ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ “ಎನ್ನೆಸ್ಸೆಸ್‌ ಘಟಕದ 2021-22ರ ವಾರ್ಷಿಕ ಕಾರ್ಯಚಟುವಟಿಕೆ”ಗಳಿಗೆ ಚಾಲನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಎನ್.ಎಸ್.ಎಸ್ ಪೂರಕ: ಡಾ. ಶ್ರೀಧರ ಗೌಡ

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2021-22ರ ಸಾಲಿನ ವಾರ್ಷಿಕ ಕಾರ್ಯಚಟುವಟಿಕೆಗಳಿಗೆ ಶುಕ್ರವಾರ ಚಾಲನೆ ನೀಡಲಾಯಿತು. ಪುತ್ತೂರು ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀಧರ್ ಗೌಡ ಪಿ, ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ವೇಳೆ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದಿಂದ ನಿರ್ವಹಿಸುವ “ಸೇವಾಬಿಂಬ” ಎಂಬ ಬಿತ್ತಿಪತ್ರಿಕೆಯನ್ನು ಅವರು ಅನಾವರಣಗೊಳಿಸಿದರು.

 

ನಂತರ ಮಾತನಾಡಿದ ಅವರು, ಶಿಸ್ತು, ಸಂಯಮ, ಸಮಯಪ್ರಜ್ಞೆಯಂತಹ ಮೌಲ್ಯಗಳನ್ನು ಇಂದಿನ ವಿದ್ಯಾರ್ಥಿಗಳು ಬೆಳೆಸಿಕೊಂಡಾಗ ಸಾಧನೆಯ ಶಿಖರವೇರಲು ಸಾಧ್ಯವಾಗುತ್ತದೆ. ಎನ್ನೆಸ್ಸೆಸ್‌ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಅವಕಾಶಗಳನ್ನು ಕಲ್ಪಿಸುತ್ತದೆ ಎಂದು ಹೇಳಿದರಲ್ಲದೇ ಎನ್ನೆಸ್ಸೆಸ್‌ನಲ್ಲಿ ತಮ್ಮ ಅನುಭವ ಮತ್ತು ಕಲಿಕೆಯನ್ನು ಹಂಚಿಕೊಂಡರು.

ಭಾರತದ ಭವಿಷ್ಯವಾದ ಯುವಜನತೆ ಸೇವಾ ಮನೋಭಾವನೆ, ದೇಶಪ್ರೇಮವನ್ನು ಬೆಳೆಸಿಕೊಂಡಾಗ, ತಾನು ಅಭಿವೃದ್ಧಿಯಾಗುವುದಲ್ಲದೆ, ತನ್ನ ದೇಶದ ಅಭಿವೃದ್ಧಿಗೆ ಕಾರಣವಾಗುವನು. ಗ್ರಾಮೀಣ ಅಭಿವೃದ್ಧಿಯಲ್ಲಿ ಎನ್ನೆಸ್ಸೆಸ್‌ನ ಪಾತ್ರ ಬಹಳ ಮಹತ್ತರವಾದದ್ದು, ಸ್ವಯಂ ಸೇವಕರ ಸಕ್ರಿಯ ತೊಡಗಿಸಿಕೊಳ್ಳುವಿಕೆಯು ಯಶಸ್ವಿ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ.ಕೆ ರವೀಂದ್ರ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ವ್ಯಕ್ತಿಯೊಬ್ಬನಿಗೆ ಶಿಸ್ತುಬದ್ದ ಜೀವನವನ್ನು ನಡೆಸಲು ಕಲಿಸುತ್ತದೆ. ವಿಶೇಷವಾಗಿ ಒಬ್ಬ ಮನುಷ್ಯನಿಗೆ ಬೇಕಾದ ಎಲ್ಲ ರೀತಿಯ ತರಬೇತಿಯನ್ನು ಎನ್ ಎಸ್ ಎಸ್ ನಿಂದ ಪಡೆಯಬಹುದು ಎಂದರು. ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಎನ್ನೆಸ್ಸೆಸ್‌ ಘಟಕಕ್ಕೆ ಯಶಸನ್ನು ಗಳಿಸಲಿ ಎಂದು ಶುಭಹಾರೈಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ ಪಿ ಮಾತನಾಡಿ, ವಿದ್ಯಾರ್ಥಿಯು ಪ್ರಾಮಾಣಿಕವಾಗಿ ಎನ್ ಎಸ್ ಎಸ್ ನಂತಹ ವೇದಿಕೆಯನ್ನು ಬಳಸಿಕೊಂಡಾಗ ಅವನ ವ್ಯಕ್ತಿತ್ವ ವಿಕಸನಕ್ಕೆ ಅದು ಸಹಕಾರಿಯಾಗಿರುತ್ತದೆ. ಬದುಕಿನ ಬಗ್ಗೆ ಭವಿಷ್ಯದ ಚಿತ್ರಣವನ್ನು ರಾಷ್ಟ್ರೀಯ ಸೇವಾ ಯೋಜನೆಯು ಅನುಭವದ ಮೂಲಕ ಅದು ಕಲ್ಪಿಸುತ್ತದೆ. ನಮ್ಮ ಕಾಲೇಜಿನ ಎನ್ ಎಸ್ ಎಸ್ ಸ್ವಯಂಸೇವಕರು ಈ ವೇದಿಕೆಯನ್ನು ಉತ್ತಮವಾಗಿ ಬಳಸಿಕೊಳ್ಳಿ ಎಂದು ಹೇಳಿದರು.

