ವಿಟ್ಲದ ಸಪ್ತ ಜ್ಯುವೆಲ್ಸ್ ನಲ್ಲಿ ‘ಸಪ್ತ ಸ್ವರ್ಣ ಸಂಭ್ರಮ’ಕ್ಕೆ ಚಾಲನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

            ಅತ್ಯಲ್ಪ‌ ಸಮಯದಲ್ಲಿ ಜನರ ಮನಸ್ಸನ್ನು ಗೆಲ್ಲುವಲ್ಲಿ  ಸಂಸ್ಥೆ ಯಶಸ್ವಿಯಾಗಿದೆ : ಡಾ.ಪದ್ಮರಾಜ್

ವಿಟ್ಲ:  ಚಿನ್ನಾಭರಣ ಕ್ಷೇತ್ರದಲ್ಲಿ ಅತ್ಯಲ್ಪ ಅವಧಿಯಲ್ಲೇ ಗ್ರಾಮೀಣ ಭಾಗದ ಜನರ ಮನ ಗೆದ್ದ ಸಪ್ತ ವೆಂಚರ್ಸ್‌ನ ಅಧೀನದಲ್ಲಿರುವ ವಿಟ್ಲ ಎಂಪಾಯರ್ ಮಾಲ್‌ನಲ್ಲಿ ಕಾರ್ಯಾಚರಿಸುತ್ತಿರುವ  ಸಪ್ತ ಜ್ಯುವೆಲ್ಸ್ ತನ್ನ ಐದನೇ ವರ್ಷದ ಪಾದಾರ್ಪಣೆ ಪ್ರಯುಕ್ತ  ವಿಟ್ಲ ಶಾಖೆಯಲ್ಲಿ ಆಯೋಜಿಸಿರುವ ‘ಸಪ್ತ ಸ್ವರ್ಣ ಸಂಭ್ರಮ’ ಕಾರ್ಯಕ್ರಮಕ್ಕೆ ಡಿ.೪ರಂದು    ವಿಟ್ಲ ಶಂಕರ ಚಿಕಿತ್ಸಾಲಯದ ಡಾ.ಪದ್ಮರಾಜ್  ರವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ವ್ಯಾಪಾರ ವ್ಯವಹಾರದಲ್ಲಿ ಪ್ರಾಮಾಣಿಕತೆ, ದಕ್ಷತೆ, ನಿಷ್ಠೆ ಅತೀ ಮುಖ್ಯ. ಅದಿದ್ದರೆ ಯಾವುದೇ ವ್ಯವಹಾರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಸಪ್ತ ಜ್ಯುವೆಲ್ಲರಿಯು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಸಂಸ್ಥೆಯಾಗಿದೆ. ಅತ್ಯಲ್ಪ‌ ಸಮಯದಲ್ಲಿ ಜನರ ಮನಸ್ಸನ್ನು ಗೆಲ್ಲುವಲ್ಲಿ  ಸಂಸ್ಥೆ ಯಶಸ್ವಿಯಾಗಿದೆ ಎಂದು ಶುಭಹಾರೈಸಿದರು.

ಪಾದಾರ್ಪಣೆ ಪ್ರಯುಕ್ತ ಕಡಿಮೆ ತೂಕದಲ್ಲಿ ಗ್ರ್ಯಾಂಡ್ ಕಾಣುವಂತಹ ವಿನೂತನ ವಿನ್ಯಾಸಗಳ ಚಿನ್ನಾಭರಣವನ್ನು ಅತಿಥಿಗಳು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ  ಶಂಕರ್ ಮೆಡಿಕಲ್ ನ ಮಾಲಕ ದುರ್ಗಾಪ್ರಸಾದ್, ಸಂಸ್ಥೆಯ ಪಾಲುದಾರರಾದ ಅಜಕ್ಕಳ ಶ್ಯಾಮ ಭಟ್, ಸುದರ್ಶನ್ ಕುಮಾರ್ ಇರ್ಕ್ಲಾಜೆ, ಶಿವಪ್ರಕಾಶ್ ಪಂಜಿಬಲ್ಲೆ, ದೇವಿಪ್ರಸಾದ್ ಚಂಗಲ್ಪಾಡಿ, ನಿಶಾ ಪ್ರಶಾಂತ್ ಸರಳಾಯ, ಕೃಷ್ಣಪ್ರಸಾದ್ ಕಡವ, ಗೋವಿಂದರಾಜ ಕಲ್ಲಮಜಲು, ಸುಕುಮಾರ ಕಲ್ಲಮಜಲು ಮೊದಲಾದವರು ಉಪಸ್ಥಿತರಿದ್ದರು.

