ರೋಟರಿ ಕ್ಲಬ್ ಪುತ್ತೂರು ಸ್ವರ್ಣಕ್ಕೆ ಜಿಲ್ಲಾ ಗವರ್ನರ್ ರವೀಂದ್ರ ಭಟ್ ಅಧಿಕೃತ ಭೇಟಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ವ್ಯವಹಾರಿಕವಾಗಿ ಸದಸ್ಯರು ರೋಟರಿಯನ್ನು ಬಳಸಿಕೊಂಡಾಗ ವೃದ್ಧಿ-ಎ.ಆರ್. ರವೀಂದ್ರ ಭಟ್

ಪುತ್ತೂರು: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸದಸ್ಯರು ರೋಟರಿ ಕ್ಲಬ್‌ನಲ್ಲಿದ್ದಾರೆ. ತಮ್ಮ ವ್ಯವಹಾರಗಳನ್ನು ಕ್ಲಬ್‌ನ ಸದಸ್ಯರೊಂದಿಗೆ ಪರಸ್ಪರ ವಿನಿಮಯ ಮಾಡಿಕೊಂಡು ವ್ಯವಹಾರಿಕವಾಗಿಯೂ ರೋಟರಿಯನ್ನು ಬಳಸಿಕೊಳ್ಳಬೇಕು. ಆಗ ಸದಸ್ಯರೊಂದಿಗೆ ಬಾಂಧವ್ಯತೆ ವೃದ್ಧಿಯಾಗಿ ವ್ಯವಹಾರಿಕವಾಗಿಯೂ ಬೆಳೆಯಲು ರೋಟರಿ ಸಹಕಾರಿಯಾಗಲಿದೆ. ರೋಟರಿಯಂದ ಏನು ಪ್ರಯೋಜನ ಎನ್ನುವವರಿಗೂ ಅರ್ಥವಾಗಲಿದೆ ಎಂದು ರೋಟರಿ ಕ್ಲಬ್ ವಲಯ 5ರ ಜಿಲ್ಲಾ ಗವರ್ನರ್ ಎ.ಆರ್ ರವೀಂದ್ರ ಭಟ್ ಹೇಳಿದರು.

ನೆಹರುನಗರದ ಸುದಾನ ಶಾಲಾ ಎಡ್ವರ್ಡ್ ಹಾಲ್‌ನಲ್ಲಿ ದ.2ರಂದು ಸಂಜೆ ನಡೆದ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸ್ವರ್ಣಕ್ಕೆ ರೋಟರಿ ಜಿಲ್ಲಾ ಗವರ್ನರ್ ಎ.ಆರ್ ರವೀಂದ್ರ ಭಟ್ ರವರ ಅಧಿಕೃತ ಭೇಟಿ ನೀಡಿ, ಕ್ಲಬ್‌ನಿಂದ ಹಮ್ಮಿಕೊಂಡ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು. ರೋಟರಿ ಕ್ಲಬ್‌ನಲ್ಲಿ ಸೇವೆ ಮಾಡುವಂತ ಜನರಿದ್ದಾರೆ. ಕ್ಲಬ್‌ಗೆ ಸೇರ್ಪಡೆಗೊಂಡು ಮಾಡುವ ಸೇವೆ ಮುಖ್ಯ. ಅದರಿಂದ ನಮಗೆ ಪ್ರಯೋಜನವೇನು ಎನ್ನುವುದು ಮುಖ್ಯವಲ್ಲ. ರೋಟರಿ ಕ್ಲಬ್‌ಗೆ 110 ವರ್ಷಗಳ ಇತಿಹಾಸವಿದೆ. ಕಳೆದ ಕೋವಿಡ್ ಸಂದರ್ಭದಲ್ಲಿ ರೋಟರಿ ಮುಖಾಂತರ ರೂ.380ಕೋಟಿಯನ್ನು ಪಿ.ಎಂ ಕೇರ್ ಫಂಡ್‌ಗೆ ದೇಣಿಗೆ ನೀಡಲಾಗಿದೆ. ವಿದ್ಯಾಸೇತು ಯೋಜನೆಯ ಮೂಲಕ 12ಲಕ್ಷ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಪರಿಸರ ಜಾಗೃತಿ ನೀಡುವ ಯೋಜನೆಯಲ್ಲಿ ಲಕ್ಷಾಂತರ ಬಿದಿರು ಬೀಜವನ್ನು ವಿತರಿಸಿ ಪರಸರ ಸಂರಕ್ಷಣೆಗೆ ಆಧ್ಯತೆ ನೀಡಿರುತ್ತದೆ ಎಂದರು.

