ಡಿಸೆಂಬರ್ 6 ವಿಶ್ವ ಗೃಹರಕ್ಷಕರ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಡಿಸೆಂಬರ್ ೦೬ ನ್ನು ದೇಶದಾದ್ಯಂತ ವಿಶ್ವ ಗೃಹರಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ ಪ್ರಸಕ್ತ ದೇಶದ ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಪಾಲನೆಯಲ್ಲಿ ಸರಕಾರಿ ಭದ್ರತಾ ಪಡೆಗಳಿಗೆ ನೆರವಾಗುವ ದಿಶೆಯಲ್ಲಿ ಸರಕಾರದ ಗೃಹ ಇಲಾಖೆಯ ಅಧಿನದಲ್ಲಿರುವ ಖಾಕಿ ಸಮವಸ್ತ್ರಧಾರಿ ಸ್ವಯಂ ಸೇವಾ ಸಂಸ್ಥೆಯಾಗಿ ಅಪೂರ್ವ ಸೇವಾದಳವಾಗಿ ಗೃಹರಕ್ಷಕದಳ ಕಾರ್ಯನಿರ್ವಹಿಸುತ್ತಿದೆ.

 

“ಗೃಹ” ಎಂದರೆ ಮನೆ. ಮನೆ ಎನ್ನುವ ಪದವನ್ನು ಇಲ್ಲಿ “ಸಮಾಜ “ಎಂದು ಅರ್ಥೈಸಲಾಗಿದೆ ಆದ್ದರಿಂದ ಸಮಾಜರಕ್ಷಣೆಯೇ ಗೃಹರಕ್ಷಣೆ “ದಳ”ಎಂಬುವುದು ಸ್ವಯಂಸೇವಾ ಸದಸ್ಯರ ಬಳಗ, “ನಿಷ್ಕಾಮ ಸೇವಾ” ಇದರ ಮೂಲ ದ್ಯೇಯ ರಾಜಕೀಯ, ಕೊಮುವಾರು ಮತ್ತು ಭಾಷವಾರು ಪಂಗಡಗಳಿಂದ ದೂರವಿದ್ದು ತಮ್ಮ ನಿತ್ಯದ ಉದ್ಯೋಗದ ಮತ್ತು ದಿನಚರಿಯ ಜೊತೆ ದೇಶ ಸೇವೆಗೆ ಕೊಂಚ ಕಾಲವನ್ನು ಮೀಸಲಿಡುವ ರಾಷ್ಟೀಕರ ಸೇವಾದಳವಿದು ಶಾಂತಿ ಪಾಲನೆಯೇ ಇದರ ಮುಖ್ಯ ಧ್ಯೇಯ ಶಾಂತಿ ಪಾಲನೆಯಲ್ಲಿ ಪೊಲೀಸರೊಂದಿಗೆ ಭುಜಕ್ಕೆ ಭುಜ ಕೊಟ್ಟು ಸೇವೆ ಸಲ್ಲಿಸುತ್ತಾರೆ