‘ಸಪ್ತ ಸ್ವರ್ಣ ಸಂಭ್ರಮದ’ ವಿಶೇಷತೆಗಳು: ಸಂಸ್ಥೆ ಐದನೇ ವರುಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂತಸದ ಕ್ಷಣವನ್ನು ತನ್ನ ಗ್ರಾಹಕರೊಂದಿಗೆ ಹಂಚಿಕೊಳ್ಳಲು ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಡಿ.೪ರಿಂದ ‘ಸಪ್ತ ಸ್ವರ್ಣ ಸಂಭ್ರಮ’ವನ್ನು ಆಯೋಜನೆ‌ ಮಾಡಿದೆ. ಈ ಸಂದರ್ಭದಲ್ಲಿ ಚಿನ್ನಾಭರಣ ಖರೀದಿ ಮಾಡಿದಲ್ಲಿ ವಿಶೇಷ ರಿಯಾಯಿತಿ ಯೊಂದಿಗೆ ಉಡುಗೊರೆಗಳು ದೊರೆಯಲಿದೆ.

ಸಪ್ತ ಸ್ವರ್ಣ ಸಂಭ್ರಮದ ಕೊಡುಗೆಗಳು: `ಸಪ್ತ ಸ್ವರ್ಣ ಸಂಭ್ರಮ’ದ ಪ್ರಯುಕ್ತ ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳ ಖರೀದಿಸಿದಲ್ಲಿ ವಿಶೇಷ ರಿಯಾಯಿತಿಯನ್ನು ಹಾಗೂ ಕೊಡುಗೆಗಳನ್ನು ನೀಡಲಿದೆ.  ಚಿನ್ನಾಭರಣಗಳ ಮೇಲೆ ಪ್ರತಿ ಗ್ರಾಂ.ಗೆ 75ರೂಪಾಯಿ ಕಡಿತ. ಆಭರಣಗಳ ಮುಂಗಡ ಆರ್ಡರ್ ನಲ್ಲಿ ವಿಎ ಮೇಲೆ ವಿಶೇಷ ರಿಯಾಯಿತಿ ದೊರೆಯಲಿದೆ. ಬೆಳ್ಳಿಯ ಆಭರಣ ಮೇಲೆ ೧೦% ಹಾಗೂ ಬೆಳ್ಳಿಯ ಪರಿಕರಗಳ ಮೇಲೆ ೫% ವರೆಗೆ ರಿಯಾಯಿತಿ ದೊರೆಯಲಿದೆ.  ರತ್ನದ ಹರಳು(ಬರ್ತ್ ಸ್ಟೋನ್)ಗಳ ಮೇಲೆ  ೧೦% ರಿಯಾಯಿತಿ ದೊರೆಯಲಿದೆ.

