ಕುಂಬ್ರ: ವಿಧಾನಪರಿಷತ್ ಚುನಾವಣೆ-ಬಿಜೆಪಿಯಿಂದ ಚುನಾವಣಾ ಪ್ರಚಾರ ಸಭೆ

ಆಡಳಿತ ವೈಫಲ್ಯದಿಂದಾಗಿ ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ; ಸಚಿವ ಅಂಗಾರ


ಪುತ್ತೂರು:ದೇಶದಲ್ಲಿ ೬೦ ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಅಷ್ಟೂ ಅವಧಿಯಲ್ಲಿ ಕೇವಲ ಘೋಷಣೆಗಳನ್ನು ಕೂಗಿತ್ತೇ ವಿನ ಅಭಿವೃದ್ದಿ ಕಾರ್ಯವನ್ನು ಮಾಡಿಲ್ಲ, ಇದನ್ನು ಮನಗಂಡ ದೇಶದ ಜನ ದೇಶದಿಂದಲೇ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯುವುದರ ಜೊತೆಗೆ ಆ ಪಕ್ಷವನ್ನೇ ನೆಲಕಚ್ಚುವಂತೆ ಮಾಡಿದ್ದಾರೆ. ಪ್ರತೀ ಚುನಾವಣೆಯಲ್ಲೂ ಅವರು ಸೋಲನ್ನೇ ಅನುಭವಿಸುತ್ತಾರೆ ಈ ಬಾರಿಯ ವಿಧಾನಪರಿಷತ್ ಚುನವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಹೇಳಿದರು.

ಅವರು ಕುಂಬ್ರ ನವೋದಯ ರೈತ ಸಭಾ ಭವನದಲ್ಲಿ ವಿಧಾನಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿರುವ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ತಂತ್ರಗರಿಕೆಯನ್ನು ಬಳಸುವಂತಿದೆ, ಅಪಪ್ರಚಾರ ಮತ್ತು ಆಮಿಷಗಳನ್ನು ಒಡ್ಡಿ ಮತವನ್ನು ಸೆಳೆಯಲು ಪ್ರಯತ್ನವನ್ನು ಮಾಡುತ್ತಿದೆ. ಆದರೆ ಬಿಜೆಪಿ ಕಾರ್ಯಕರ್ತರು ಪ್ರಬುದ್ದರಿದ್ದಾರೆ ಯಾವುದೇ ತಂತ್ರಗರಿಕೆಯಿಂದ ಅವರನ್ನು ಸೆಳೆಯಲು ಆ ಪಕ್ಷಕ್ಕೆ ಸಾಧ್ಯವಿಲ್ಲ. ಇಂದು ದೇಶದಲ್ಲಿ ಗ್ರಾಮಗಳ ಅಭಿವೃದ್ದಿಯಾಗಿದ್ದರೆ ಅದಕ್ಕೆ ವಾಜಪೇಯಿ ಸರಕಾರ ಕಾರಣವಾಗಿದೆ. ಗ್ರಾಮಸಡಕ್ ಯೋಜನೆಯನ್ನು ಜಾರಿಗೆ ತರುವ ಮೂಲಕ ವಾಜಪೇಯಿ ನೇತೃತ್ವದ ಸರಕಾರ ದೇಶದ ಹಳ್ಳಿಗಳ ಅಭಿವೃದ್ದಿ ಜೊತೆಗೆ ಗ್ರಾಮಕ್ಕೆ ಅಧಿಕಾರವನ್ನು ಕೊಟ್ಟಿದೆ. ಕಾಂಗ್ರೆಸ್ ಈ ದೇಶದಲ್ಲಿ ಹಲವು ವರ್ಷಗಳ ಕಾಲ ಆಡಳಿತ ನಡೆಸಿದರೂ ಗ್ರಾಮಗಳ ಅಭಿವೃದ್ದಿಗೆ ಏನೂ ಕೊಡುಗೆಯನ್ನು ನೀಡಿಲ್ಲ ಎಂಬುದನ್ನು ನಾವು ತಿಳಿದುಕೊಳ್ಳಬೇಕಿದೆ ಎಂದ ಅವರು, ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ದೇಶದಲ್ಲಿ ರಾ. ಹೆದ್ದಾರಿಗಳು ಅತ್ಯಂತ ಕಳಪೆಯಾಗಿತ್ತು ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹೆದ್ದಾರಿ ಸಂಚಾರಕ್ಕೆ ಯೋಗ್ಯವಾದವು ಎಂಬ ವಿಚಾರ ದೇಶದ ಜನತೆಗೆ ಗೊತ್ತಿದೆ. ದೇಶದಲ್ಲಿ ಕಾಂಗ್ರೆಸ್ ಆಡಳಿತ ಮಾಡಿದ್ದು ಮಾತ್ರ ದೇಶಕ್ಕೆ ಏನೂ ಕೊಡುಗೆಯನ್ನು ನೀಡಿಲ್ಲ ಈ ಕಾರಣಕ್ಕೆ ದೇಶದ ಜನತೆ ಕಾಂಗ್ರೆಸ್ಸನ್ನು ತಿರಸ್ಕಾರ ಮಾಡಿದ್ದಾರೆ. ಈ ಬಾರಿಯ ವಿಧಾನ ಪರಿಷತ್ ಚುನವಣೆಯಲ್ಲೂ ಕಾಂಗ್ರೆಸ್ಸನ್ನು ತಿರಸ್ಕಾರ ಮಾಡುತ್ತಾರೆ. ಬಿಜೆಪಿಗರು ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸಿ ನಾವು ಗೆಲುವು ಸಾಧಿಸಲಿzವೆ ಎಂದು ಹೇಳಿದರು.


