ಆಲಂಕಾರಿನಲ್ಲಿ ಕೊಯಿಲ, ಸವಣೂರು ಬಿ.ಜೆ.ಪಿ ಮಹಾಶಕ್ತಿ ಕೇಂದ್ರದ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಆಲಂಕಾರು : ವಿಧಾನ ಪರಿಷತ್ ಚುನಾವಣೆಯ ಬಿ.ಜೆ.ಪಿ ಸುಳ್ಯ ಮಂಡಲ ಕೊಯಿಲ,ಸವಣೂರು ಮಹಾಶಕ್ತಿ ಕೇಂದ್ರದ ಪ್ರಚಾರ ಸಭೆ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ದೀನದಯಾಳು ರೈತ ಸಭಾಭವನದಲ್ಲಿ ನಡೆಯಿತು. ಅಭ್ಯರ್ಥಿಯಾಗಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿಯವರು ಡಿ.10 ರಂದು ಕರ್ನಾಟಕ ರಾಜ್ಯ ವಿಧಾನ ಪರಿಷತ್ನ ಸ್ಥಳೀಯಾಡಳಿತ ಸಂಸ್ಥೆಗಳ ಕ್ಷೇತ್ರದ ಚುನಾವಣೆ ನಡೆಯಲಿದ್ದು. ಹಿರಿಯರ ಸೂಚನೆಯಂತೆ ಭಾರತೀಯ ಜನತಾ ಪಾರ್ಟಿಯಿಂದ ಈಗಾಗಲೇ ನಾಮಪತ್ರ ಸಲ್ಲಿಸಿರುತ್ತೇನೆ. ಗ್ರಾ.ಪಂ ಸದಸ್ಯನಾಗಿ ನಾನು ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದು, ತಾ.ಪಂ ಸದಸ್ಯನಾಗಿ, ಜಿ.ಪಂ ಸದಸ್ಯನಾಗಿ ಕರ್ತವ್ಯ ನಿರ್ವಹಿಸಿದ್ದು ಮೂರು ಬಾರಿ ಪರಿಷತ್ ಸದಸ್ಯನಾಗಿ ತಾವೆಲ್ಲರೂ ಅಯ್ಕೆ ಮಾಡಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ್ದಿರಿ. ನನ್ನ ಪಾರ್ಟಿ ನನಗೆ ಮೂರು ಬಾರಿ ಸಚಿವನಾಗಿ, ಸಭಾನಾಯಕನಾಗಿ, ಒಂದು ಬಾರಿ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.

ರಾಜ್ಯದ ಧಾರ್ಮಿಕ ದತ್ತಿ ಸಚಿವನಾಗಿ “ಸಪ್ತಪದಿ” ಯೋಜನೆ, ಮೀನುಗಾರಿಕಾ ಸಚಿವನಾಗಿ ಬಂದರು ಅಭಿವೃದ್ದಿ ಹಾಗೂ ವಿವಿಧ ಕೆಲಸ ಕಾರ್ಯಗಳನ್ನು ಮಾಡಿ ಸಮಾಧಾನ ತಂದಿದೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವನಾಗಿ ಕಡು ಬಡವರ ಬದುಕಿನಲ್ಲಿ ‘ ಅಂತ್ಯೋದಯ ‘ ಅನುಷ್ಟಾನಕ್ಕೆ ದೃಡವಾದ ಹೆಜ್ಜೆ ಇಟ್ಟಿದ್ದೇವೆ. ಎಂದು ತಿಳಿಸಿ ಗ್ರಾ.ಪಂ ಅಧ್ಯಕ್ಷರ, ಉಪಾಧ್ಯಕ್ಷರ, ಸದಸ್ಯರ ಜವಾಬ್ದಾರಿಯನ್ನು ತಿಳಿಸಿ ಗ್ರಾ.ಪಂ ಸದಸ್ಯರು ಗೌರವಯುತವಾಗಿ ಬದುಕ ಬೇಕೆಂಬ ನೆಲೆಯಲ್ಲಿ ನಾನು ಪ್ರಾಮಾಣಿಕ ಕೆಲಸ ಮಾಡುವುದಾಗಿ ತಿಳಿಸಿ ಡಿ.10 ರಂದು ನಡೆಯುವ ಚುನಾವಣೆಯಲ್ಲಿ ಅತ್ಯಧಿಕ ಬಹುಮತದಿಂದ ತಾವೆಲ್ಲರೂ ಗೆಲ್ಲಿಸಿಕೊಡುವಂತೆ ವಿನಂತಿಸಿದರು ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿ.ಜೆ.ಪಿ ಅಭ್ಯರ್ಥಿಯಾನ್ನಾಗಿ ಮಾಡಿದ್ದಕ್ಕೆ ಬಿ.ಜೆ.ಪಿ ರಾಜ್ಯಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಹಾಗೂ ಎಲ್ಲಾ ಬಿ.ಜೆ.ಪಿ ಪದಾದಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