`ಸಪ್ತ ಅಕ್ಷಯ’ ಆಭರಣ ಖರೀದಿ ಯೋಜನೆ: ಇದು ಗ್ರಾಹಕರಿಗೆ ಉಪಕಾರಿಯಾಗಿರುವ ಒಂದು ಯೋಜನೆಯಾಗಿದೆ.  ಗ್ರಾಹಕರು ಪ್ರತಿ ತಿಂಗಳು ತಮ್ಮ ಆದಾಯದಲ್ಲಿನ ಸಣ್ಣಮೊತ್ತವನ್ನು ವಿನಿಯೋಗಿಸಿ, ಪ್ರತಿ ವರುಷ ಬಂಗಾರವನ್ನು ಖರೀದಿಸುವ ಒಂದು ಉತ್ತಮ ಯೋಜನೆಯಾಗಿದೆ. ಹನ್ನೊಂದು ತಿಂಗಳ ಯೋಜನೆ ಇದಾಗಿದ್ದು, ಪ್ರತೀ ತಿಂಗಳು ೫೦೦ ರೂಪಾಯಿಗಿಂತ ಮೇಲ್ಪಟ್ಟು ಎಷ್ಟು ಹಣ ಬೇಕಾದರೂ ಪಾವತಿಸಬಹುದಾಗಿದೆ.  ಆ ಮೊತ್ತದ ಚಿನ್ನಾಭರಣವನ್ನು ತಮ್ಮ ಅಕೌಂಟಿನಲ್ಲಿ ಜಮೆ ಮಾಡಲಾಗುತ್ತದೆ. ತಾವು ಪಾವತಿಸಿದ ಮೊತ್ತಕ್ಕೆ ಕೊನೆಯಲ್ಲಿ ಆವರ್ತನಾ ಪದ್ಧತಿಯಲ್ಲಿ ಬೋನಸ್ ಲಭಿಸಲಿದೆ ಮಾತ್ರವಲ್ಲದೆ ಆಭರಣ ಖರೀದಿಸುವ ವೇಳೆ ವಿಎ ಮೇಲೆ ೧೦% ರಿಯಾಯಿತಿ ದೊರೆಯಲಿದೆ.

ಸಪ್ತ ಜ್ಯುವೆಲ್ಸ್‌ನ ವಿಶೇಷತೆಗಳು: ಉತ್ಕೃಷ್ಟ ಆಭರಣಗಳು ವಿಶ್ವಾಸನೀಯ ಬೆಲೆಯಲ್ಲಿ ದೊರೆಯುವ ಸಂಸ್ಥೆ ಇದಾಗಿದೆ. ಗ್ರಾಹಕರ ಆಭರಣಗಳ ವಿನ್ಯಾಸದ ಆಯ್ಕೆಗೆ ವಿಶೇಷ ಸಹಕಾರವನ್ನು ನೀಡಲಾಗುತ್ತಿದೆ ಮಾತ್ರವಲ್ಲದೆ ಪ್ರತಿಯೊಂದೂ ಆಭರಣಗಳ ತಯಾರಿಕೆಯ ಸಂದರ್ಭದಲ್ಲಿ ವಿಶೇಷ ಕಾಳಜಿಯನ್ನು ವಹಿಸಲಾಗುತ್ತದೆ. ಎಲ್ಲಾ ವರ್ಗದ ಹಾಗೂ ಎಲ್ಲಾ ಪೀಳಿಗೆಯ ಜನರ ಮನಸ್ಸಿಗೆ ಒಪ್ಪುವಂತಹ ಆಭರಣಗಳ ಬೃಹತ್ ಸಂಗ್ರಹವೇ ಇಲ್ಲಿದೆ. ಇದೊಂದು ೯೧೬ಹಾಲ್ ಮಾರ್ಕ್ ಹೊಂದಿರುವ ಚಿನ್ನಾಭರಣಗಳ ಮಾರಾಟ ಮಳಿಗೆಯಾಗಿದೆ.  ದೈವದ ಬೆಳ್ಳಿಯ ಅಭರಣಗಳ ವಿವಿಧ ಬಗೆಯ ಬೆಳ್ಳಿಯ ಅಭರಣಗಳು ಇಲ್ಲಿ ಲಭ್ಯವಿದೆ‌.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.