ಕಾಂಗ್ರೆಸ್ ದೇಶದಿಂದಲೇ ಮಾಯವಾಗುತ್ತಿದೆ: ಮಠಂದೂರು: ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ ದೇಶದಲ್ಲಿ ಕಾಂಗ್ರೆಸ್ ಮಾಯವಾಗುತ್ತಲೇ ಇದೆ. ದೇಶದ ವಿವಿಧ ಭಾಗದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುಣ್ಣುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಮುಳುಗುವ ದೋಣಿಯಂತಾಗಿದೆ, ಮುಳುಗುವ ದೋಣಿಯಲ್ಲಿ ಯಾರೂ ಹತ್ತಬೇಡಿ. ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ನಿಮ್ಮ ಮತವನ್ನು ಹಾಕಿ ಎಂದರಲ್ಲದೆ ಕಾಂಗ್ರೆಸ್‌ನವರ ಆಮಿಷಗಳಿಗೆ ನಮ್ಮ ಕಾರ್ಯಕರ್ತರು ಯಾವತ್ತೂ ಬಲಿಯಾಗುವುದಿಲ್ಲ ಎಂಬ ದೃಡ ವಿಶ್ವಾಸ ನಮಗಿದೆ ಎಂದರು.

ದೇಶದ ಸಂವಿಧಾನವನ್ನು ರಚನೆ ಮಾಡಿದ ಅಂಬೇಡ್ಕರ್‌ಗೆ ಗೌರವ ನೀಡುವ ಕೆಲಸವನ್ನು ಕಾಂಗ್ರೆಸ್ ತನ್ನ ಆಡಳಿತದಲ್ಲಿ ಮಾಡಿಲ್ಲ . ಕಾಂಗ್ರೆಸ್ ನೀಡದ ಗೌರವವನ್ನು ಬಿಜೆಪಿ ನೀಡಿದೆ. ಒಬ್ಬ ತಳಮಟ್ಟದ ವ್ಯಕ್ತಿ ಇಂದು ದೇಶದ ಚುಕ್ಕಾಣಿ ಹಿಡಿದಿದ್ದರೆ ಅದಕ್ಕೆ ನಮ್ಮ ದೇಶದ ಸಂವಿಧಾನ ಕಾರಣ ಎಂಬುದನ್ನು ನಾವು ಮರೆಯಬಾರದು. ಈ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಗಾಂಧಿ ಎಂಬ ಹೆಸರಿನಲ್ಲಿ ವಂಶಾಡಳಿತವನ್ನು ಮಾಡುವ ಮೂಲಕ ದೇಶವನ್ನು ಅಧೋಗತಿಗೆ ತಂದೊಡ್ಡಿದೆ. ಈ ಕಾರಣಕ್ಕೆ ದೇಶದ ಮತದಾರ ಕಾಂಗ್ರೆಸ್‌ನಿಂದ ದೂರವಾಗಿ ಬಿಜೆಪಿ ಬೆಂಬಲಿಸಿದ ಕಾರಣ ಕಳೆದ ೭ ವರ್ಷದ ಅವಧಿಯಲ್ಲಿ ದೇಶ ಸಾಕಷ್ಟು ಅಭಿವೃದ್ದಿಯನ್ನು ಕಂಡಿದೆ. ಗ್ರಾಮ ಸ್ವರಾಜ್ಯ ಗಾಂಧೀಜಿಯ ಕನಸಾಗಿತ್ತು ಆದರೆ ಅದನ್ನು ಸಾಕಾರಗೊಳಿಸಿದ್ದು ಬಿಜೆಪಿಯಾಗಿದೆ, ಪ್ರಧಾನಿ ಮೋದಿಯವರ ಆತ್ಮನಿರ್ಭರ ಯೋಜನೆಯ ಮೂಲಕ ಜನ ಸ್ವಾವಲಂಬನೆಯ ಬದುಕು ಕಟ್ಟಿಕೊಂಡರು ಎಂದು ಹೇಳಿದ ಅವರು ಮುಂಬರುವ ವಿಧಾನಸಭೆ, ಲೋಕಸಭೆ ಚುನಾವಣೆಗೆ ಈಗಲೇ ಸಜ್ಜಾಗುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು.

