ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್: ಕ್ರೀಡಾಂಗಣಕ್ಕೆ ಅನುದಾನಕ್ಕೆ ಸಚಿವರಿಗೆ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕರ್ನಾಟಕ ಪಬ್ಲಿಕ್ ಸ್ಕೂಲ್ ಕುಂಬ್ರ ಇಲ್ಲಿಗೆ ಕ್ರೀಡಾಂಗಣದ ಅಗತ್ಯವಿದ್ದು ಸರಕರ ಈ ನಿಟ್ಟಿನಲ್ಲಿ ಕ್ರೀಡಾಂಗಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಪಬ್ಲಿಕ್ ಸ್ಕೂಲ್ ಕಾರ್ಯಾಧ್ಯಕ್ಷ ನಿತೀಶ್‌ಕುಮಾರ್ ಶಾಂತಿವನ ಕ್ರೀಡಾಮತ್ತು ಯುವ ಸಬಲೀಕರಣ ಸಚಿವರಾದ ನಾರಾಯಣ ಗೌಡರಿಗೆ ಮನವಿ ನೀಡಿದರು.


ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ 800 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಸರಕಾರಿ ಶಾಲೆಯಲ್ಲಿ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಶಾಲೆಗೆ ಅಗತ್ಯವಾಗಿ ಕೀಡಾಂಗಣದ ಅಗತ್ಯತೆ ಇದ್ದು ಜೊತೆಗೆ ಕ್ರೀಡಾ ಪರಿಕರಗಳ ಕೊಠಡಿ, ಸಿಂಥೆಟಿಕ್ ಕ್ರೀಡಾಂಗಣದ ಜೊತೆಗೆ ಗ್ಯಾಲರಿ ವ್ಯವಸ್ಥೆಯನ್ನು ಮಾಡಬೇಕಿದ್ದು ಇದಕ್ಕಾಗಿ ಸುಮಾರು 4  ಕೋಟಿ ರೂ. ಅಂದಾಜು ವ್ಯಯಿಸಬೇಕಿದೆ. ಸರಕಾರ ಈ ನಿಟ್ಟಿನಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವಲ್ಲಿ ಅನುದಾನ ಬಿಡುಗಡೆಮಾಡಿ ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮ ಕ್ರೀಡಾಂಗಣ ನಿರ್ಮಾಣ ಮಾಡುವಂತೆ ಸರಕಾರಕ್ಕೆ ಮನವಿಯಲ್ಲಿ ತಿಳಿಸಲಾಗಿದೆ. ಕೆ ಅರ್ ಪುರ ದಲ್ಲಿ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಶಾಲಾ ಅಭಿವೃದ್ದಿ ಸಮಿತಿ ಸದಸ್ಯ ಹರೀಶ್ ಬಿಜತ್ರೆ ಜೊತೆಗಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.