ಪಾಂಗಳಾಯಿ ಶ್ರೀಮುಂಡ್ಯತ್ತಾಯ ದೈವಸ್ಥಾನದದಲ್ಲಿ ಧಾರ್ಮಿಕ ಶಿಕ್ಷಣಕ್ಕೆ ಚಾಲನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಳದ ವತಿಯಿಂದ ನಡೆಸಲಾಗುವ ಧಾರ್ಮಿಕ ಶಿಕ್ಷಣದ ಕುರಿತು ಪರ್ಲಡ್ಕ ಪಾಂಗಳಾಯಿ ಶ್ರೀಮುಂಡ್ಯತ್ತಾಯ ದೈವಸ್ಥಾನದ ಸಭಾಂಗಣದಲ್ಲಿ ಸಭೆ ನಡೆಯಿತು. ಶ್ರೀಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲಾ ಧಾರ್ಮಿಕ ಕ್ಷೇತ್ರದಲ್ಲಿ ಹಿಂದು ಧಾರ್ಮಿಕ ಜಾಗೃತಿಯನ್ನು ಮೂಡಿಸುವಲ್ಲಿ ಮುಖ್ಯವಾಗಿ ಮಾತೆಯರಿಗೆ, ಮಕ್ಕಳಿಗೆ ಶಿಕ್ಷಣವನ್ನು ನೀಡುವಲ್ಲಿ ಹಿಂದು ಧರ್ಮದ ಆಚಾರ-ವಿಚಾರ, ಸಂಸ್ಕೃತಿ ಕುರಿತು ಧಾರ್ಮಿಕತೆಯನ್ನು ಭೋಧಿಸಲಾಗುವುದು. ಅಲ್ಲದೆ 6 ತಿಂಗಳು ನಂತರ ವಿದ್ಯಾರ್ಥಿಗಳಿಗೆ ಈ ವಿಚಾರದ ಬಗ್ಗೆ ಪರೀಕ್ಷೆ ನಡೆಸಿ ಫಲಿತಾಂಶವನ್ನು ಉತ್ತೇಜನಕ್ಕಾಗಿ ನೀಡಲಾಗುವುದೆಂದರು.

ಪ್ರಥಮ ಹಂತದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಳದ ಸನ್ನಿಧಿಯಲ್ಲಿ ಧಾರ್ಮಿಕ ಶಿಕ್ಷಣ ನಡೆಸುವುದರೊಂದಿಗೆ ಎರಡನೇ ಹಂತವಾಗಿ ಇಲ್ಲಿಯ ಶ್ರೀಮುಂಡ್ಯತ್ತಾಯ ದೈವಸ್ಥಾನದ ಸಭಾಂಗಣದಲ್ಲಿ ನಡೆಸುವುದರೊಂದಿಗೆ ಈ ಕಾರ್ಯಕ್ರಮದ ಚಾಲನೆಯನ್ನು ಎಲ್ಲಾ ಧಾರ್ಮಿಕ ಕ್ಷೇತ್ರದಲ್ಲಿ ನೀಡಲಾಗುವುದೆಂದು ತಿಳಿಸಿದರು. ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಹಾಗೂ ಶಿಕ್ಷಕ ಐತ್ತಪ್ಪ ನಾಯ್ಕರವರು ಮಾತನಾಡಿ ಈಗಾಗಲೇ ಧಾರ್ಮಿಕ ಶಿಕ್ಷಣ ವತಿಯಿಂದ ಸುಮಾರು 2,000 ಪುಸ್ತಕವನ್ನು ಹಿಂದು ಧರ್ಮದ ಬಗ್ಗೆ ಪ್ರಕಟಿಲಾಗಿದೆ. ಇದರ ಸದ್‌ಬಳಕೆ ಧಾರ್ಮಿಕ ಕ್ಷೇತ್ರದಲ್ಲಿ ನೀಡಲಾಗುವುದೆಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಕೃಷ್ಣವೇಣಿ ಮುಳಿಯ ಮಾತನಾಡಿ ಈ ತರಬೇತಿಯ ಕುರಿತು ಧಾರ್ಮಿಕತೆಯ ರೂಪರೇಖೆಗಳನ್ನು ಹಿಂದೆ ಹಿರಿಯರು ನಮಗೆ ಬೋಧಿಸಿದ ಪುರಾಣಕತೆ, ಮಹಾಭಾರತ, ಭಗವದ್ಗೀತೆ, ಧರ್ಮದ ಬಗ್ಗೆ ಕಥೆ, ಪೂಜೆ, ಭಜನೆ, ಸಂಗೀತ ಮುಂತಾದುವುಗಳ ಬಗ್ಗೆ ತಿಳಿಸಲಾಗುವುದು. ನಮ್ಮ ಸಂಸ್ಕೃತಿಯ ಬಗ್ಗೆ ಆಚಾರ-ವಿಚಾರ ಮಂಥನವನ್ನು ಮಾಡಬೇಕಾಗಿರುವುದರಿಂದ ಈ ಎಲ್ಲಾ ದೃಷ್ಟಿಕೋನ ಇಟ್ಟುಕೊಂಡು ಈ ತರಬೇತಿಗಳನ್ನು ನಡೆಸಲಾಗುವುದು ಮತ್ತು ಪ್ರತಿಭೆಗಳಿಗೆ ವೇದಿಕೆಗಳನ್ನು ಅವಕಾಶ ಕಲ್ಪಿಸುವುದು ಇದರೊಂದಿಗೆ ವಾಟ್ಸಾಪ್ ಗ್ರೂಪ್ ಮಾಡುವುದರೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ದೈವಸ್ಥಾನದ ಅಧ್ಯಕ್ಷ ವಿನಯ ಭಂಡಾರಿ ಮಾತನಾಡಿ ದೈವಸ್ಥಾನದ ಸಭಾಂಗಣದಲ್ಲಿ ೨ನೇ ಹಂತದಲ್ಲಿ ಧರ್ಮ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಈ ತರಬೇತಿ ಅಯೋಜಿಸಿರುವುದಕ್ಕೆ ಶುಭಹಾರೈಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ತಾರಾನಾಥ ರೈ ಬಿ., ಕಾರ್ಯದರ್ಶಿ ಪುರುಷೋತ್ತಮ ನಾಕ್, ಜತೆ ಕಾರ್ಯದರ್ಶಿ ಶಿವಕುಮಾರ್ ಕಲ್ಲಿಮಾರ್ ಉಪಸ್ಥಿತರಿದ್ದರು. ಶ್ರೀಮುಂಡ್ಯತ್ತಾಯ ದೈವಸ್ಥಾನ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಭಾಗವಹಿಸಿ ಸಲಹೆ-ಸೂಚನೆ ನೀಡಿದರು. ಸಂಪತ್‌ಕುಮಾರ್ ಬಿ. ಸ್ವಾಗತಿಸಿ, ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.