ನಗರಸಭೆ ವ್ಯಾಪ್ತಿಯ ಉದ್ದಿಮೆಗಳ ಪರವಾನಿಗೆ ನವೀಕರಿಸಿ, ಅಸ್ತಿ ತೆರಿಗೆ ಪಾವತಿಸಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಜನವರಿಯಿಂದ ಪರಿಶೀಲನಾ ಪ್ರಕ್ರಿಯೆ ಆರಂಭ – ಪೌರಾಯುಕ್ತ ಮಧು ಎಸ್ ಮನೋಹರ್

ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ಉದ್ದಿಮೆದಾರರು ಪರವಾನಿಗೆ ನವೀಕರಿಸದೇ ಇದ್ದರೆ ನವೀಕರಿಸುವಂತೆ, ಅನಧಿಕೃತ ಉದ್ದಿಮೆದಾರರು ದಾಖಲೆ ನೀಡಿ ಪರವಾನಿಗೆ ಪಡೆಯುವಂತೆ ಮತ್ತು ಆಸ್ತಿ ತೆರಿಗೆ ಪಾವತಿಸದಿದ್ದವರು ಪಾವತಿಸುವಂತೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಸೂಚನೆ ನೀಡಿದ್ದಾರೆ. ಮುಂದಿನ ಜನವರಿ ತಿಂಗಳಲ್ಲಿ ನಗರಸಭೆಯಿಂದ ಪರಿಶೀಲನಾ ಪ್ರಕ್ರಿಯೆ ನಡೆಯಲಿದ್ದು, ಅನಧಿಕೃತ ಉದ್ದಿಮೆ ನಡೆಸುವವರು ಮತ್ತು ಆಸ್ತಿ ತೆರಿಗೆ ಪಾವತಿಸದವರಿಗೆ ನೋಟೀಸು ಜಾರಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

965 ಮಂದಿ ಉದ್ದಿಮೆ ಪರವಾನಿಗೆ ನವೀಕರಿಸಿಲ್ಲ:
ನಗರಸಭೆ ವ್ಯಾಪ್ತಿಯಲ್ಲಿ 2749ಉದ್ದಿಮೆದಾರರಿದ್ದು, ಪ್ರಸ್ತುತ1437 ಉದ್ದಿಮೆಗಳು ನವೀಕರಣಗೊಂಡಿದೆ. ಈ ಪೈಕಿ ಕೆಲವರು ಉದ್ದಿಮೆ ಪರವಾನಿಗೆಗೆ ಅರ್ಜಿ ಸಲ್ಲಿಸಿದ್ದು ಅದಕ್ಕೆ ಶುಲ್ಕ ಪಾವತಿಸಿಲ್ಲ.347೭ ಉದ್ದಿಮೆಗಳು ಇನ್ನೂ ಬಾಕಿ ಇವೆ. ಹಳೆಯ ಉದ್ದಿಮೆ ಪರವಾನಿಗೆ ಶುಲ್ಕ ಬಾಕಿ ಇರಿಸಿದ 965 ಪರವಾನಿಗೆ ನವೀಕರಣಗೊಳಿಸದೆ ವ್ಯವಹಾರ ನಡೆಸುತ್ತಿದ್ದಾರೆ.

ಅವರಿಗೆ ನಗರಸಭೆಯಿಂದ ಪರವಾನಿಗೆಯನ್ನು ನವೀಕರಣಗೊಳಿಸಿ ನಂತರ ಉದ್ದಿಮೆ ನಡೆಸುವಂತೆ ವಿನಂತಿ ಮಾಡುತ್ತೇವೆ. ಮುಂದಿನ ಜನವರಿ ತಿಂಗಳಲ್ಲಿ ಉದ್ದಿಮೆಗಳಿಗೆ ಭೇಟಿ ನೀಡಲಾಗುವುದು. ಆ ಸಮಯದಲ್ಲಿ ಉದ್ದಿಮೆ ಪರವಾನಿಗೆ ಇಲ್ಲವಾದರೆ ನೋಟೀಸ್ ನೀಡಬೇಕಾಗುತ್ತದೆ. ಇದರ ಜೊತೆಗೆ ಉದ್ದಿಮೆ ಮುಚ್ಚುವ ಕಾರ್ಯಕ್ರಮ ಹಮ್ಮಿಕೊಳ್ಳುವ ಸಂದರ್ಭ ಬರಬಹುದು. ಪ್ರತಿಯೊಬ್ಬರು ಉದ್ದಿಮೆ ಪರವಾನಿಗೆ ನವೀಕರಿಸಿ ಪಡೆದಕೊಳ್ಳುವಂತೆ ವಿನಂತಿ ಎಂದು ಪೌರಾಯುಕ್ತ ಮಧು ಎಸ್ ಮನೋಹರ್ ಅವರು ತಿಳಿಸಿದ್ದಾರೆ. ಈಗಾಗಲೇ ಕೆಲವರು ಶುಲ್ಕ ಪಾವತಿಸಿ ಪರವಾನಿಗೆ ಕೊಂಡು ಹೋಗಿಲ್ಲ. ಅದರ ೧೩೪ ಪರವಾನಿಗೆಗಳು ನಮ್ಮಲ್ಲಿ ಇದೆ. ಅವರು ಬಂದು ಪರವಾನಿಗೆಯನ್ನು ಪಡೆದು ಕೊಳ್ಳಬಹುದು. ನಗರವ್ಯಾಪ್ತಯಲ್ಲಿ ಅನಧಿಕೃತ ಉದ್ದಿಮೆಗಳು ನಡೆಯುತ್ತಿರುವುದು ಕಂಡುಬಂದಿದೆ. ಅಂತವರು ದಯಮಾಡಿ ಸೂಕ್ತ ದಾಖಲೆ ಒದಗಿಸಿ ಪರವಾನಿಗೆ ಪಡೆದು ಉದ್ದಿಮೆ ಆರಂಭಿಸುವಂತೆ ಅವರು ವಿನಂತಿಸಿದ್ದಾರೆ.

