ಡಿ 5- ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದಿಂದ ಸಾಮೂಹಿಕ ಶ್ರೀ ಗುರುಪಾದ ಪೂಜೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಶ್ರೀ ದುರ್ಗಾ ನಮಸ್ಕಾರ ಪೂಜೆ – ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಯವರ ಆಗಮನ

ಪುತ್ತೂರು: ದ.ಕ ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದ ವತಿಯಿಂದ ಶ್ರೀಮಾತ್ ಆನೆಗುಂದಿ ಜಗದ್ಗುರು ಮಹಾ ಸಂಸ್ಥಾನಮ್ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಶ್ರೀ ವಿಶ್ವೇಶ್ವರ ಪುರೋಹಿತರ ಆಚಾರ್ಯತ್ವದಲ್ಲಿ ಸಾಮೂಹಿಕ ಶ್ರೀ ಗುರುಪಾದ ಪೂಜೆ ಮತ್ತು ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಪೂಜೆಯು ಪುತ್ತೂರು ಬೊಳುವಾರು ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ಡಿ ೫ರಂದು ನಡೆಯಲಿದೆ. ಬೆಳಿಗ್ಗೆ ಗಂಟೆ ೮-೦೦ರಿಂದ ಪ್ರಾರಂಭಗೊಂಡು ಈ ಕಾರ್ಯಕ್ರಮವು ಸಂಜೆ ಗಂಟೆ ೬-೩೦ಕ್ಕೆ ಸಮಾಪ್ತಿಗೊಳ್ಳಲಿದೆ. ಬೆಳಿಗ್ಗೆ ಗಣಹೋಮ ನಡೆದು, ಬೆಳಿಗ್ಗೆ ಗಂಟೆಗೆ ೯-೪೫ಕ್ಕೆ ಆಗಮಿಸಲಿರುವ ಶ್ರೀ ಗುರುಗಳನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗುವುದು. ಬೆಳಿಗ್ಗೆ ಗಂಟೆ ೧೦-೦೦ರಿಂದ ಶ್ರೀ ಗುರುಪಾದ ಪೂಜೆ ನಡೆಯಲಿದ್ದು, ಬಳಿಕ ಗಂಟೆ ೧೧-೩೦ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಮಾತ್ ಆನೆಗುಂದಿ ಜಗದ್ಗುರು ಮಹಾ ಸಂಸ್ಥಾನಮ್ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಯವರು ಆಶೀರ್ವಚನ ನೀಡಲಿದ್ದಾರೆ. ದ.ಕ ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದ ಅಧ್ಯಕ್ಷರಾದ ಜನಾರ್ದನ ಆಚಾರ್ಯ ಕಾಣಿಯೂರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಲ್ಕಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕುಸುಮಾಧರ ಆಚಾರ್ಯ, ಮಂಗಳೂರು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಹಾಯಕ ಅಭಿಯಂತರರಾದ ಶಿವಪ್ರಸನ್ನ ಡಿ.ಎಂ, ಕಡಬ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಕೆ.ಎಸ್.ದಿನೇಶ್ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ಗಂಟೆ ೪-೦೦ರಿಂದ ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ ಪ್ರಾರಂಭಗೊಂಡು ಸಂಧ್ಯಾಕಾಲ ೬-೩೦ಕ್ಕೆ ಮಹಾಪೂಜೆ ಅಷ್ಠಾವಧಾನ, ಪ್ರಾರ್ಥನೆ, ಬ್ರಹ್ಮಾರ್ಪಣೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು, ಗೌರವಾಧ್ಯಕ್ಷ ನಲ್ಕ ಗೋಪಾಲಕೃಷ್ಣ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಕೆ.ಆರ್.ಸಂಜೀವ ಆಚಾರ್ಯ, ಗೌರವ ಸಲಹೆಗಾರರಾದ ಉದಯಕುಮಾರ್ ಆಚಾರ್ಯ ಕೆಮ್ಮಾಯಿ, ಪ್ರಭಾಕರ ಆಚಾರ್ಯ ನೆಹರುನಗರ, ಕಾರ್ಯಧ್ಯಕ್ಷೆ ಪ್ರಭಾಹರೀಶ ಆಚಾರ್ಯ ಪರ್ಲಡ್ಕ, ಕೋಶಾಧಿಕಾರಿ ಸಂತೋಷ್ ಆಚಾರ್ಯ ಕಡೇಶ್ವಾಲ್ಯ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.