ರೋಟರಿ ಸ್ವರ್ಣ ಹೆಸರಿಗೆ ಸಾರ್ಥಕತೆ:
ರೋಟರಿ ಕ್ಲಬ್ ಪುತ್ತೂರು ಸ್ವರ್ಣವು ಈ ವರ್ಷ ಹಲವು ಜನಪರವಾದ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ರೋಟರಿ ಕ್ಲಬ್ ಪುತ್ತೂರು ಸ್ವರ್ಣವು ಸ್ವರ್ಣದಂತ ಸೇವೆ ಸಲ್ಲಿಸಿದೆ. ತಮ್ಮ ಸೇವಾ ಕಾರ್ಯಗಳ ಮೂಲಕ ರೋಟರಿ ಸ್ವರ್ಣ ಹೆಸರಿಗೆ ಸಾರ್ಥಕತೆ ದೊರೆತಿದೆ ಎಂದು ಕ್ಲಬ್ ಸೇವಾ ಕಾರ್ಯಗಳ ಬಗ್ಗೆ ರೋಟರಿ ಕ್ಲಬ್ ವಲಯ ೫ರ ಜಿಲ್ಲಾ ಗವರ್ನರ್ ಎ.ಆರ್ ರವೀಂದ್ರ ಭಟ್ ಮೆಚ್ಚುಗೆ ವ್ಯಕ್ತಪಡಿಸಿದರು.

ಎಲ್ಲಾ ಕ್ಲಬ್‌ಗಳು ಒಂದಕ್ಕೊಂದು ಭಿನ್ನ:
ಬುಲೆಟಿನ್ ಬಿಡುಗಡೆ ಮಾಡಿದ ವಲಯ 5ರ ಸಹಾಯಕ ಗವರ್ನರ್ ಜಿತೇಂದ್ರ ಎನ್.ಎ. ಮಾತನಾಡಿ, ಎಲ್ಲಾ ಕ್ಲಬ್‌ಗಳು ಒಂದಕ್ಕೊಂದು ಭಿನ್ನವಾಗಿದೆ. ವಿಭಿನ್ನ ಸಮಾಜ ಸೇವಾ ಕಾರ್ಯಕ್ರಮಗಳ ಮೂಲಕ ಒಂದು ಕ್ಲಬ್‌ನಿಂದ ಇನ್ನೊಂದು ಕ್ಲಬ್‌ನಲ್ಲಿ ಹೊಸ ಹೊಸ ಅನುಭವ, ಯೋಜನೆಗಳು ದೊರೆಯುತ್ತಿದ್ದು ರೋಟರಿ ಕ್ಲಬ್‌ನಿಂದ ಸಮಾಜಕ್ಕೆ ದೊರೆಯುವ ಪ್ರಯೋಜನಗಳ ಬಗ್ಗೆ ವಿವರಿಸಿದರು.

ಅಧ್ಯಕ್ಷರ ಕನಸಿನ ಯೋಜನೆ ಯಶಸ್ವಿಯಾಗಿ ಮನ್ನಡೆ:
ವಲಯ 5 ಕಾರ್ಯದರ್ಶಿ ಅಬ್ಬಾಸ್ ಮುರ ಮಾತನಾಡಿ, ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸುವ ಹಿರಿಯ ನಾಗರಿಕರಿಗೆ ಉಚಿತ ಸೇವೆ ನೀಡುವ ಅಧ್ಯಕ್ಷರ ಕನಸಿನ ಯೋಜನೆಯಾದ `ಊರುಗೋಳು’ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಜೊತೆಗೆ ಕ್ಲಬ್‌ನ `ವಿದ್ಯಾಸೇತು’ ಯೋಜನೆಯು ಪರಿಣಾಮ ಕಾರಿಯಾಗಿ ಜನರಿಗೆ ತಲುತ್ತಿದೆ ಎಂದರು.