10 ಸಾವಿರ ಮಂದಿ ಅಸ್ತಿ ತೆರಿಗೆ ಪಾವತಿಸಿಲ್ಲ:
ಆಸ್ತಿ ತೆರಿಗೆ ಸಂಬಂಧಿಸಿ ಶೇ.40.5ರಷ್ಟು ನಗರಸಭೆಗೆ ಜನರು ಕಟ್ಟಿದ್ದಾರೆ. ಒಟ್ಟು 24,076 ಆಸ್ತಿಗಳು ನಮ್ಮ ನಗರಸಭೆಯಲ್ಲಿ ಇದೆ. ಅದರಲ್ಲಿ ಒಟ್ಟು 10ಸಾವಿರ ಮಂದಿ ಬಾಕಿ ಇದೆ.
ರೂ. 3 ಕೋಟಿಯಷ್ಟು ತೆರಿಗೆ ಬಾಕಿ ಇದ್ದಂತೆ. ಈಗಾಗಲೇ ಜನವರಿಯಿಂದ ಪರಿಶೀಲನಾ ಪ್ರಕ್ರಿಯೆ ಪ್ರಾರಂಭ ಆಗುವುದರಿಂದ ಯಾರ್‍ಯಾರೂ ಆಸ್ತಿ ತೆರಿಗೆ ಬಾಕಿ ಮಾಡಿದ್ದಾರೋ ಅವರಿಗೆ ನಗರಸಭೆಯಿಂದ ನೋಟೀಸು ನೀಡುವ ಪ್ರಕ್ರಿಯೆ ನಡೆಯಲಿದೆ. ಅದಕ್ಕೂ ಮುಂದೆ ಅವರು ದಯಮಾಡಿ ಅಸ್ತಿ ತೆರಿಗೆ ಕಟ್ಟಬೇಕು. ಯಾಕೆಂದರೆ ನಗರಭೆಯ ರಸ್ತೆ, ನೀರು, ದಾರಿ ದೀಪ ಸೇರಿದಂತೆ ವಿವಿಧ ನಿರ್ವಾಹಣ ಕಾರ್ಯಗಳಿಗೆ ಸೌಲಭ್ಯಗಳನ್ನು ಉಪಯೋಗಿಸಿ ನಿರ್ವಹಿಸಬೇಕಾಗತ್ತದೆ. ಇದಕ್ಕೆ ಆಸ್ತಿ ತೆರಿಗೆ ಕಟ್ಟಿದ್ದರೆ ಮಾತ್ರ ಆಗುತ್ತದೆ. ದಯಮಾಡಿ ಎಲ್ಲರು ಅಸ್ತಿ ತೆರಿಗೆ ಪಾವತಿಸುವಂತೆ ಮಧು ಎಸ್ ಮನೋಹರ್ ವಿನಂತಿಸಿದರು.

