ವಿಧಾನಪರಿಷತ್ ಚುನಾವಣೆಯಲ್ಲಿ ಮತದಾನ ಮಾಡುವ ವಿಧಾನ – ಪೌರಾಯುಕ್ತ ಮಧು ಎಸ್ ಮನೋಹರ್ ಅವರಿಂದ ನಗರಸಭಾ ಸದಸ್ಯರಿಗೆ ಮಾಹಿತಿ ಕಾರ್ಯಗಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ಡಿ.೧೦ರಂದು ನಡೆಯುವ ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿ ನಗರಸಭೆ ಸದಸ್ಯರಿಗೆ ಮತದಾನ ಮಾಡುವ ವಿಧಾನ ಕುರಿತು ಮಾಹಿತಿ ಕಾರ್ಯಾಗಾರ ಡಿ.೪ ರಂದು ಪುತ್ತೂರು ನಗರಸಭೆ ಸಭಾಂಗಣದಲ್ಲಿ ನಡೆಯಿತು.

ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಮತದಾನ ಮಾಡುವ ವಿಧಾನದ ಕುರಿತು ಮಾಹಿತಿ ನೀಡಿದರು. ಚುನಾವಣೆ ಹೇಗೆ ನಡೆಯುತ್ತದೆ ಮತ್ತು ಮತದಾನ ಹೇಗೆ ಮಾಡಬೇಕು. ಪ್ರತಿಯೊಬ್ಬ ಮತದಾರನೂ ಸ್ಪರ್ಧಿಸುವಷ್ಟು ಅಭ್ಯರ್ಥಿಗಳಿಗೆ ಆದ್ಯತಾನುಸಾರ ಮತ ನೀಡುವ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದ ಅವರು ನಗರಸಭೆ, ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಅದಕ್ಕೂ ಈ ಚುನಾವಣೆಗೂ ವ್ಯತ್ಯಾಸ ಇದೆ. ಇದನ್ನು ಗಮನಿಸುವಂತೆ ಹೇಳಿದರು. ಮತಗಟ್ಟೆ ಅಧಿಕಾರಿಯಾಗಿರುವ ನಗರಸಭೆ ಅಭಿಯಂತರ ಶ್ರೀಧರ್ ನಾಯ್ಕ್ ಅವರು ವಿವಿಧ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ, ಯೂಸೂಪ್, ಪ್ರೇಮಲತಾ ನಂದಿಲ, ಸುಂದರ ಪೂಜಾರಿ, ಮೋಹಿನಿ ವಿಶ್ವನಾಥ ಗೌಡ, ರೋಹಿಣಿ, ಲೀಲಾವತಿ ಶೀನಪ್ಪ ನಾಯ್ಕ, ಫಾತಿಮತ್ ಝೋರಾ, ಮಹಮ್ಮದ್ ರಿಯಾಜ್, ನವೀನ್ ಪೆರಿಯತ್ತೋಡಿ, ಪ್ರೇಮ್, ಸಂತೋಷ್ ಬೊಳುವಾರು, ಶಶಿಕಲ ಸಿ.ಎಸ್, ಮನೋಹರ್ ಕಲ್ಲಾರೆ, ಇಂದಿರಾ, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.