ಪ್ರಗತಿಪರ ಕೃಷಿಕ, ಧಾರ್ಮಿಕ, ಸಾಮಾಜಿಕ ಮುಂದಾಳು ಸತೀಶ್ ಪಾಂಬಾರು ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ಮೂಲಕ ಸಣ್ಣ ಮತ್ತು ಮಧ್ಯಮ ವರ್ಗದ ಕೃಷಿಕರನ್ನು ಮತ್ತು ಶ್ರಮಿಕರನ್ನು ಒಗ್ಗೂಡಿಸಿ ಇವರಿಗೆ ಅರ್ಥಿಕ ಸಹಾಯದ ಮೂಲಕ ಅಭಿವೃದ್ಧಿ ಹೊಂದಲು ಪ್ರೇರಣೆ ನೀಡುತ್ತಾ ಈ ಸಂದರ್ಭದಲ್ಲಿ ಇವರ ಖಾತೆಗೆ ನೇರ ಪ್ರಗತಿನಿಧಿ ವರ್ಗಾವಣೆ ಕಾರ್ಯಕ್ರಮವು ಅನುಷ್ಠಾನವಾಗಲಿ ಎಂದು ಹಾರೈಸಿದರು.

ಜಿಲ್ಲಾ ಎಂ.ಎಸ್.ಐ ಯೋಜನಾಧಿಕಾರಿಗಳಾದ ಗೋಪಾಲ ಆಚಾರ್ಯ ಖಾತೆಗೆ ನೇರ ವರ್ಗಾವಣೆಯ ವಿಧಾನಗಳು, ಮತ್ತು ಉಪಯೋಗಗಳ ಬಗ್ಗೆ ಪ್ರಸ್ತಾವಿಕ ಮಾತನಾಡಿದರು. ಯೋಜನಾಧಿಕಾರಿಗಳು ಆನಂದ ರವರು ಮಾತನಾಡಿ ತಂತ್ರಜ್ಞಾನ ಯುಗದಲ್ಲಿ ಪಾರಾದರ್ಶಕ ಮತ್ತು ವೇಗವಾಗಿ ಜನರ ಖಾತೆಗೆ ಪ್ರಗತಿನಿಧಿ ವರ್ಗಾವಣೆಯು ಮುಂದಿನ ದಿನಗಳಲ್ಲಿ ಸುಲಭವಾಗಿ ಸಾಗಲಿ ಎಂದು ಶುಭ ಹಾರೈಸಿದರು.

ಒಕ್ಕೂಟ ಪ್ರಗತಿಬಂದು ಸ್ವ. ಸಹಾಯ ಸಂಘಗಳ ವಲಯಧ್ಯಕ್ಷೆ ನವೀನಕುಮಾರಿ ಬಿ. ಡಿ, ತಾಲೂಕು ಹಣಕಾಸು ಪ್ರಬಂದರು ಜನಾರ್ಧನ್, ಪೆರ್ಲಂಪಾಡಿ ಒಕ್ಕೂಟದ ಅಧ್ಯಕ್ಷರು ವಸಂತ ದುಗ್ಗಲ, ಕೊಳ್ತಿಗೆ ಒಕ್ಕೂಟದ ಮಾಜಿ ಅಧ್ಯಕ್ಷರು ಉದಯ ಕುಮಾರ್ ಜಿ. ಕೆ, ಮೊಗಪ್ಪೆ ಒಕ್ಕೂಟದ ಅಧ್ಯಕ್ಷೆ  ವೇದಾವತಿ ಉಪಸ್ಥಿತದ್ದರು. ಇದೇ ಸಂದರ್ಭದಲ್ಲಿ ಶ್ರೀಹರಿ ಸಂಘ ಮತ್ತು ಅಂಬಿಕಾ ಸಂಘಗಳಿಗೆ ತಾಲೂಕಿನ ಪ್ರಥಮ ಸದಸ್ಯರ ಖಾತೆಗೆ ಪ್ರಗತಿನಿಧಿ ವರ್ಗಾವಣೆ ಮಾಡಲಾಯಿತು. ನಗದು ಸಹಾಯಕರಾದ  ಸೀತಾ,  ಸುಮಲತಾ, ಸುವಿಧಾ ಸಹಾಯಕಾರದ ಶ್ರೀಮತಿ ಮಂಜುಳಾ,  ಚಂದ್ರಾವತಿ, ಮೊಗಪ್ಪೆ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ  ಅರುಣಾ ಉಪಸ್ಥಿತರಿದ್ದರು. ಕೊಳ್ತಿಗೆ ಸೇವಾಪ್ರತಿನಿಧಿ  ಶಾರದಾ ಸ್ವಾಗತಿಸಿದರು. ಪೆರ್ಲಂಪಾಡಿ ಸೇವಾಪ್ರತಿನಿಧಿ ಕು. ರಮ್ಯಾ ವಂದಿಸಿದರು. ವಲಯ ಮೇಲ್ವಿಚಾರಕರು ಮೋಹನ್ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.