ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಿನ್ನೆಲೆ: ಕೋಡಿಂಬಾಡಿಯಲ್ಲಿ ಬೃಹತ್ ಗ್ರಾಮ ಸ್ವಚ್ಛತಾ ಅಭಿಯಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋಡಿಂಬಾಡಿಯ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ದ.21ರಿಂದ 27ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬೃಹತ್ ಗ್ರಾಮ ಸ್ವಚ್ಛತಾ ಅಭಿಯಾನ ದ.5ರಂದು ನಡೆಯುತ್ತಿದೆ. ಬೆಳಿಗ್ಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ.

ಕೋಡಿಂಬಾಡಿಯ ಶಾಂತಿನಗರದಿಂದ ವಿನಾಯಕನಗರದವರೆಗೆ, ಸೇಡಿಯಾಪುನಿಂದ ವಿನಾಯಕನಗರದವರೆಗೆ ಮತ್ತು ಪೆರ್ನೆಯಿಂದ ವಿನಾಯಕನಗರದವರೆಗೆ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದೆ. ವಿನಾಯಕನಗರದಲ್ಲಿ ಅಭಿಯಾನದ ಸಮಾರೋಪ ನಡೆಯಲಿದೆ.‌ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಮತ್ತು ಉಪಸಮಿತಿಯ ಪದಾಧಿಕಾರಿಗಳು, ಸದಸ್ಯರು ಸಹಿತ ಹಲವರು ಭಾಗವಹಿಸಿದ್ದಾರೆ. ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದವರಿಗೆ ಬೆಳಿಗ್ಗೆ ಚಾ/ಕಾಫಿ, ಅವಲಕ್ಕಿ-ಮೊಸರು, ಬಸಳೆ ಪುಂಡಿ, ಬಿಸ್ಕುಟ್ ರೊಟ್ಟಿ, ನೀರುಳ್ಳಿ ಬಜೆ ಮತ್ತು ರಾಗಿ ಮಣ್ಣಿಯ ವ್ಯವಸ್ಥೆ ಮಾಡಲಾಗಿತ್ತು.‌ ಮಧ್ಯಾಹ್ನದ ಭೋಜನಕ್ಕೆ ಹುಣಸೆ ಹುಳಿ ಉಪ್ಪಿನಕಾಯಿ, ಅಂಬಡೆ-ಕಂಚಲ (ಹಾಗಲಕಾಯಿ) ಮಣಸ್ಕಾಯಿ, ಚಪಾತಿ -ಬಿಳಿ ಅವರೆ ಗಸಿ, ಕುಚಲಕ್ಕಿ ಅನ್ನ, ನುಗ್ಗೆ ಬದನೆ ಸಾಂಬಾರ್, ಬೆಂಡೆ ಕಾಯಿ ಸಾರು,ಮೊಸರು, ಹೆಸರು ಬೇಳೆ ಪಾಯಸ ಮತ್ತು ಮಜ್ಜಿಗೆಯ ವ್ಯವಸ್ಥೆ ಮಾಡಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.