ಗ್ರಾಮದ ಏಳಿಗೆಗೆ ಶ್ರಮಿಸುವೆ: ಕೋಟ 

ನಾನು ಗ್ರಾಪಂ ಸದಸ್ಯನಾಗಿ ಹಂತಹಂತವಾಗಿ ರಾಜಕೀಯದಲ್ಲಿ ಮೇಲೆ ಬಂದ ವ್ಯಕ್ತಿ. ಬಿಜೆಪಿ ನನಗೆ ಸಾಕಷ್ಟು ಅವಕಾಶವನ್ನು ನೀಡಿದೆ. ಈ ಬಾರಿಯ ಚುನಾವಣೆಯಲ್ಲೂ ನನಗೆ ಅವಕಾಶ ನೀಡಿದೆ. ಎಲ್ಲಾ ಕಾರ್ಯಕರ್ತರ ಶ್ರಮ ಮತ್ತು ಮತದಾರರ ವಿಶ್ವಾಸದಿಂದ ನಾನು ಗೆಲ್ಲುತ್ತೇನೆ ಎಂಬ ವಿಶ್ವಾಸ ನನಗಿದೆ. ಗ್ರಾಮಗಳ ಅಭಿವೃದ್ದಿಗಾಗಿ ಶ್ರಮವಹಿಸುವುದಾಗಿ ಹೇಳಿದ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಅವರು, ಈ ಹಿಂದೆ ಮಾಡಿರುವ ರೀತಿಯಲ್ಲೇ ಅಭಿವೃದ್ದಿ ಕೆಲಸಗಳನ್ನು ಮುಂದುವರೆಸುವುದಾಗಿ ಭರವಸೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಮಾತನಾಡಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊನೆಯ ಪ್ರಚಾರ ಸಭೆ ಇದಾಗಿದ್ದು , ಈ ಕ್ಷೇತ್ರದಲ್ಲಿ ಉತ್ತಮ ಬೆಂಬಲ ನಮಗಿದೆ. ಇದುವರೆಗೆ ನಡೆದ ಒಟ್ಟು ಸಭೆಯಲ್ಲಿ ಶೇ. ೯೨ ಬೆಂಬಲ ನಮಗೆ ಲಭ್ಯವಾಗಿದ್ದು ನಮ್ಮ ಅಭ್ಯರ್ಥಿಯ ಗೆಲುವು ನಿಶ್ಚಿತವಾಗಿದೆ. ಪ್ರಥಮ ಸ್ಥಾನವಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಆಯ್ಕೆಯಗಿದ್ದು ದ್ವಿತೀಯ ಸ್ಥಾನಿಯಾಗಿ ಪುತ್ತೂರು ವಿಧಾನಸಭಾ ಕ್ಷೇತ್ರ ಆಯ್ಕೆಯಾಗಿದೆ. ಕಾರ್ಯಕರ್ತರ ಶ್ರಮ ಮತ್ತು ಎಲ್ಲಾ ನಾಯಕರ ಒಗ್ಗಟ್ಟಿನಿಂದ ಇದು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ನಾವು ಶೇ. ೧೦೦ ಬೆಳವಣಿಗೆಯನ್ನು ಸಾಧಿಸಲಿzವೆ ಎಂದು ಹೇಳಿದರು.

ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟೇಶ್ ವಳಲಂಬೆ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಉಪಸ್ಥಿತರಿದ್ದರು. ಸಭೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಆರ್ ಸಿ ನಾರಾಯಣ, ಜಿಲ್ಲಾ ಬಿಜೆಪಿ ಪ್ರ. ಕಾರ್ಯದರ್ಶಿ ಕಸ್ತೂರಿ ಪಂಜ, ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಳ, ಜಿಲ್ಲಾ ಕಾಯದರ್ಶಿ ಪೂಜಾ ಪೈ, ಜಿಲ್ಲಾ ಉಪಾಧ್ಯಕ್ಷ ಸಂತೋಷ್‌ಕುಮಾರ್ ರೈ, ಪ್ರಭಾ ಮಾಲಿನಿ, ಶಕ್ತಿ ಕೇಂದ್ರದ ಪ್ರಮುಖರಾದ ಲೋಕೇಶ್ ಚಾಕೊಟೆ, ನಾರಾಯಣಪೂಜಾರಿ ಕುರಿಕ್ಕಾರ, ಪ್ರಕಾಶ್ ರೈ ಇಳಂತಾಜೆ, ಸತೀಶ್ ಪಾಂಬಾರು, ದೀಪಕ್ ರೈ ಮುಂಡ್ಯ, ಪ್ರದೀಪ್ ರೈ ಕರ್ನೂರು, ಸಂತೋಷ್ ಆಳ್ವ, ಸಚಿನ್ ರೈ, ಪದ್ಮನಾಭ ಬೋರ್ಕರ್, ರಾಜೇಶ್ ರೈ ಪರ್ಪುಂಜ, ಜಗನ್ನಾಥ ರೈ ಕೊಮ್ಮಂಡ, ಸದಾಶಿವ ರೈ ಸೂರಂಬೈಲು ಸೇರಿದಂತೆ ಹಲವು ಮಂದಿ ಜಿಲ್ಲಾ ನಾಯಕರು, ಒಳಮೊಗ್ರು, ನಿಡ್ಪಳ್ಳಿ, ಬೆಟ್ಟಂಪಾಡಿ, ಪಾಣಾಜೆ, ಅರಿಯಡ್ಕ,ಬಡಗನ್ನೂರು, ನೆಟ್ಟಣಿಗೆ ಮುಡ್ನೂರು, ಕೊಳ್ತಿಗೆ, ಕೆದಂಬಾಡಿ, ಕೆಯ್ಯೂರು, ಗ್ರಾಮಗಳ ಗ್ರಾಪಂ ಸದಸ್ಯರು ಭಾಗವಹಿಸಿದ್ದರು.

ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿದರು. ಬಂಟ್ವಾಳ ಪೂಡಾ ಚಯರ್‌ಮೆನ್ ದೇವದಾಸ್ ಶೆಟ್ಟಿ ಚುನಾವಣಾ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಉಷಾ ನಾರಾಯಣ ಪ್ರಾರ್ಥಿಸಿದರು. ನೆಟ್ಟಣಿಗೆ ಮುಡ್ನೂರು ಶಕ್ತಿ ಕೆಂದ್ರದ ಅಧ್ಯಕ್ಷ ವಿಜಯಕುಮಾರ್ ರೈ ಕೋರಂಗ ವಂದಿಸಿದರು. ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್‌ಕುಮಾರ್ ಶಾಂತಿವನ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.