ಡಿ.22ರಿಂದ ಕೆಸ್ಸಾರ್ಟಿಸಿ ಮಜ್ದೂರ್ ಸಂಘದಿಂದ ವೇತನ ಕಡಿತ ಚಳವಳಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೆಸ್ಸಾರ್ಟಿಸಿ ಸಂಸ್ಥೆಯು ಕಳೆದ ಮೂರು ತಿಂಗಳಿನಿಂದ ಸಿಬ್ಬಂದಿಗಳಿಗೆ ಅರ್ಧ ವೇತನ ಮಾತ್ರ ನೀಡುತ್ತಿದ್ದು, ಇದರಿಂದಾಗಿ ಸಿಬ್ಬಂದಿಗಳಿಗೆ ಜೀವನ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಮುಂದಿನ 15 ದಿನಗಳ ಒಳಗಾಗಿ ಇಲಾಖೆ ಸಿಬ್ಬಂದಿಗಳಿಗೆ ಪೂರ್ಣ ವೇತನ ಪಾವತಿ ಮಾಡದಿದ್ದಲ್ಲಿ ದ.22ರ ಬಳಿಕ ನಗದು ಸಂಗ್ರಹಕಾರರಾದ ಎಲ್ಲಾ ಸಿಬ್ಬಂದಿಗಳು ತಮ್ಮ ಕುಟುಂಬ ನಿರ್ವಹಣೆಗಾಗಿ ತಾತ್ಕಾಲಿಕ ಮೊತ್ತವನ್ನು ತಮ್ಮ ಸಂಗ್ರಹದಲ್ಲಿ ಕಡಿತ ಮಾಡಿ ಸಂಬಂದಪಟ್ಟ ದಾಖಲಾತಿಗಳಲ್ಲಿ ವೇತನ ಕಡಿಗೊಳಿಸಿದ ಷರಾ ಬರೆದು ಕೊಡುವ ವೇತನ ಕಡಿತ ಚಳವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಕೆಸ್ಸಾರ್ಟಿಸಿ ಮಜ್ದೂರ್ ಸಂಘದ ಪುತ್ತೂರು ವಿಭಾಗದ ಪ್ರಧಾನ ವಕ್ತಾರ ಶಾಂತಾರಾಮ ವಿಟ್ಲ ತಿಳಿಸಿದ್ದಾರೆ.

ಸಿಬ್ಬಂದಿಗಳ ಹಿತದೃಷ್ಟಿಯಿಂದ ಈಗಾಗಲೇ ಸಂಘವು ಧರಣಿ ಸತ್ಯಾಗ್ರಹ, ಅಮರಣಾಂತ ಉಪವಾಸವನ್ನು ಹಮ್ಮಿಕೊಂಡಿತ್ತು. ಆ ಸಂದರ್ಭದಲ್ಲಿ ಜಿಲ್ಲೆಯ ಉಸ್ತುವಾರಿ ಮಂತ್ರಿಗಳು, ಶಾಸಕರು ಹಾಗೂ ಕೇಂದ್ರ ಕಚೇರಿಯ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಒಂದು ತಿಂಗಳ ಒಳಗಾಗಿ ಬೇಡಿಕೆಯನ್ನು ಪರಿಹರಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ನಿವೃತ್ತ ನೌಕರರ ಗ್ರಾಚ್ಯುಟಿಯನ್ನು 2021ರ ತನಕ ಪಾವತಿ ಮಾಡಿರುತ್ತಾರೆ.

ಆದರೆ ನಷ್ಟದಲ್ಲಿ ನಡೆಯುತ್ತಿರುವ ಬಿಎಂಟಿಸಿ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯು ಸಿಬ್ಬಂದಿಗಳಿಗೆ ಪೂರ್ಣ ಪ್ರಮಾಣದಲ್ಲಿ ವೇತನ ಬಿಡುಗಡೆ ಮಾಡಿದೆ. ಆದರೆ ಆರ್ಥಿಕ ಸದೃಡತೆಯಲ್ಲಿರುವ ಕೆಸ್ಸಾರ್ಟಿಸಿ ಸಂಸ್ಥೆ ಮಾತ್ರ ಈ ವ್ಯವಸ್ಥೆ ಮಾಡಿಲ್ಲ. ಈ ನಿಟ್ಟಿನಲ್ಲಿ ವೇತನ ಕಡಿತ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಸ್ಸಾರ್ಟಿಸಿ ಮಜ್ದೂರ್ ಸಂಘದ ಅಧ್ಯಕ್ಷ ಗಿರೀಶ್ ಮಳಿ, ಪ್ರಧಾನ ಕಾರ್ಯದರ್ಶಿ ಬಿ. ರಾಮಕೃಷ್ಣ, ಪುತ್ತೂರು ಘಟಕದ ಅಧ್ಯಕ್ಷ ವೆಂಕಟ್ರಮಣ ಭಟ್ ಕೆ, ಉಪಾಧ್ಯಕ್ಷರಾದ ಸಂಜೀವ ಗೌಡ, ಸಂಜೀವ ಗೌಡ, ಸತ್ಯಶಂಕರ ಭಟ್, ಸಹ ಸಂಘಟನಾ ಕಾರ್ಯದರ್ಶಿ ಮಹಾಬಲ ಜಿ, ಸದಸ್ಯ ರಾಮಚಂದ್ರ ಅಡಪ ಅವರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.