ಘನತ್ಯಾಜ್ಯ ವಿಲೇವಾರಿಗಾಗಿ ಜಾಗೃತಿ ಕಾರ್ಯಕ್ರಮ:
ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ನಗರಸಭೆ ವತಿಯಿಂದ ಪ್ರತಿ ಮನೆಗಳಿಗೆ ಮಾಹಿತಿ ನೀಡಿ, ಕರ ಪತ್ರ ನೀಡಲಾಗುತ್ತಿದೆ. ಪ್ರಸ್ತುತ ನಗರಸಭೆ ರಾಷ್ಟ್ರಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಹಿಂದೆ ಇದ್ದ ಸ್ಥಾನಕ್ಕಿಂತ ೩ನೇ ಸ್ಥಾನದಲ್ಲಿದ್ದೇವೆ. 19ನೇ ಸ್ಥಾನದಲ್ಲಿ ರಾಷ್ಟ್ರಮಟ್ಟದಲ್ಲಿದ್ದೇವೆ. ಇದನ್ನು ಒಂದನೇ ಸ್ಥಾನಕ್ಕೆ ತರಲು ಸಾರ್ವಜನಿಕರು ಕೈ ಜೋಡಿಸಬೇಕು. ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸಾರ್ವಜನಿಕರು ತ್ಯಾಜ್ಯವನ್ನು ವಿಂಗಡಣೆ ಮಾಡಿ ಕೊಡಬೇಕು. ಪ್ರತಿ ಮನೆಯವರು ರಸ್ತೆ ಬದಿಯಲ್ಲಿ, ಕಂಪೌಂಡ್‌ನಲ್ಲಿ ಕಸಗಳನ್ನು ನೇತಾಡಿಸುವುದು ಕಂಡು ಬಂದರೆ ಅವರಿಗೆ ದಂಡ ವಿಧಿಸಲಾಗುವುದು. ರಸ್ತೆ ಬದಿ ಕಸ ಬೀಸಾಡಿದವರಿಗೆ ರೂ.೫ಸಾವಿರ ದಂಡ. ಕಸ ವಿಂಗಡನೆ ಮಾಡದೆ ಕೊಟ್ಟರೆ ಅವರಿಗೆ ರೂ. ೫೦೦ ದಂಡ ವಿಧಿಸಲಾಗುತ್ತದೆ. ಈ ನಿಟ್ಟಿನಲ್ಲಿ ಜಾಗೃತಿಗಾಗಿ ಎಲ್ಲಾ ಶಾಲೆಗಳಲ್ಲಿ ಮಾಹಿತಿ ಕಾರ್ಯಗಾರ ನಡೆಸುತ್ತಿದ್ದೇವೆ. ಮನೆ ಮನೆಗಳನ್ನು, ಸರಕಾರಿ ಕಚೇರಿ, ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿ ನೀಡುತ್ತಿದ್ದೇವೆ. ಪ್ರತಿ ಉದ್ದಿಮೆಗಳಲ್ಲಿ ಕಸದ ಬುಟ್ಟಿ ಇರುವುದು ಕಡ್ಡಾಯ ಎಂದು ಮಧು ಎಸ್ ಮನೋಹರ್ ತಿಳಿಸಿದರು.

ಪ್ಲಾಸ್ಟಿಕ್ ನಿಷೇಧ ನಾಮಫಲಕ ಅಳವಡಿಸಿ:
ರಾಜ್ಯ ಸರಕಾರ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಮಾಡಿ ಆದೇಶ ಹೊರಡಸಿದೆ. ಪ್ರತಿ ಅಂಗಡಿಯಲ್ಲಿ ಪ್ಲಾಸ್ಟಿಕ್ ನಿಷೇಧ ಕುರಿತು ಸ್ಟಿಕ್ಕರ್, ನಾಮಫಲಕ ಅಳವಡಿಸಬೇಕು ಎಂದು ಮಧು ಎಸ್ ಮನೋಹರ್ ಅವರು ತಿಳಿಸಿದರು.

ಅನಧಿಕೃತ ಹೋರ್ಡಿಂಗ್ಸ್ ತೆರವು
ನಗರವ್ಯಾಪ್ತಿಯಲ್ಲಿ 107 ಅನುಮತಿ ಇರುವ ಜಾಹಿರಾತು ಹೋರ್ಡಿಂಗ್ಸ್ ಇದೆ. ಆದರೆ ಹೆಚ್ಚಿನ ಹೋರ್ಡಿಂಗ್ಸ್ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಅಳವಡಿಸಿರುವುದು ಕಂಡು ಬಂದಿದೆ. ಅಂತವರು ಅನುಮತಿ ಪಡೆದು ಹೋರ್ಡಿಂಗ್ಸ್ ಅಳವಡಿಸುವುದು ಮತ್ತು ನಗರಸಭೆ ಸೂಚಿಸಿದ ನಿಗದಿ ಪಡಿಸಿದ ಸ್ಥಳದಲ್ಲೇ ಅಳವಡಿಸುವಂತೆ ತಿಳಿಸಿದ ಮಧು ಎಸ್ ಮನೋಹರ್ ಅವರು ನಾಮಪಲಕ ಅಳವಡಿಸುವಾಗ ರಸ್ತೆಗೆ ಮತ್ತು ಪಾದಾಚಾರಿಗಳಿಗೆ ತೊಂದದರೆ ಆಗದಂತೆ ಅಳವಡಿಸಬೇಕಾಗುತ್ತದೆ. ಅನಧಿಕೃತ ಹೋರ್ಡಿಂಗ್ಸ್ ಅನ್ನು ನಾವು ತೆರವು ಮಾಡುತ್ತೇವೆ.
ಮಧು ಎಸ್ ಮನೋಹರ್, ಪೌರಾಯುಕ್ತರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.