ಕಾಲೇಜಿನ ಎನ್ ಎಸ್ ಎಸ್ ಘಟಕದ ಸಂಯೋಜಕರಾದ ಲಕ್ಷ್ಮಿಕಾಂತ ರೈ ಅನಿಕೂಟೇಲ್ ಪ್ರಾಸ್ತವಿಕವಾಗಿ ಮಾತನಾಡಿ, ಎನ್ ಎಸ್ ಎಸ್ ನ ಸ್ಥಾಪನೆಯ ಉದ್ದೇಶ ಹಾಗೂ ಅದರಿಂದ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದರು.

ಎನ್.ಎಸ್.ಎಸ್ ಘಟಕದ ಸಹ ಸಂಯೋಜಕರಾದ ಕು. ಶ್ರೀರಕ್ಷಾ, ಕಂಪ್ಯೂಟರ್ ಉಪನ್ಯಾಸಕ ತಿಲಕ್, ದೈಹಿಕ ಶಿಕ್ಷಣ ನಿರ್ದೇಶಕರಾದ ನವೀನ್ ಕುಮಾರ್ ಎಂ.ಕೆ ಸಹಕರಿಸಿದರು. ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ರೇಖಾ ಕೆ, ಶ್ರೀಮತಿ ಸಂಗೀತಾ ಎಸ್ ಎಂ, ಕೌಶಿಕ್ ಸಿ, ಶ್ರೀಮತಿ ಸುಭಾಷಿಣಿ ಜೆ, ಶ್ರೀಮತಿ ಸಂಧ್ಯಾ ಪಿ.ಎಂ, ಕು. ಶೀತಲ್ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಎನ್ನೆಸ್ಸೆಸ್‌ ಸ್ವಯಂಸೇವಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಎನ್ ಎಸ್ ಎಸ್ ಸ್ವಯಂಸೇವಕರಾದ ಚಿಂತನ್, ಚೇತನ್, ಅಕ್ಷತಾ, ಮಾನಸ, ಅಶ್ವಿನಿ ಪ್ರಾರ್ಥನೆ ಹಾಗೂ ಎನ್ ಎಸ್ ಎಸ್ ಗೀತೆ ಹಾಡಿದರು. ಸ್ವಯಂಸೇವಕಿ ವೃಂದಾ ಸ್ವಾಗತಿಸಿ, ವಿದ್ಯಾರ್ಥಿ ಸಂಯೋಜಕ ತೇಜಸ್ ಎಚ್. ಯು ವಂದಿಸಿದರು, ಸ್ವಯಂ ಸೇವಕ ಚೇತನ್ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.