ಕನಸಿನ ಯೋಜನೆಗಳ ಹಸ್ತಾಂತರ:
ಕ್ಲಬ್‌ನ ಅಧ್ಯಕ್ಷ, ನ್ಯಾಯವಾದಿ ಭಾಸ್ಕರ ಕೋಡಿಂಬಾಳ ಮಾತನಾಡಿ, ಕ್ಲಬ್‌ನ ಕನಸಿನ ಯೋಜನೆಯಾಗಿ 75ನೇ ಸ್ವಾತಂತ್ರಯೋತ್ಸವದ ಅಂಗವಾಗಿ ಪಡ್ಡಾಯೂರಿನಲ್ಲಿ 75 ಬಗೆಯ ಔಷಧಿ ಗಿಡಗಳಿರುವ ಸ್ವರ್ಣ ಸಂಜೀವಿನಿ ಔಷಧಿವನ ನಿರ್ಮಿಸಲಾಗಿದೆ. ಇದಕ್ಕೆ ನಗರ ಸಭೆ, ಸ್ಥಳೀಯ ಸಂಸ್ಥೆಗಳು ಕೈಜೋಡಿಸಿದೆ. ಕೈಕಾರ ಶಾಲೆಗೆ ನೀರಿನ ಟ್ಯಾಂಕ್ ಹಾಗೂ ಕೈ ತೊಳೆವ ಘಟಕ, ಭಿನ್ನ ಸಾಮರ್ಥ್ಯದ ಮಕ್ಕಳಿರುವ ಬಿರುಮಲೆಯ ಪ್ರಜ್ಞಾ ಕೇಂದ್ರಕ್ಕೆ ಶೌಚಾಲಯ ನಿರ್ಮಾಣ, ಮಧ್ಯಾಹ್ನ ಭೋಜನವನ್ನು ಒದಗಿಸಲಾಗಿದೆ. ಇನ್ನೂ ಹಲವಾರು ಸಮಾಜ ಸೇವೆಗಳನ್ನು ನಡೆಸುವ ಯೋಜನೆಯಿಂದೆ ಎಂದ ಅವರು ರೋಟರಿ ಕ್ಲಬ್ ಸ್ವರ್ಣ ಸಣ್ಣ ಕ್ಲಬ್ ಅಲ್ಲ. ಈಗ ಮಧ್ಯಮ ಕ್ಲಬ್ ಆಗಿದೆ. ಅವಕಾಶ ದೊರೆತರೆ ಇನ್ನೊಂದು ಕ್ಲಬ್‌ನ್ನು ರಚಿಸಲಾಗುವುದು ಎಂದರು.

 

ಜಿಲ್ಲಾ ಗವರ್ನರ್ ಎ.ಆರ್ ರವೀಂದ್ರ ಭಟ್‌ರವರ ಪತ್ನಿ ಸ್ಮಿತಾ, ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷೆ ಸೆನೋರಿಟಾ ಆನಂದ್, ಜಿಎಸ್‌ಆರ್ ಚಿದಾನಂದ ಬೈಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

ಸ್ವರ್ಣ ಪ್ರಶಸ್ತಿ ಪ್ರದಾನ, ಸನ್ಮಾನ
ಸಾಹಿತಿ, ರಂಗಕರ್ಮಿಯಾಗಿರುವ ಸಂಜಯನಗರ ಶಾಲಾ ಶಿಕ್ಷಕ ರಮೇಶ್ ಉಳಯರವರಿಗೆ 2020-21ನೇ ಸಾಲಿನ ರೋಟರಿ ಸ್ವರ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲಾ ಗವರ್ನರ್ ಎ.ಆರ್ ರವೀಂದ್ರ ಭಟ್ ಹಾಗೂ ಸ್ಮಿತಾ ರವೀಂದ್ರ ಭಟ್ ದಂಪತಿಯನ್ನು ಸನ್ಮಾನಿಸಲಾಯಿತು. ಪ್ರಾಯೋಜಕರಾದ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಎಂ.ಜಿ ರಫೀಕ್, ಮಾಜಿ ಸಹಾಯಕ ಗವರ್ನರ್ ಆಸ್ಕರ್ ಆನಂದ್, ಕೆ,ಆರ್ ಶೆಣೈಯವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಬುಲೆಟಿನ್ ಬಿಡುಗಡೆ:
ಕ್ಲಬ್‌ನ ವಿಶೇಷ ಸಂಚಿಕೆ `ಸ್ವರ್ಣ ಬಿಂಬ’ವನ್ನು ವಲಯ 5ರ ಸಹಾಯಕ ಗವರ್ನರ್ ಜಿತೇಂದ್ರ ಎನ್.ಎ., ಬಿಡುಗಡೆ ಮಾಡಿದರು. ಸಂಪಾದಕಿ ಸಂಧ್ಯಾ ಬೈಲಾಡಿ ಉಪಸ್ಥಿತರಿದ್ದರು.

