ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕ ರಬ್ಬರ್ ಟ್ಯಾಪಿಂಗ್ ಉಚಿತ ತರಬೇತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ರಬ್ಬರ್ ಕೃಷಿಯಲ್ಲಿ ದುಪ್ಪಟ್ಟು ಲಾಭ ಪಡೆಯುವ ವಿಧಾನಗಳ ಪ್ರಾತ್ಯಕ್ಷಿಕೆ

 

ಪುತ್ತೂರು: ರಬ್ಬರ್ ಬೆಳೆಗಾರರು ರಬ್ಬರ್ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿ ಹೆಚ್ಚಿನ ಲಾಭ ಪಡೆಯುವ ನಿಟ್ಟಿನಲ್ಲಿ ವೈಜ್ಞಾನಿಕ ರಬ್ಬರ್ ಟ್ಯಾಪಿಂಗ್ ಉಚಿತ ತರಬೇತಿ .ಮತ್ತು ತಾಲೂಕು ಮಟ್ಟದ ಕಾರ್ಯಾಗಾರ ಕೆಯ್ಯೂರು ಕೆದಂಬಾಡಿ ರಬ್ಬರ್ ಉತ್ಪಾದಕರ ಸಂಘದ ಸಹಯೋಗದೊಂದಿಗೆ ದ. 3 ರಂದು ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ನಡೆಯಿತು. ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ರಬ್ಬರ್ ಶೀಟ್ ಬಿಡಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ `ಇತರ ಕೃಷಿಗಳಿಗಿಂತ ರಬ್ಬರ್ ಕೃಷಿ ವಿಭಿನ್ನವಾದುದು. ಇಲ್ಲಿ ಮಾಲಕ ಮತ್ತು ನೌಕರ ಜೊತೆಜೊತೆಯಾಗಿ ಕೆಲಸ ಮಾಡಬೇಕಾಗುತ್ತದೆ. ದಿನದಿನದ ಆದಾಯ ಲೆಕ್ಕಾಚಾರ ಮಾಡಬಹುದಾದ ರಬ್ಬರ್ ಕೃಷಿಯಲ್ಲಿ ವೈಜ್ಞಾನಿಕ ಮತ್ತು ಶಾಶ್ವತವಾದ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ದುಪ್ಪಟ್ಟು ಲಾಭ ಪಡೆಯಬಹುದು’ ಎಂದು ಹೇಳಿ ಶುಭ ಹಾರೈಸಿದರು. ಕೆಯ್ಯೂರು ಕೆದಂಬಾಡಿ ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ಎ.ಕೆ. ಜಯರಾಮ ರೈ ಅಧ್ಯಕ್ಷತೆ ವಹಿಸಿ ತರಬೇತಿಯ ಪ್ರಾಮುಖ್ಯತೆಯ ಬಗ್ಗೆ ಹೇಳಿದರು.


