ಕರ್ನಾಟಕ ಮುಸ್ಲಿಂ ಜಮಾಅತ್ ಕಡಬ ತಾಲೂಕು ಸಮಿತಿಯಿಂದ ಕೂರತ್‌ನಲ್ಲಿ ಸದಸ್ಯತ್ವ ಅಭಿಯಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಕರ್ನಾಟಕ ಮುಸ್ಲಿಂ ಜಮಾಅತ್ ಕಡಬ ತಾಲೂಕು ಘಟಕದ ವತಿಯಿಂದ ಸದಸ್ಯತ್ವ ಅಭಿಯಾನ ಕೂರತ್ ಅಲ್ ಫಝಲ್ ಜುಮಾ ಮಸೀದಿಯಲ್ಲಿ ಡಿ.2ರಂದು ನಡೆಯಿತು. ಕರ್ನಾಟಕ ಮುಸ್ಲಿಂ ಜಮಾಅತ್‌ನ ಗೌರವಾಧ್ಯಕ್ಷರು, ಖಾಝಿಯೂ ಆಗಿರುವ ಸಯ್ಯದ್ ಫಝಲ್ ಕೋಯಮ್ಮ ತಂಙಳ್‌ರವರು ಕಾರ್ಯಕ್ರಮ ಉದ್ಘಾಟಿಸಿ ದುವಾಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಮುಸ್ಲಿಂ ಜಮಾಅತ್ ಕಡಬ ತಾಲೂಕು ಅಧ್ಯಕ್ಷ ಸೈಯ್ಯದ್ ಮೀರಾ ಸಾಹೇಬ್ ಅವರು ಸದಸ್ಯತ್ವ ಅಭಿಯಾನದ ವಿಚಾರವಾಗಿ ಮಾತನಾಡಿದರು. ಕೂರತ್ ಮಸೀದಿಯ ಅಧ್ಯಕ್ಷ ಅಬೂಬಕ್ಕರ್ ಶುಭ ಹಾರೈಸಿದರು. ನಝೀರ್ ಕೂರತ್, ಸುಲೈಮಾನ್ ಅನ್ನಾಡಿ, ರಝಾಕ್ ಜನತಾಗ್ರಹ, ಸಜ್ಜಾದ್ ನಂಜಲ್ತಡ್ಕ, ರಝಾಕ್ ಮೇಸ್ತ್ರಿ, ಅಬ್ದುಲ್ ಹಮೀದ್, ಅಬ್ದುಲ್ ಜಬ್ಬಾರ್, ಅಬ್ದುಲ್ ರಝಾಕ್ ಎಂ , ಬಾವ ನಂಜಲ್ತಡ್ಕ, ಸುಲೈಮಾನ್, ಅಬ್ದುಲ್ಲಾ ನೂಜಿಲಡ್ಕ, ಅಲ್ತಾಫ್, ನೌಶಾದ್, ರಫೀಕ್, ಅಶ್ರಫ್ ಸೇರಿದಂತೆ ಸುಮಾರು ೮೦ ಕ್ಕೂ ಅಧಿಕ ಮಂದಿ ಸದಸ್ಯತ್ವ ಸ್ವೀಕರಿಸಿದರು. ಮಹಮ್ಮದ್ ಇಲ್ಯಾಸ್ ಅಮ್ಜದಿ ಸ್ವಾಗತಿಸಿದರು. ಅಬ್ದುಲ್ ಲತೀಫ್ ಮುಸ್ಲಿಯಾರ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.