ಟಿಆರ್‌ಎಫ್ ದೇಣಿಗೆ:
ಟಿಆರ್‌ಎಫ್‌ಗೆ ಕ್ಲಬ್‌ನಿಂದ ಸಂಗ್ರಹವಾದ ದೇಣಿಗೆಯ ಚೆಕ್‌ನ್ನು ಅಧ್ಯಕ್ಷ ಭಾಸ್ಕರ ಕೋಡಿಂಬಾಳ ಹಾಗೂ ಟಿಆರ್‌ಪಿ ನಿರ್ದೇಶಕ ಅಶೋಕ್ ಆಚಾರ್ಯ ರವರು ಜಿಲ್ಲಾ ಗವರ್ನರ್ ರವೀಂದ್ರ ಭಟ್‌ರವರಿಗೆ ಹಸ್ತಾಂತರಿಸಿದರು.

ಜಿಲ್ಲಾ ಗವರ್ನರ್ ಭೇಟಿ ಹೀಗಿತ್ತು!
ಪುತ್ತೂರಿಗೆ ಆಗಮಿಸಿದ ಜಿಲ್ಲಾ ಗವರ್ನರ್‌ರವರು ಪ್ರಾರಂಭದಲ್ಲಿ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಕ್ಲಬ್ ಕಾರ್ಯದರ್ಶಿ ಆನಂದ ಮೂವಪ್ಪುರವರ ನಿವಾಸದಲ್ಲಿ ಉಪಾಹಾರ, ಪಡ್ಡಾಯೂರಿನಲ್ಲಿ ಕ್ಲಬ್‌ನ ವತಿಯಿಂದ ನಿರ್ಮಿಸಲಾದ `ಸ್ವರ್ಣ ಸಂಜೀವಿನಿ’ ಔಷಧಿ ವನ ಲೋಕಾರ್ಪಣೆ, ಪಡ್ಡಾಯೂರು ಅಂಗನವಾಡಿ ಕೇಂದ್ರದ ಪುಟಾಣಿಗಳಿಗೆ ಪಾದರಕ್ಷೆ ವಿತರಣೆ, ಕೈಕಾರ ಸರಕಾರಿ ಹಿ.ಪ್ರಾ ಶಾಲೆಗೆ ನೀರಿನ ಟ್ಯಾಂಕ್ ಹಾಗೂ ಕೈ ತೊಳೆಯುವ ಘಟಕ ಹಸ್ತಾಂತರ, ಬಿರುಮಲೆ ಬೆಟ್ಟದಲ್ಲಿ ಕಾರ್ಯನಿರ್ವಹಿಸುವ ಪ್ರಜ್ಞಾ ವಿಕಲಚೇತರ ಕೇಂದ್ರದಲ್ಲಿ ಶೌಚಾಲಾಯ ಲೋಕಾರ್ಪಣೆ, ಮಧ್ಯಾಹ್ನದ ಭೋಜನ, ಅಪರಾಹ್ನ ರೋಟರಿ ಟ್ರಸ್ಟ್ ಹಾಲ್‌ನಲ್ಲಿ ನಡೆಯುವ ಕ್ಲಬ್ ಎಸ್ಸೆಂಬ್ಲಿ ಹಾಗೂ ಸಂಜೆ ಸುದಾನ ಶಾಲಾ ಎಡ್ವರ್ಡ್ ಹಾಲ್‌ನಲ್ಲಿ ಅಧಿಕೃತ ಭೇಟಿಯ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

 

ಅಶೋಕ್ ಆಚಾರ್ಯ ಪ್ರಾರ್ಥಿಸಿದರು. ಅಧ್ಯಕ್ಷ ಭಾಸ್ಕರ ಕೋಡಿಂಬಾಳ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಆಶಾ ರೆಬೆಲ್ಲೋ ಜಿಲ್ಲಾ ಗವರ್ನರ್ ಪರಿಚಯ ಮಾಡಿದರು. ಉದಯ ಕುಮಾರ್ ಕರ್ಮಲ, ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಮೂರ್ತಿ ಹಾಗೂ ಮನೋಹರ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಆನಂದ ಮೂವಪ್ಪು ವರದಿ ವಾದಿಸಿ, ವಂದಿಸಿದರು. ವೃತ್ತಿಪರ ನಿರ್ದೇಶಕ ವೆಂಕಟ್ರಮಣ ಕಲುವಾಜೆ, ಸಮಾಜ ಕಾರ್ಯವಿಭಾಗದ ಸುರೇಂದ್ರ ರೈ, ಹಾಗೂ ಕ್ಲಬ್‌ನ ನಿರ್ದೇಶಕ ಸುರೇಂದ್ರ ಆಚಾರ್ಯ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.