 

ಬಿ.ಜೆ.ಪಿ ರಾಜ್ಯಧ್ಯಕ್ಷರು, ಹಾಗೂ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಮಾತನಾಡಿ ಗ್ರಾಮ ಸ್ವರಾಜ್ಯದ ಮೂಲಕ ರಾಮರಾಜ್ಯವಾಗಬೇಕು ಆ ಮೂಲಕ ರಾಷ್ಟ್ರೋತ್ತನದ ಕೆಲಸ ಕಾರ್ಯಗಳು ಆಗಬೇಕು. ನಮ್ಮ ದೇಶದ ಪ್ರದಾನಿ ನರೇಂದ್ರ ಮೋದಿಯವರು ಗ್ರಾ.ಪಂ ನೇರವಾಗಿ ಅನುದಾನವನ್ನು ನೀಡುವುದರ ಮೂಲಕ ಮಹತ್ಮಾಗಾಂಧಿ ಕಂಡ ಗ್ರಾಮಸ್ವರಾಜ್ ಕನಸನ್ನು ನನಸು ಮಾಡಿದವರು ಎಂದು ತಿಳಿಸಿ ಕೋಟ ಶ್ರೀನಿವಾಸ ಪೂಜಾರಿಯವರು ಪಂಚಾಯತ್ ರಾಜ್ ಆಕ್ಟ್ ಅಭ್ಯಾಸಿಸುವ ಮೂಲಕ ಪ್ರಯೋಗಶೀಲಾ ರಾಜಕಾರಣಿಯಾಗಿ ಬೆಳೆದವರು ಮುಜುರಾಯಿ, ಬಂದರು,ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಕಾರ್ಯವನ್ನು ನಿರ್ವಹಿಸಿದವರು, ತಮ್ಮ ಮತವನ್ನು ಕೋಟ ಶ್ರೀನಿವಾಸ ಪೂಜಾರಿಯವರಿಗೆ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಿಸಿ ಕೊಡುವಂತೆ ತಿಳಿಸಿದರು. ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿ.ಜೆ.ಪಿ 15 ಸ್ಥಾನಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ತಿಳಿಸಿ, ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿ.ಜೆ.ಪಿ 125 ಸ್ಥಾನಕ್ಕಿಂತಲೂ ಹೆಚ್ಚು ಸ್ಥಾನವನ್ನು ಗೆಲ್ಲಲಿದೆ ಎಂದು ಅವರು ತಿಳಿಸಿದರು.

ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಅಂಗಾರ ಎಸ್ ರವರು ಮಾತನಾಡಿ ವಿಧಾನ ಪರಿಷತ್ ಚುನಾವಣೆಯ ಗೆಲುವಿಗಾಗಿ ಮಹಾಶಕ್ತಿ ಕೇಂದ್ರದ ವತಿಯಿಂದ ಎಲ್ಲಾ ಗ್ರಾ.ಪಂ ಅಧ್ಯಕ್ಷರು,ಉಪಾದ್ಯಕ್ಷರ, ಸದಸ್ಯರ ಸಭೆಯನ್ನು ಮಾಡುತ್ತಿರುವುದಾಗಿ ತಿಳಿಸಿ ಸಾಧನೆ ಮಾಡಬೇಕಾದ್ರೆ ಕಾರ್ಯಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ತಿಳಿಸಿ, ದ.ಕ,ಉಡುಪಿಯಲ್ಲಿ ಒಟ್ಟು 6045 ಮತಗಳಿದ್ದು ಅದರಲ್ಲಿ ಬಿ.ಜೆ.ಪಿ 3708 ಮತಗಳಿದ್ದು ಗೆಲ್ಲಲು 2000 ಮತಗಳು ಅಗತ್ಯವಿದ್ದು. ಕೋಟ ಶ್ರೀನಿವಾಸ ಪೂಜಾರಿಯವರ ಹೆಸರಿನ ಮುಂದೆ ಮೊದಲ ಪ್ರಾಶಸ್ತ್ಯದ ಮತವನ್ನುಚಲಾವಣೆ ಮಾಡಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ಅತ್ಯಂತ್ತ ಪ್ರಚಂಡ ಬಹುಮತದಲ್ಲಿ ಗೆಲ್ಲಿಸಿಕೊಡುವಂತೆ ತಿಳಿಸಿದರು. 