ಗೃಹರಕ್ಷಕದಳದ ಸ್ಥಾಪನೆ: ಗೃಹರಕ್ಷಕದಳವು ಸ್ವಯಂ ಸೇವಾ ಸಂಸ್ಥೆಯಾಗಿ ಪ್ರಪಂಚದ ಎರಡನೇ ಮಹಾಯುದ್ಧದ ಸಂಧರ್ಭದಲ್ಲಿ ಪ್ರಾರಂಭವಾಯಿತು ೧೯೪೬ ಡಿಸೆಂಬರ್ ನಲ್ಲಿ ಗೃಹರಕ್ಷಕದಳವು ಬಾಂಬೇ ರಾಜ್ಯದಲ್ಲಿ ಆಸ್ತಿತ್ವಕ್ಕೆ ಬಂತು ಸೈನ್ಯಪಡೆಯನ್ನು ಹಿಮ್ಮಟ್ಟಿಸಲು ಪೋಲಿಸ್, ಮಿಲಿಟರಿ ಪಡೆಯ ಪರ್ಯಾಯವಾಗಿ ಜನರೇ ದೇಶವನ್ನು ರಕ್ಷಿಸಲು ರೂಪಿಸಿದ ನಾಗರಿಕ ಪಡೆ [Local Defence Volllinter] ಸ್ಥಳಿಯ ರಕ್ಷಣಾ ಕಾರ್ಯಕರ್ತ ಎಂದು ಕರೆಯುತ್ತಾರೆ. ಆಗಿನ ಮುಂಬೈ ಪ್ರಾಂತ್ಯ ಕೋಮುಗಲಭೆಗಳಿಂದ ತತ್ತರಿಸಿದಾಗ ಕೆಲವು ಮಂದಿ ಸಮಾಜ ಸೇವಕರು, ನಾಗರಿಕ ಪ್ರಜ್ಞೆಯುಳ್ಳ ಯುವಕರು ನಾಡಿನ ಶಾಂತಿಪಾಲನೆ, ಜನರ ಮಾನ-ಪ್ರಾಣ ,ಮತ್ತು ಆಸ್ತಿ-ಪಾಸ್ತಿ ರಕ್ಷಣೆಗೆ ಮುಂದೆ ಬಂದರು. ಈ ಸಮಯದಲ್ಲಿ ಆಗಿನ ಮುಂಬೈ ಸರಕಾರ ಇಂಥ ಸ್ವಯುಂ ಸೇವಾದಳದ ಅಗತ್ಯತೆಯನ್ನು ಮನಗಂಡು ೧೯೪೭ರಲ್ಲಿ ಮೊರಾರ್ಜಿ ದೇಸಾಯಿ ಗೃಹ ಸಚಿವರಾಗಿದ್ದಾಗ ಈ ಸಂಬಂಧ ಶಾಸನ ಬದ್ಧ ಕಾಯ್ದೆ ರೂಪಿಸಿ ಜನರಿಗೆ ಮತ್ತು ದೇಶಕ್ಕೆ ತುರ್ತು ಸಂಧರ್ಭದಲ್ಲಿ ರಕ್ಷಣೆ ನೀಡಲು ಗೃಹರಕ್ಷಕದಳವನ್ನು ಕೇಂದ್ರಡಳಿತ ಪ್ರದೇಶದಲ್ಲಿ ಆರಂಭಿಸಿ ಖಾಕಿ ಸಮವಸ್ತ್ರಕ್ಕೆ ಮನ್ನಣೆ ನೀಡಲಾಯಿತು ನಂತರ ಕಾಲಕ್ರಮೇಣ ಇತರ ರಾಜ್ಯಗಳು ಆ ಮಾರ್ಗವನ್ನು ಅನುಸರಿಸಿದವು ಮೊದಲು ಪೊಲೀಸರ ಜೊತೆ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಇದರ ಸೇವೆಯನ್ನು ಬಳಸಲಾಗುತ್ತಿತ್ತು. ಬರುಬರುತ್ತಾ ಗೃಹರಕ್ಷಕದಳ ಸೇವೆಯನ್ನು ರಾಷ್ಟ್ರದ ಎಲ್ಲಾ ರೀತಿಯ ಪರಿಸ್ಥಿತಿಗಳಲ್ಲಿ ಪೊಲೀಸರು ಮತ್ತು ರಾಷ್ಟ್ರ ರಕ್ಷಣಾ ಪಡೆಗಳ ಜೊತೆ ಉಪಯೋಗಿಸಲಾಗುತ್ತಿದೆ. ಇವರಿಗೆ ನಿಗದಿತ ಸರಕಾರಿ ಸಂಬಳವಿಲ್ಲ. ಸರಕಾರ ನಿಗದಿ ಮಾಡಿದ ಗೌರವಧನ, ಇತರ ಭತ್ಯೆಗಳು ಮಾತ್ರ ದೊರೆಯುತ್ತದೆ. ಪ್ರಸ್ತುತ ದಿನಗಳಲ್ಲಿ ಸರ್ಕಾರ ನಿಗದಿಪಡಿಸಿದ್ದಂತೆ ಆರಕ್ಷಕ ಠಾಣೆಯಲ್ಲಿ ಸೇವೆ ಸಲ್ಲಿಸುವ ಗೃಹರಕ್ಷಕರಿಗೆ ದಿನವೊಂದಕ್ಕೆ ೭೫೦ ರೂ. ಹಾಗೂ ಇತರೆ ಸೇವೆ ಸಲ್ಲಿಸುವ ಗೃಹರಕ್ಷಕರಿಗೆ ೩೮೦ ರೂ. ಗೌರವಧನ ಗೃಹರಕ್ಷಕರಿಗೆ ನೀಡಲಾಗುತ್ತದೆ