ಪುತ್ತೂರಿನ ರಬ್ಬರ್ ಪ್ರಾದೇಶಿಕ ಕಛೇರಿಯ ಅಧಿಕಾರಿ ಚಂದ್ರನ್ ಕಾರತ್ ತರಬೇತಿ ನೀಡಿ ರಬ್ಬರ್ ಟ್ಯಾಪಿಂಗ್‌ನಲ್ಲಿ ಬೆಳೆಗಾರರು ಮತ್ತು ಟ್ಯಾಪರ್‌ಗಳು ಮಾಹಿತಿ ಮತ್ತು ತರಬೇತಿಯ ಕೊರತೆಯಿಂದ ಮಾಡುತ್ತಿರುವ ತಪ್ಪುಗಳನ್ನು ಹೇಳಿದರು. ರಬ್ಬರ್ ಹಾಲು ಮಿಶ್ರಣ ಮಾಡುವ ವಿಧಾನಗಳನ್ನು ಹೇಳಿ ಟ್ಯಾಪಿಂಗ್ ಪ್ರಾತ್ಯಕ್ಷಿಕೆಯಲ್ಲಿ ಉತ್ತಮ ಪ್ರತಿಫಲಕ್ಕಾಗಿ ಮಾಡಬಹುದಾದ ಸುಲಭ ಮತ್ತು ವೈಜ್ಞಾನಿಕ ವಿಧಾನಗಳನ್ನು ತೋರ್ಪಡಿಸಿದರು. ಸಹಾಯಕ ಅಭಿವೃದ್ಧಿ ಅಧಿಕಾರಿ ಶೋಭಾನ ಉಪಸ್ಥಿತರಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಡಮಜಲು ಸುಭಾಸ್ ರೈಯವರು `ಅಡಿಕೆ, ಗೇರು ಕೃಷಿಯಲ್ಲಿ ನಾವು ಸಾಕಷ್ಟು ಪರಿಣತರಾಗಿದ್ದೇವೆ. ಆದರೆ ರಬ್ಬರ್ ಟ್ಯಾಪಿಂಗ್ ಮತ್ತು ಶೀಟ್ ಮಾಡುವಲ್ಲಿ ಇನ್ನೂ ಸಂಪೂರ್ಣವಾಗಿ ನಾವು ತರಬೇತಿ ಹೊಂದಿಲ್ಲ. ಹಾಗಾಗಿ ಎಲ್ಲಾ ರಬ್ಬರ್ ಕೃಷಿಕರ ಉಪಯೋಗಕ್ಕಾಗಿ ಈ ತರಬೇತಿ ಹಮ್ಮಿಕೊಳ್ಳಲಾಗಿದೆ’ ಎಂದರು. ಚೊಕ್ಕಲಿಂಗಂರವರು ಟ್ಯಾಪಿಂಗ್ ಪ್ರಾತ್ಯಕ್ಷಿಕೆ ವೇಳೆ ಸಹಕರಿಸಿದರು. ಪ್ರೀತಿ ಎಸ್. ರೈ ಸತ್ಕರಿಸಿದರು. ಬೆಳಿಗ್ಗೆ ಲಘು ಉಪಾಹಾರ ಮತ್ತು ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಗ್ರಾಮಜನ್ಯ ಜೇನು ಕೃಷಿ ಮಾಹಿತಿ
ಇದೇ ವೇಳೆ ಗ್ರಾಮಜನ್ಯ ಎಂಬ ಜೇನು ಕುಟುಂಬ ನಿರ್ವಹಣೆಯ ಕುರಿತು ಮಾಹಿತಿ ನೀಡಲಾಯಿತು. ರಾಮ್‌ಪ್ರತೀಕ್ ಮಾಹಿತಿ ನೀಡಿದರು. ಶರತ್ ಮತ್ತು ಕೇಶವ್ ಸಹಕರಿಸಿದರು.


ಹಳೆಯ ವಿಧಾನಗಳಿಂದ ಕೃಷಿಕನಿಗೆ ನಷ್ಟ
ರಬ್ಬರ್ ಟ್ಯಾಪಿಂಗ್ ಮತ್ತು ಸಂಸ್ಕರಣೆಯಲ್ಲಿ ಅನೇಕ ನೂತನ ಸುಲಭ ವಿಧಾನಗಳಿವೆ. ಈಗ ರಬ್ಬರ್ ಬೆಳೆಗಾರರಿಗೆ ಮಾಹಿತಿ ಕೊರತೆಯಿದೆ. ಟ್ಯಾಪರ್‍ಸ್‌ಗಳು ಹಳೆಯ ಮಾದರಿಯಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಇದರಿಂದ ಕೃಷಿಕ ಆರ್ಥಿಕ ನಷ್ಟಕ್ಕೆ ಒಳಗಾಗುತ್ತಿದ್ದಾನೆ. ಹೊಸ ವಿಧಾನಗಳ ತರಬೇತಿಯಿಂದ ಇರುವ ಕೃಷಿಯಲ್ಲಿಯೇ ದುಪ್ಪಟ್ಟು ಲಾಭ ಪಡೆಯಬಹುದಾಗಿದೆ – ಚಂದ್ರನ್ ಕಾರತ್ ರಬ್ಬರ್ ಪ್ರಾದೇಶಿಕ ಅಧಿಕಾರಿ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.