ಬಿ.ಜೆ.ಪಿ ಜಿಲ್ಲಾದ್ಯಕ್ಷರಾದ ಸುದರ್ಶನ್ ಮೂಡಬಿದ್ರೆ ಮಾತನಾಡಿ ಚುನಾವಣೆ ಎನ್ನುವಂತಾದ್ದು ರಾಜಕೀಯ ಪಕ್ಷಗಳಿಗೆ ಯುದ್ದವಿದ್ದಂತೆ.ಬಿ.ಜೆ.ಪಿ ರಾಜ್ಯಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ರವರು ಅಧ್ಯಕ್ಷತೆಯಲ್ಲಿ ಬಹಳ ವ್ಯವಸ್ಥಿತವಾಗಿ ಸಭೆ ಸಮಾರಂಭಗಳು ನಡೆಯುತ್ತಿದ್ದು. ನಿಮ್ಮೆಲ್ಲರ ಮತವನ್ನು ಕೋಟ ಶ್ರೀನಿವಾಸ ಪೂಜಾರಿಯವರಿಗೆ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಿಸಿಕೊಡುವಂತೆ ತಿಳಿಸಿ, ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಹೆಚ್ಚು ಮಹತ್ವ ಇದೆ. ಅದ್ದರಿಂದ ಯಾವುದೇ ಮತಗಳು ಅಸಿಂಧು ಆಗದ ರೀತಿಯಲ್ಲಿ ಎಚ್ಚರಿಕೆಯಿಂದ ಮತದಾನ ಮಾಡುವಂತೆ ಗ್ರಾ.ಪಂ ಸದಸ್ಯರಿಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಇತ್ತಿಚಿಗೆ ನಿಧನರಾದ ಮಾಜಿ ಶಾಸಕರಾದ ಊರಿಮಜಲು ರಾಮ್ ಭಟ್ ರವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ವೇದಿಕೆಯಲ್ಲಿ ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರು,ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಬಿ.ಜೆ.ಪಿ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಉಪಾದ್ಯಕ್ಷರಾದ ಬೂಡಿಯಾರ್ ರಾಧಾಕೃಷ್ಣ ರೈ, ಬಿ.ಜೆ.ಪಿ ಪ್ರಭಾರಿ ಭಾರತೀಶ್ ಕೊಡಗು ರವರು ಉಪಸ್ಥಿತರಿದ್ದರು.ಬಿ.ಜೆ.ಪಿ ಸುಳ್ಯ ಮಂಡಲಧ್ಯಕ್ಷರಾದ ಹರೀಶ್ ಕಂಜಿಪಿಲಿ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು , ಸುಳ್ಯ ಮಂಡಲ ಬಿ.ಜೆ .ಪಿ ಪ್ರದಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಲಕ್ಷೀ ನಾರಾಯಣ ರಾವ್ ಕಾರ್ಯಕ್ರಮ ನಿರೂಪಿಸಿ, ಶೀನಪ್ಪ ಶೆಟ್ಟಿ ಪ್ರಾರ್ಥಿಸಿ , ಗಣೇಶ್ ಉದನಡ್ಕ ಧನ್ಯವಾದ ಸಮರ್ಪಿಸಿದರು.ಬಿ.ಜೆ.ಪಿ ಜಿಲ್ಲಾ, ಮಂಡಲ, ಮಹಾಶಕ್ತಿ, ಶಕ್ತಿ ಕೇಂದ್ರದ ಪ್ರಮುಖರು ಕಾರ್ಯಕ್ರಮದಲ್ಲಿ ಸಹಕರಿಸಿದರು. ಕೊಯಿಲ,ಸವಣೂರು ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ ಬಿ.ಜೆ.ಪಿ ಬೆಂಬಲಿತ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗು ಪ್ರಮುಖರು ಉಪಸ್ಥಿತರಿದ್ದರು.ಕಾರ್ಯಕ್ರಮಕ್ಕಿಂತ ಮೊದಲು ಚುನಾವಣಾ ಪ್ರಾತ್ಯಕ್ಷತೆ ನಡೆಯಿತು.

 

ಕಾರ್ಯಕ್ರಮಕ್ಕಿಂತ ಮೊದಲು ಕೋಟ ಶ್ರೀನಿವಾಸ ಪೂಜಾರಿಯವರು ಶ್ರೀ ಕ್ಷೇತ್ರ ಶರವೂರು ದುರ್ಗಾ ಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು , ಸದಸ್ಯರು ಹಾಗೂ ಸಿಬ್ಬಂದಿಗಳು ಸ್ವಾಗತಿಸಿದರು ಹಾಗೂ ಬಿ.ಜೆ.ಪಿ ಪ್ರಮುಖರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.