ಕರ್ನಾಟಕ ರಾಜ್ಯದಲ್ಲಿ ಗೃಹರಕ್ಷಕದಳ ಉದಯ: ಕರ್ನಾಟಕ ರಾಜ್ಯದಲ್ಲಿ ಗೃಹರಕ್ಷಕದಳ ೧೯೬೨ ರಲ್ಲಿ ಉದಯವಾಯಿತು

ಗೃಹರಕ್ಷಕದಳ ಸೇರಲು ಯಾರು ಅರ್ಹರು:
ಆಯಾ ಜಿಲ್ಲಾ ವಾಸಿಗಳು ಭಾರತೀಯ ನಾಗರಿಕರು ಈ ದಳವನ್ನು ಸೆರಬಹುದು ವಿದ್ಯಾರ್ಹತೆ ಎಸೆಸ್ಸೆಲ್ಸಿ ಪಾಸಗಿರಬೇಕು, ವಯಸ್ಸು ೧೯-೫೦ ಅಂತರವಿರಬೇಕು. ನಿರ್ದಿಷ್ಟ ದೇಹದ ಅಳತೆಯೊಂದಿಗೆ ಕೂಡಿ ದೃಢಕಾಯವಾಗಿರಬೇಕು, ಓದು ಬರಹ ತಿಳಿದರಬೇಕು, ಹಾಗೂ ಯಾವುದೇ ರೀತಿಯಿಂದಲೂ ನ್ಯಾಯಲಯದಿಂದ ಶಿಕ್ಷೆಗೆ ಒಳಗಾಗಿರಬಾರದು, ಸಮಾಜ ಕಂಟಕ ವ್ಯಕ್ತಿಯಾಗಿರಬಾರದು, ಯಾವುದೇ ರೀತಿಯಲ್ಲೂ ಅಂಗಂಗಾ ನ್ಯೂನತೆಗಳು ಇರಬಾರದು

ಗೃಹರಕ್ಷಕದಳ ಸೇರ್ಪಡೆ ಕ್ರಮ:

ಗೃಹರಕ್ಷಕದಳ ಸೇರಲು ಇಚ್ಛೆ ಇರುವವರು ಮೊದಲಿಗೆ ಜಿಲ್ಲಾ ಕಚೇರಿಂದ ಅರ್ಜಿ ಪಡೆದು ನಂತರ ಅದನ್ನು ಭರ್ತಿ ಮಾಡಿ ನಿಗದಿಪಡಿಸಿದ ದಾಖಲೆಗಳೊಂದಿಗೆ ಜಿಲ್ಲಾ ಕಚೇರಿಗೆ ಸಲ್ಲಿಸಬೇಕು ನಂತರ ನಿಮ್ಮ ಅರ್ಜಿಯನ್ನು ಜಿಲ್ಲಾ ಮಟ್ಟದ ಗೃಹರಕ್ಷಕದಳ ಅಧಿಕಾರಿಗಳು ಪರಿಶೀಲಿಸಿದ ನಂತರ ಅರ್ಜಿಯನ್ನು ಪೋಲಿಸ್ ಇಲಾಖೆಯ ಪರಿಶೀಲನೆಗೆ ಕಳುಹಿಸಲಾಗುತ್ತದೆ. ಪೊಲೀಸ್ ಇಲಾಖೆಯಿಂದ ಪುರಸ್ಕರಿಸಲ್ಪಟ್ಟ ಅರ್ಜಿಯನ್ನು ಬೆಂಗಳೂರಿನ ಗೃಹರಕ್ಷಕದಳ ಕೇಂದ್ರ ಕಚೇರಿಗೆ ಕಳುಹಿಸಲಾಗುತ್ತದೆ ಬೆಂಗಳೂರಿನಲ್ಲಿ ಆರಕ್ಷಕ ಮಹಾನಿರ್ದೇಶಕರು ಹಾಗೂ ಗೃಹರಕ್ಷಕದಳದ ಮಹಾ ಸಮಾದೇಷ್ಟರವರ ಕಚೇರಿಯಿಂದ ಅನುಮೋದಿಸಲ್ಪಡುವ ಅರ್ಜಿದಾರರಿಗೆ ಸಂಬಂಧ ಪಟ್ಟ ಜಿಲ್ಲೆಯ ಜಿಲ್ಲಾ ಕಮಾಡೆಂಟ್‌ರವರು “ಸಿ” ಪ್ರಮಾಣ ಪತ್ರ ನೀಡುತ್ತಾರೆ. “ಸಿ” ಪ್ರಮಾಣ ಪತ್ರ ದೊರೆತ ಬಳಿಕ ಅಧಿಕೃತವಾಗಿ ಗೃಹರಕ್ಷಕದಳ ಸದಸ್ಯತ್ವ ದೊರಕಿದಂತಾಗಿ ಬಳಿಕ ಆಯ್ಕೆಯಾದ ಮಂದಿಗೆ ಜಿಲ್ಲಾ ಮಟ್ಟದಲ್ಲಿ ಮೂಲ ತರಬೇತಿ ನೀಡಿ ನಂತರ ಕಾಲಕ್ರಮೇಣ ಬೆಂಗಳೂರು ಗೃಹರಕ್ಷಕದಳ ಕಚೇರಿಯ ತರಬೇತಿ ಅಕಾಡೆಮಿಯಲ್ಲಿ ತರಬೇತಿ ನೀಡಲಾಗುತ್ತದೆ

ಗೃಹರಕ್ಷಕದಳ ಸೇವೆಯನ್ನು ಎಲ್ಲೆಲ್ಲಿ ಬಳಸಲಾಗುತ್ತದೆ:

೨೦೨೦-೨೦೨೧ ರ ವರ್ಷಗಳಲ್ಲಿ ಕೊರೋನ ಮಾಹಾಮಾರಿ ವಿರುದ್ಧ ಕೊರೋನ ವಾರಿಯರ್ಸ್ ಆಗಿ ಗೃಹರಕ್ಷಕರು ಸೇವೆ ಸಲ್ಲಿಸಿರುತ್ತಾರೆ ಹಾಗೂ ೨೦೨೧ ರ ಕೊರೋನ ಲಾಕ್ ಡೌನ್ ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸರ ಜೊತೆಗೆ “ಮಾರ್ಷಲ್” ಗಳಾಗಿ ವಿಶೇಷ ಕರ್ತವ್ಯ ನಿರ್ವಹಿಸಿರುತ್ತಾರೆ

೧.ದೇಶದ ಅಂತರಿಕ ಭದ್ರತೆಯಲ್ಲಿ ಪೊಲೀಸರೊಂದಿಗೆ ಸೇರಿ ಸೇವೆ ಸಲ್ಲಿಸುವುದು ಹಾಗೂ ಪೊಲೀಸರ ಜೊತೆ ಸಂಚಾರ ನಿಯಂತ್ರಣ, ಕಾನೂನು ಸುವ್ಯವಸ್ಥೆ ಕಾಪಾಡುವುದು
೨. ಅಪರಾಧ ತಡೆಗಟ್ಟುವ ದೃಷ್ಟಿಯಿಂದ ಪೋಲಿಸರ ಜೊತೆಯಲ್ಲಿ ಗಸ್ತು ತಿರುಗುವುದು
೩. ನೈಸರ್ಗಿಕ ವಿಕೋಪಗಳಾದ ನೆರೆಹಾವಳಿ,ಸುನಾಮಿ, ಭೂಕುಸಿತ, ಭೂಕಂಪ, ಇತ್ಯಾದಿ ಸಂದರ್ಭದಲ್ಲಿ ಜಿಲ್ಲಾ ವಿಪತ್ತು ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ಜೊತೆ ಸೇರಿ ಸೇವೆ ಸಲ್ಲಿಸುವುದು
೪. ೧೯೬೧ರ ಕರ್ನಾಟಕ ಮದ್ಯಪಾನ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೊಳಿಸಲು ಅಬಕಾರಿ ಇಲಾಖೆಯ ಕಳ್ಳಭಟ್ಟಿ ಸಾರಾಯಿ ಮತ್ತು ಅನಧಿಕೃತ ಮದ್ಯಮಾರಟ ನಿಯಂತ್ರಣಕ್ಕೆ ಸಂಬಂಧ ಪಟ್ಟ ಇಲಾಖೆಯ ಜೊತೆ ಕೈ ಜೋಡಿಸಿವುದು
೫. ಪ್ರತಿಭಟನೆ, ಮುಷ್ಕರ, ವಿವಾದಾತ್ಮಕ ವಲ್ಲದ ಪ್ರತಿಫಟನೆ, ಕ್ರೀಡಾಕೂಟ, ಯಾವುದೇ ಸಂಘಟನೆಗಳು ನಡೆಸುವ ಕಾರ್ಯಕ್ರಮಕ್ಕೆ ಗೃಹರಕ್ಷಕರನ್ನು ಬಳಸಬಹುದು ಆದರೆ ರಾಜ್ಯ(ಆರಕ್ಷಕ ಮಹಾ ನಿರ್ದೇಶಕರು ಹಾಗೂ ಗೃಹರಕ್ಷಕದಳದ ಮಾಹಾಸಮಾದೇಷ್ಠರು) ಇವರ ಪೂರ್ವನುಮತಿ ಕಡ್ಡಾಯ

ಪ್ರತಿ ವರ್ಷ ಡಿಸೆಂಬರ್ ೬ ನ್ನು ದೇಶದಾದ್ಯಂತ ಅಖಿಲ ಭಾರತ ಗೃಹರಕ್ಷಕರ ದಿನವನ್ನಾಗಿ ಆಚರಿಸರಿಸಲಾಗುತ್ತದೆ. ಪ್ರತಿ ಜಿಲ್ಲೆಯ ಜಿಲ್ಲಾ ಕಚೇರಿಯಲ್ಲಿ ಸರಕಾರದ ನಿರ್ದೇಶನದಂತೆ ಗೃಹರಕ್ಷಕದಳದ ದಿನಾಚರಣೆಯನ್ನು ಆಚರಿಸಲಾಗುತ್ತದೆಏನೇ ಇರಲಿ ಸಮಾಜದಲ್ಲಿ ಯಾವುದೇ ಪ್ರತಿಫಲ ಬಯಸದೇ ಸೇವಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ಗೃಹರಕ್ಷಕರಿಗೆ ಕೃತಜ್ಞತೆಗಳನ್ನು ಸಲ್ಲಿಸೋಣ.

ಲೇಖಕರು:
ದಿನೇಶ್ ಬೊಳ್ಳಾರ್
ಪ್ರಭಾರ ಘಟಕಾಧಿಕಾರಿ
ಗೃಹರಕ್ಷಕದಳ, ಉಪ್ಪಿನಂಗಡಿ ಘಟಕ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.